ಲಕ್ನೋ: ದೆಹಲಿ, ಉತ್ತರ ಪ್ರದೇಶದಲ್ಲಿ ನಿರಂತರ ಮಳೆಯ ಹಾವಳಿ ನಡೆದೇ ಇದ್ದು, ಜನರಿಗೆ ಸಾಕಷ್ಟು ಸಂಕಷ್ಟು ಇದಿರಾಗಿದೆ. ಗಾಜಿಯಾಬಾದ್ ನಲ್ಲಿ ಇದೇ ಸಂದರ್ಭ ಕುಟುಂಬವೊಂದು ವಿದ್ಯುತ್ ಕಂಬ ಮುಟ್ಟಿ ಸಾವಿಗೀಡಾಗಿರುವ ದುರ್ಘಟನೆ ನಡೆದಿದೆ.
ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಜಿಯಾಬಾದ್ ನ ರಾಕೇಶ್ ಮಾರ್ಗ್ ಪ್ರದೇಶದಲ್ಲಿ ಮಳೆ ಸುರಿಯುವಾಗ, ಅಂಗಡಿ ಮುಂದಿನ ಕಂಬದಲ್ಲಿ ಕರೆಂಟ್ ಹೊಡೆದಿದೆ. ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ವ್ಯಕ್ತಿ ಅಕಸ್ಮಾತ್ ಕಂಬ ಮುಟ್ಟಿದಾಗ ಸ್ಥಳದಲ್ಲೇ ಇಬ್ಬರು ಮೃತರಾಗಿದ್ದು
ಅವರನ್ನು ಕಂಡು ಮತ್ತೊಬ್ಬ ವ್ಯಕ್ತಿ ರಕ್ಷಿಸಲು ಹೋಗಿ ಮುಟ್ಟಿದ್ದಾನೆ, ಆತನೂ ಸತ್ತುಹೋಗಿದ್ದಾನೆ, ಅವರನ್ನೆಲ್ಲಾ ನೋಡಿ ಓರ್ವ ಮಹಿಳೆ ಸೇರಿ ಮತ್ತಿಬ್ಬರು ರಕ್ಷಣಾ ಕಾರ್ಯ ಮಾಡಲು ಹೋಗಿ ಸೂಕ್ತ ಕ್ರಮ ಅನುಸರಿಸದೆ ಸಾವಿಗೀಡಾದ ದೃಶ್ಯಗಳು ಈಗ ವೈರಲ್ ಆಗಿದೆ. ನಿಜಕ್ಕೂ ಇಂಥಾ ಘಟನೆಗಳು ಸಿನಿಮೀಯ ರೀತಿಯಲ್ಲಿ ನಡೆದರೂ ಹೃದಯ ಹಿಂಡುತ್ತವೆ.

























Discussion about this post