ಉಳ್ಳಾಲ: ತಂದೆಗೆ ಪರಿಚಿತನಾಗಿದ್ದ ಆರೀಫ್ ಪಾಷಾ (೩೦) ತಿನ್ನಲು ಚಿಕ್ಕನ್ ಕೊಡಿಸುವೆ ಎಂದು ಅಪ್ರಾಪ್ತ ಬಾಲಕಿಗೆ ನಂಬಿಸಿ, ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆತಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಬಾಲಕಿ ಈತನ ಕೃತ್ಯದಿಂದ ಹೆದರಿ ಓಡಿ ತಪ್ಪಿಸಿಕೊಂಡಿದ್ದಾಳೆ. ಅದೇ ದಾರಿಯಲ್ಲಿ ಬಂದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ದಂಪತಿ ಬೈಕ್ ನಿಲ್ಲಿಸಿ ಬಾಲಕಿಯೊಂದಿಗೆ ಮಾತನಾಡಿಸಿದ ವೇಳೆ ಸತ್ಯಾಂಶ ಹೊರಬಂದಿದೆ.
ಸ್ಥಳೀಯರಿಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತ, ಆರಿಫ್ ಪಾಷಾನನ್ನು ಹಿಡಿದಿದ್ದು, ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಕ್ಸೊ (POCSO) ಕಾಯ್ದೆಯಡೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಮೂಲತಃ ಬೆಂಗಳೂರಿನ ಕಲಾಸಿ ಪಾಳ್ಯದ ನಿವಾಸಿಯಾಗಿದ್ದು, ಸದ್ಯ ಕಲ್ಕಟ್ಟದಲ್ಲಿ ವಾಸವಿದ್ದು ಕೂಲಿ ಮಾಡಿಕೊಂಡಿದ್ದ ಎನ್ನಲಾಗಿದೆ.

























Discussion about this post