ಬೀರೂರು: ಮಗಳನ್ನು ತಂದೆಯೇ ವೇಲ್ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ನಗರದ ಹೊರವಲಯದ ರೈಲ್ವೇ ಗೇಟ್ ಬಳಿಯ ಇರುವತಂಹ ಟ್ರಾಕ್ಟರ ನಿಂದ ನಿರ್ಮಿತವಾದ ಗುಂಡಿಯಲ್ಲಿ ಮೃತದೇಹವನ್ನು ಬಿಸಡಿ ಹೋಗಿರುವ ಘಟನೆ ವರದಿಯಾಗಿದೆ.
ಪಟ್ಟಣದಲ್ಲಿ ಹೊರವಲಯದಲ್ಲಿ ಹಾದು ಹೋಗುವ ಬಿ.ಹೆಚ್.ರಸ್ತೆಯ ರೈಲ್ವೇ ಗೇಟ್ ಬಳಿ ನಿನ್ನೆ ಈ ಘಟನೆ ನಡೆದಿದ್ದು.
ಮೃತ ಯುವತಿಯನ್ನು ರಾಧಾ(18ವರ್ಷ) ಎಂದು ಗುರುತ್ತಿಸಲಾಗಿದೆ. ತಂದೆ ಹಾಗೂ ಮೃತ ಯುವತಿ ಮೂಲತಃ ಶಿಕಾರಿಪುರ ತಾಲ್ಲೂಕಿನ ಕೆಂಚನಕೊಪ್ಪ ಗ್ರಾಮದವರು, ಆರೋಪಿ ತಂದೆಯು ಚಂದ್ರಪ್ಪಯಾಗಿದ್ದನೆ.
ಮೃತ ರಾಧ ತಮ್ಮದೇ ಊರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು ಇದು ಮನೆಯವರಿಗೆ ಇಷ್ಟ ಇರಲಿಲ್ಲ,
ಆ ಯುವಕ ನಿಂದ ದೂರ ಇರುವಂತೆ ಮನೆಯವರು ಅನೇಕ ಭಾರಿ ಎಚ್ಚರಿಸಿದ್ದರೂ ಆದರೂ ರಾಧಾ ಯುವಕ ನೊಂದಿಗೆ ಪ್ರೇಮವನ್ನು ಮುಂದುವರೆಸಿ ಅವನನ್ನೆ ವಿವಾಹವಾಗುವೆನೆಂದು ಹಠಕ್ಕೆ ಬಿದ್ದಿದ್ದಾಳೆ.
ಚಂದ್ರಪ್ಪ ಯೋಚಿಸಿ ಯುವತಿಯು ಹುಡುಗನಿಂದ ಸ್ವಲ್ಪ ದಿನ ದೂರವಾದರೆ ಮರೆಸಬಹುದು ಎಂದು ಚನ್ನಗಿರಿಯ ತನ್ನ ಅಕ್ಕನ ಮನೆಗೆ ರಾಧಾಳನ್ನು ಬಿಟ್ಟು ಬಂದಿದ್ದರು. ಅದರೆ ಊರಿನಲ್ಲಿ ಹಬ್ಬವಿದ್ದ ಕಾರಣ ಬುಧವಾರ ದ್ವಿಚಕ್ರ ವಾಹನದಲ್ಲಿ ವಾಪಾಸ್ಸು ಕರೆದುಕೊಂಡು ಬರುವಾಗ ಮಗಳಿಗೆ ರಸ್ತೆಯಲ್ಲಿ ಬುದ್ದಿ ವಾದ ಹೇಳುತ್ತಾ ಬಂದಿದ್ದಾರೆ.
ಅದಕ್ಕೆ ಮಗಳು ತಂದೆಯ ಮಾತಿಗೆ ಆಗುವುದಿಲ್ಲ ತಾನು ಅವನನ್ನೆ ಮದುವೆಯಾಗುವೆನೆಂದು ವಾದಿಸಿದ್ದು,
ಇದರಿಂದ ಕೋಪಗೊಂಡ ಚಂದ್ರಪ್ಪ ಬೀರೂರು ಮಾರ್ಗವಾಗಿ ಊರಿಗೆ ಬರುತ್ತಿದ್ದಾಗ ಹೊರವಲಯದ ರೈಲ್ವೇ ಗೇಟ್ ಬಳಿಯಲ್ಲಿ ಜನ ಓಡಾಟವಿಲ್ಲದ ಸ್ಥಳದಲ್ಲಿ ರಾಧಳ ಧರಿಸಿದ್ದ ವೇಲನೇ ಬಳಸಿಕೊಂಡು ಕುತ್ತಿಗೆ ಬಿಗಿದಿದ್ದಾನೆ. ವೇಲು ಬಿಗಿತ್ತದಿಂದ ರಾಧ ಸ್ಥಳದಲ್ಲಿ ಮೃತಪಟ್ಟಿದ್ದು,
ಮೃತಪಟ್ಟಿರುವುದನ್ನು ಖಾತ್ರಿ ಪಡಿಸಿಕೊಂಡ ಚಂದ್ರಪ್ಪ ಟ್ರಾಕ್ಟರ್ ಜಾಡಿನಿಂದ ಉಂಟಾಗಿದ್ದ ಗುಂಡಿಯಲ್ಲಿ ರಾಧಳ ಶವ ಎಸೆದು ತನ್ನ ಊರದ ಕೆಂಚಿಗನಹಳ್ಳಿಗೆ ತೆರಳಿದ್ದಾನೆ. ಮೃತದೇಹ ಬಿದ್ದಿರುವ ಮಾಹಿತಿ ತಿಳಿದ ಬೀರೂರು ಪೊಲೀಸರು ಪ್ರಕರಣ ದಾಖಲಿಸಿದ್ದು ಮಾಹಿತಿ ಕಲೆಹಾಕಿ ತಲೆ ಮರೆಸಿಕೊಂಡಿರುವ ಆರೋಪಿ ಚಂದ್ರಪ್ಪನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: e Paper – October 29, 2021
ಇದನ್ನೂ ಓದಿ: Tiger nail: ಹುಲಿ ಉಗುರು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ ಇನ್ನೊಬ್ಬ ಪರಾರಿ !

























Discussion about this post