ಬೆಂಗಳೂರು: ತನ್ನ ಲವರ್ ಗೆ ಇನ್ ಸ್ಟಾಗ್ರಾಮ್ ನಲ್ಲಿ ಮೆಸೇಜ್ ಹಾಕಿದ್ದ ಹುಡುಗನ ಕೊಲೆಗೆ ಸ್ಕೆಚ್ ಹಾಕಿ, ಅವನ ಜೊತೆಗೆ ಬಂದಿದ್ದವನನ್ನು ಕೊಚ್ಚಿ ಹೋಗಿರುವ ದುರ್ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಹುಡುಗಿಗೆ ಮೆಸೇಜ್ ಹಾಕಿ, ಅದನ್ನ ಟ್ರೋಲ್ ಮಾಡಿದ್ದ ಹುಡುಗನ ಕೊಲೆಗೆ ಸ್ಕೆಚ್ ಹಾಕಿಕೊಂಡು ರಾಜಿ ಮಾತುಕತೆಗೆ ಕರೆದು ಆತನು ಬಂದಾಗ ಅವನ ಸ್ನೇಹಿತನ ತಲೆ ಮತ್ತು ಹೊಟ್ಟೇ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ.
ಘಟನೆ ವಿವರ: ನವೀನ್ ಎಂಬಾತ ಇನ್ ಸ್ಟಾಗಾಮ್ ನಲ್ಲಿ ಹುಡುಗಿಗೆ ಮೆಸೇಜ್ ಹಾಕಿದ್ದ. ಇದು ತಿಳಿದ ಹುಡುಗಿ ಲವ್ವರ್ ಪ್ರಜ್ವಲ್ ನವೀನ್ ಗೆ ಕರೆ ಮಾಡಿ ಫೋನ್ ನಲ್ಲೇ ಎಚ್ಚರಿಕೆ ನೀಡಿದ್ದ. ಇದಾದ ಮೇಲೆ ಟ್ರೋಲರ್ ಗಳು ಟ್ರೋಲ್ ಪೇಜ್ ನಲ್ಲಿ ಯುವತಿಯನ್ನ ಟ್ರೋಲ್ ಮಾಡಿದ್ದರು.
ಇನ್ ಸ್ಟಾಗ್ರಾಮ್ ನವೀನ್ ಟ್ರೋಲ್ ಮಾಡಿರೋದು ಎಂದು ತಿಳಿದ ಲವ್ವರ್ ಪ್ರಜ್ವಲ್ ಆತನ ಕೊಲೆಗೆ ಸಿದ್ದವಾಗಿದ್ದ. ಇದರ ಪ್ಲಾನ್ ನಲ್ಲೇ ಆತನನ್ನು ಕರೆಸಿಕೊಂಡಿದ್ದರು. ಮಾಚೋಹಳ್ಳಿ ಕಾಮತ್ ಲೇ ಔಟ್ ನ ಒಂದು ಸ್ಥಳಕ್ಕೆ ಬಂದಿದ್ದ ಇನ್ ಸ್ಟಾಗ್ರಾಮ್ ನವೀನ್ ಒಬ್ಬಂಟಿಯಾಗಿ ಹೋಗದೆ, ಅವನ ಸ್ನೇಹಿತನನ್ನು ಕರೆದೊಯ್ದಿದ್ದ.
ನವೀನ್ ಎಂದುಕೊಂಡು ಪ್ರಜ್ವಲ್ ತಂಡದವರು ತಂದಿದ್ದ ಲಾಂಗ್, ಮಚ್ಚುಗಳಿಂದ ನವೀನ್ ಗೆಳೆಯ ಹರೀಶ್ ಅಲಿಯಾಸ್ ಅಮಾಸೆ ಮೇಲೆ ದಾಳಿ ನಡೆಸಿ ಕೊಚ್ಚಿದ್ದಾರೆ. ಘಟನೆ ಸಂಬಂಧ ಇನ್ಸ್ ಪೆಕ್ಟರ್ ಮಂಜುನಾಥ್ ಮತ್ತು ತಂಡವು ಪ್ರಜ್ವಲ್ ಅಲಿಯಾಸ್ ಕಪ್ಪೆ ಕಿರಣ ಅಲಿಯಾಸ್ ವಾಲೆ, ಮನೋಜ್, ಮೂರ್ತಿ, ಸಂದೀಪ್ ನನ್ನು ಬಂಧಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಯುವರಾಜ ಅಲಿಯಾಸ್ ನಾಯಿ, ದರ್ಶನ್, ಕುಮಾರ್ ಗಾಗಿ ತೀವ್ರ ಶೋಧ ನಡೆದಿದೆ.

























Discussion about this post