ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಹೆಮ್ಮಕ್ಕಿ ಗ್ರಾಮದ ಅನಧಿಕೃತ ಕಳ್ಳಭಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದ್ದಾರೆ.
ಸ್ಥಳದಲ್ಲಿ 5 ಲೀಟರ್ ಕಳ್ಳಭಟ್ಟಿ ಹಾಗೂ ಕಳ್ಳಬಟ್ಟಿ ತಯಾರಿಸಲು ಬೇಕಾಗುವ ಉಪಕರಣ ಮತ್ತು ಒಂದು ಬೈಕನ್ನು ಸಹ ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಆರೋಪಿಯಾದ ಮೈನಾ ಕೂಡಲೇ ಕಾಲುಕಿತ್ತಿದ್ದು, ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಅಪೂರ್ವ, ಕಾನ್ಸ್‌ಟೇಬಲ್ ಗಳಾದ ಮಲ್ಲಪ್ಪ, ರಮೇಶ್ ಹಾಗೂ ವಾಹನದ ಚಾಲಕ ಸತೀಶ್ ಇದ್ದರು.

























Discussion about this post