ಜಾರ್ಖಂಡ್: ಊಟ ತನಗೆ ಕೊಡಲು ನಿಧಾನ ಮಾಡಿದಳೆಂದು ಇಲ್ಲೊಬ್ಬ ೭೦ ವರ್ಷದ ಗಂಡ ತನ್ನ ಪತ್ನಿಯನ್ನೇ ಕ್ರೂರವಾಗಿ ಹಲ್ಲೆ ನಡೆಸಿ, ಕೈಮುಗಿದರೂ ಬಿಡದೆ ಹತ್ಯೆ ನಡೆಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಂಡ್ ನ ಕುಂತಿ ಜಿಲ್ಲೆಯ ಕುಲಾಮತಿ ಹಳ್ಳಿಯಲ್ಲಿ ಮನೆಯಲ್ಲಿಯೇ ಇದ್ದ ಈತ ರಾತ್ರಿ ಅಡುಗೆ ಮಾಡುವಂತೆ ಪತ್ನಿಗೆ ಹೇಳಿದ್ದ. ಆಕೆ ಅಡುಗೆ ಬೇಗನೇ ಮಾಡಿದ್ದರೂ ಸಹಿತ ಬಡಿಸಲು ಸಮಯ ತೆಗೆದುಕೊಂಡಿದ್ದಾಳೆ. ಇದೇ ವೇಳೆ ಗಂಡ ಆದ ಭೂಪ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದ. ಆಕೆ ಕುಸಿದು ಬಿದ್ದಿದ್ದಳು.
ರಕ್ತ ಸಿಕ್ತವಾದ ಆಕೆ ಎಷ್ಟೇ ಬೇಡಿಕೊಂಡರೂ ಬಿಡದೆ ಆಕೆಯನ್ನು ಕೊಲೆ ಮಾಡಿ, ರಾತ್ರಿ ಇಡೀ ಸಮಯ ಆಕೆಯ ಶವದೊಂದಿಗೆ ನಿದ್ದೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ನಡೆಯುವ ಮೊದಲು ಗಂಡ-ಹೆಂಡತಿ ಮಧ್ಯಪಾನ ಸೇವಿಸಿದ್ದರು ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

























Discussion about this post