ಲಕ್ನೋ: ಬಿಟೆಕ್ ವಿದ್ಯಾರ್ಥಿಯ ಮೇಲೆ ಆಸಿಡ್ ಹಾಕಿದ್ದೇ ಅಲ್ಲದೆ, ಆಕೆಯ ಮುಖಕ್ಕೆ ಸುಮಾರು ೧೬ ಕಡೆ ಬೀಕರ ಹಲ್ಲೆ ನಡೆಸಿ ಚುಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.
ಘಟನೆ ವಿವರ: ಬಿಟೆಕ್ ಓದುತ್ತಿದ್ದ ವಿದ್ಯಾರ್ಥಿಯ ಶವ ಇತ್ತೀಚೆಗೆ ಪತ್ತೆಯಾಗಿದ್ದು, ಮುಖ, ದೇಹವೆಲ್ಲಾ ಅರೆಸುಟ್ಟ ಸ್ಥಿತಿಯಲ್ಲಿತ್ತು. ಪೊಸ್ಟ್ ಮಾರ್ಟಂ ವರದಿಯಲ್ಲಿ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ವೈದ್ಯರ ವರದಿ ಪ್ರಕಾರ, ಆತನ ದೇಹದ ಸುಮಾರು ೧೬ ಕಡೆಗಳಲ್ಲಿ ಚೂರಿ ಇರಿತದ ಗಾಯಗಳಿದೆ. ಹೊಟ್ಟೆಯಲ್ಲಿ ಗ್ಲಾಸ್ ಚೂರುಗಳು ಚಿಕ್ಕಿದ್ದು, ಬಾಟಲಿ ಹೊಡೆದು ಇರಿದಿರುವ ಬಗ್ಗೆ ಸಹ ಶಂಕೆ ವ್ಯಕ್ತವಾಗಿದೆ.
ಕೊಲೆಯಾದ ವಿದ್ಯಾರ್ಥಿಯನ್ನು ಸುಧೀರ್ ಸೈನಿ (೨೩) ಎಂದು ಗುರುತಿಸಲಾಗಿದೆ. ಆತನಿಗೆ ಸಹಪಾಟಿಯೊಬ್ಬಳ ಜೊತೆಗೆ ಪ್ರೀತಿ ಇತ್ತು ಎನ್ನಲಾಗಿದೆ. ಆಕೆಯ ಜೊತೆಗೆ ಮಾತನಾಡಲು ಮೊರದಾಬಾದ್ ಜಿಲ್ಲೆಯ ಮಜೋಲಾ ಎಂಬಲ್ಲಿಗೆ ತೆರಳಿದ್ದ ಸಂದರ್ಭ ಸಂಬಂಧಿಕರಿಂದ ಹಲ್ಲೆ ನಡೆದಿತ್ತು ಎನ್ನಲಾಗಿದ್ದು, ಆನಂತರ ಯುವಕನ ಶವವು ಮುಂಧಾ ಪಾಂಡೆ ಎಂಬ ಸ್ಥಳದಲ್ಲಿ ಪತ್ತೆಯಾಗಿತ್ತು.
ಕೊಲೆಗೂ ಮೊದಲು ವಿವಿಧ ರೀತಿಯಲ್ಲಿ ದೈಹಿಕ ಹಿಂಸೆ ನೀಡಿರುವುದರ ಕುರುಹುಗಳನ್ನು ಕಾಣಬಹುದಾಗಿದೆ. ಮುಖ ಪುರ್ತಿ ಸುಟ್ಟಿದ್ದು, ಗುರುತು ಹಚ್ಚಲು ಸಾಧ್ಯವಾಗಿರುವುದಿಲ್ಲ.
ಜೇಬಿನ ಐಡಿ ಕಾರ್ಡ್ ನಿಂದ ಪತ್ತೆ ಕಾರ್ಯ ಯಶಸ್ವಿಯಾಗಿತ್ತು. ಬರೀಲಿ ನಿವಾಸಿ ಸುಧೀರ್ ಸೈನಿ ಕಾಲೇಜಿಗೆ ಹೋದವನು ನಾಪತ್ತೆಯಾಗಿದ್ದ ಎಂದು ಹೆತ್ತವರೇ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

























Discussion about this post