ಒಡಿಶಾ: ದೇಶದಲ್ಲಿ ಮಾದಕ ವಸ್ತುಗಳ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಕಲ್ಲಿದ್ದಲಿನ ಟ್ರಕ್ ಒಂದರಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಒಡಿಶಾದ ಮಲ್ಕನ್ಗಿರಿಯಲ್ಲಿ ನಡೆದಿದೆ.
ಟ್ರಕ್ನಲ್ಲಿ ಕಲ್ಲಿದ್ದಲಿನ ಜತೆ ಆರೋಪಿಗಳು ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿಗಳಿಂದ 2.25 ಕೋಟಿ ರೂಪಾಯಿ ಮೌಲ್ಯದ 2,256 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಡಿಶಾ ರಾಜ್ಯದ ಚಿತ್ರಕೊಂಡದಿಂದ ಚತ್ತೀಸ್ಗಡದ ರಾಯ್ಪುರ್ಗೆ ಗಾಂಜಾವನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಚಿತ್ರಕೊಂಡ ಎಸ್ಡಿಪಿಒ (SDPO) ಅಂಶುಮನ್ ದ್ವಿವೇದಿ twitter ನ ಮೂಲಕ ತಿಳಿಸಿದ್ದಾರೆ.

























Discussion about this post