ಮುಂಬೈ: ಮಗನಿಗೆ ಜಾಮೀನು ದೊರೆಯದ ಕಾರಣ ಶಾರುಖ್ ಖಾನ್ ಕಳೆದ ಮೂರು ನಾಲ್ಕು ದಿನಗಳಿಂದ ಸರಿಯಾಗಿ ನಿದ್ದೆಯೂ ಮಾಡದೆ, ಊಟವನ್ನೂ ಮಾಡಿರಲಿಲ್ಲವಂತೆ. ಆರ್ಯನ್ ಖಾನ್ ಗೆ ಗುರುವಾರ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ತಕ್ಷಣ, ಶಾರುಖ್ ಖಾನ್ ಕಣ್ಣಲ್ಲಿ ಆನಂದಭಾಷ್ಪ ಹರಿದು ಹೋಯಿತು ಎಂದು ಆರ್ಯನ್ ಪರ ವಕೀಲ, ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹೇಳಿದ್ದಾರೆ.
ಡ್ರಗ್ ಸೇವನೆ ಪ್ರಕರಣದಲ್ಲಿ ಬಂಧಿಯಾಗಿದ್ದ ಆರ್ಯನ್, ಇತರ ಸಹ ಆರೋಪಿಗಳಾದ ಆರ್ಬಾಸ್ ಮರ್ಚೆಂಟ್ ಮತ್ತು ಮುನಮನ್ ದಾನೇಚ ಅವರುಗಳಿಗೆ ಕಳೆದ ಬುಧವಾರ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆ ನಂತರ ವಿಶೇಷ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ, ಮುಂಬೈ ಹೈ ಕೋರ್ಟಿಗೆ ಆರೋಪಿಗಳು ಅರ್ಜಿ ಸಲ್ಲಿಸಿದರುದ. 25 ದಿನಗಳ ನಂತರ ಆರ್ಯನ್ ಮನವಿ ಮನ್ನಿಸಿದ ನ್ಯಾಯಾಲಯ ಗುರುವಾರ ಜಾಮೀನು ನೀಡಿತು.
ಶಾರುಖ್ ಖಾನ್ ಕಳೆದ ಮೂರು ನಾಲ್ಕು ದಿನಗಳಿಂದ ಮಗನ ವಿಚಾರವಾಗಿ ಬಹಳ ತಲೆಕೆಡಿಸಿಕೊಂಡಿದ್ದರು. ಅವರು ಸರಿಯಾಗಿ ಊಟ ತಿಂಡಿ ಮಾಡುತ್ತಿರಲಿಲ್ಲ ಅನ್ನೋ ಅನುಮಾನವಿದೆ. ಬರೀ ಕಾಫಿ, ಕಾಫಿ ಅಂತ ಕುಡಿಯತ್ತಲೇ ಇರುತ್ತಿದ್ದರು. ಜಾಮೀನು ದೊರೆತ ನಂತರ ಅವರು ಮುಖದಲ್ಲಿ ದೊಡ್ಡ ನಿರಾಳ ಕಂಡಿದೆ ಎಂದು ರೋಟಗಿ ಖಾಸಗಿ ಸುದ್ದಿವಾಹಿನಿಗೆ ಹೇಳಿದ್ದಾರೆ.
ಜಾಮೀನು ದೊರೆತ ನಂತರ ಶಾರುಖ್ ಖಾನ್ ಗೆ ಅಭಿನಂದನೆಯ ಸುರಿಮಳೆ ಆರಂಭವಾಗಿದೆ. ನಟ ಸಲ್ಮಾನ್ ಖಾನ್, ಸುನೀಲ್ ಶೆಟ್ಟಿ, ಅಕ್ಷಯ್ ಕುಮಾರ್ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಶಾರುಖ್ ಖಾನ್ ಪತ್ನಿ ಗೌರಿ, ತನ್ನ ಗೆಳೆಯತಿಯರಾದ ಮಹೀಪ್ ಕಪೂರ್, ಸೀಮಾಖಾನ್ ಜೊತೆ ದೂರವಾಣಿ ಸಂಭಾಷಮೆ ಮಾಡುವಾಗೆಲ್ಲಾ ಅಳುತ್ತಿದ್ದರು. ಜಾಮೀನು ದೊರೆತ ಸುದ್ದಿ ಹೊರಬರುತ್ತಿರುವಂತೆ ಆಕೆ ಜೋರಾಗಿ ಅತ್ತು ಸಮಾಧಾನ ಮಾಡಿಕೊಂಡರು ಎಂದು ಜಾಲತಾಣವೊಂದು ವರದಿ ಮಾಡಿದೆ.
Shah Rukh Khan Cried when son Aryan got bail
























Discussion about this post