ಶಿವಮೊಗ್ಗ: ಯುವಕನೊರ್ವ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಸ್ನೇಹ ಬೆಳೆಸಿ ಕಾಡಿಗೆ ಕರೆದೊಯ್ದಿದ್ದ. ಆಕೆಗೆ ಪೊಪೊಸಲ್ ಮಾಡಿದಾಗ ಒಪ್ಪಲಿಲ್ಲ ಎಂದ ಕಾರಣಕ್ಕೆ, ಅವಳು ಧರಿಸಿದ್ದ ಚೂಡಿದಾರ್ ದುಪ್ಪಟ್ಟಾದಿಂದ ಕತ್ತು ಬಿಗಿದು ಕೊಂದಿದ್ದಾನೆ.
ಈ ಕೃತ್ಯ ಬಯಲಾಗಿದ್ದು, ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಯುವತಿಯ ತಂದೆ-ತಾಯಿ ನಗರದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣುತ್ತಿಲ್ಲ ಎಂದು ದೂರು ದಾಖಲಿಸಿದ ನಂತರ. ಯುವತಿ ಕೊಲೆ ಮಾಡಿದ ನಂತರ ಶಿವಮೂರ್ತಿ (೨೨) ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬದುಕುಳಿದಿರುವ ಆತ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊಸನಗರ ತಾಲ್ಲೂಕಿನ ತಳಲೆ ಗ್ರಾಮದವನಾದ ಶಿವಮೂರ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣ ಕುರಿತು ರಿಪ್ಪನ್ ಪೇಟೆ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲೆ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

























Discussion about this post