ಹುಬ್ಬಳ್ಳಿ: ವೇಗ ಅಪಘಾತಕ್ಕೆ ಆಹ್ವಾನ ಎಂದು ಗೊತ್ತಿದ್ದರೂ ಸಹ ಯುವಕರಿಗೆ ವೇಗದ ಷೋಕಿ ಹೋಗುವುದಿಲ್ಲ. ವೇಗವಾಗಿ ಹೋಗುತ್ತಿದ್ದ ಧ್ವಿಚಕ್ರವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಬುಧವಾರ ರಾತ್ರಿ ನಗರದ ಕಡೆಯಿಂದ ವೇಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ್ದು, ರಸ್ತೆಯ ಮೇಲೆ ಅಪ್ಪಳಿಸಿದ ಕಾರಣ ಸ್ಥಳದಲ್ಲೇ ತೀವ್ರ ರಕ್ತಸ್ರಾವ ಉಂಟಾಗಿದ್ದು, ಇಬ್ಬರೂ ಸಹ ಸಾವಿಗೀಡಾಗಿದ್ದಾರೆ.
ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಯುವಕರನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ್ದರೂ ಸಹ ಜೀವ ಉಳಿಸಲು ಸಾಧ್ಯವಾಗಿಲ್ಲ. ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

























Discussion about this post