ಚಿಕ್ಕಮಗಳೂರು: ಜಿಲ್ಲಾ ಪೊಲೀಸರು ರಾಜ್ಯ ವಿವಿಧ ಭಾಗದಲ್ಲಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದರ ಮೇಲೆ ದಾಳಿ ನಡೆಸಿರುವ ಒಂದು ಕ್ವಿಂಟಲ್‌ಗೂ ಹೆಚ್ಚು ತೂಕದ ಒಣ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಒಟ್ಟು 102 ಕೆಜಿ ಒಣ ಗಾಂಜಾ ದಾಳಿ ವೇಳೆ ಪತ್ತೆಯಾಗಿದ್ದು, ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಇಷ್ಟು ದೊಡ್ಡಮಟ್ಟದ ಕಾರ್ಯಾಚರಣೆ ಇದಾಗಿದೆ.
ತಾಲ್ಲೂಕಿನ ಕರ್ತಿಕೆರೆ ಬಳಿ ಘಟನೆ ನಡೆದಿದ್ದು, ಗಾಂಜಾ ಸಾಗಿಸುತ್ತಿದ್ದ ವಾಹನದ ಮೇಲೆ ಅಇಓ ಪೊಲೀಸರು ದಾಳಿ ನಡೆಸಿ ಅಇಓ ಇನ್ಸ್ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಖರೀದಿ ಮಾಡಿ ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಿಗೆ ತಮ್ಮ ತಂಡದ ಮೂಲಕ ಪೂರೈಕೆ ಮಾಡುತ್ತಿದ್ದರು, ಈ ಗುಂಪು ತರಕಾರಿ ಗಾಡಿಯಲ್ಲಿ ಗಾಂಜಾ ಸಾಗಣೆ ಮಾಡುವ ಮೂಲಕ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು.
ತರಕಾರಿ ಗಾಡಿಯಲ್ಲಿ ಒಂದು ಕ್ವಿಂಟಲ್‌ಗೂ ಅಧಿಕ ಗಾಂಜಾ ಸಾಗಿಸುತ್ತಿದ್ದ ವಿಚಾರ ಮಲೆನಾಡಿಗರನ್ನೂ ಸೇರಿಸಿದಂತೆ ಇಡೀ ರಾಜ್ಯದ ಜನತೆಯನ್ನೇ ಅಚ್ಚರಿಗೆ ನೂಕಿದ್ದು, ಇಷ್ಟು ದೊಡ್ಡ ಪ್ರಮಾಣದ ಗಾಂಜಾ ಸಾಗಣೆಯಾಗುತ್ತಿದೆ ಎಂದರೆ ಸದರಿ ಜಾಲ ಎಷ್ಟು ವರ್ಷಗಳಿಂದ ಸಕ್ರಿಯವಾಗಿದ್ದಿರಬಹುದು ಎಂಬ ಅನುಮಾನ ಹುಟ್ಟುಹಾಕಿಸಿದೆ.

























Discussion about this post