ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ಮೇಲ ಗೂಂಡಾಗಿರಿ ನಡೆಸಿದ ಆರೋಪದ ಮೇಲೆ ಐವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ಅನ್ಯಕೋಮಿನ ವಿದ್ಯಾರ್ಥಿಗಳ ಜೊತೆಗೆ ವಾಹನದಲ್ಲಿ ಹಿರೇಕೊಳಲೆ ತೆರಳಿ,ಅಲ್ಲಿಂದ ಮುಳ್ಳಯ್ಯನ ಗಿರಿ ಗೆ ಹೋಗುವಾಗ ಈ ಘಟನೆ ನಡೆದಿದೆ.
ಯುವಕರ ಗುಂಪು ಪುಂಡಾಟ ಮಾಡಿದ್ದು, ಹುಡುಗಿ ತನ್ನ ಸಹೋದರನ ಜೊತೆಗೆ ಹೋಗುತ್ತಿದ್ದರೂ ಸಹ ಕೇಳದೆ ಹುಡುಗಿಯರನ್ನು ಇಳಿಸಿ, ಹುಡುಗರಿಗೆ ಒದೆ ಕೊಟ್ಟಿದ್ದರು ಎನ್ನಲಾಗಿದೆ.
ಒದೆ ತಿಂದ ಹುಡುಗರು ಕೊಟ್ಟ ದೂರಿನ ಅನ್ವಯ ಸಂತೋಷ್ ಕೋಟ್ಯಾನ್ ಸೇರಿದಂತೆ ಐವರ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

























Discussion about this post