ಇಸ್ಲಾಮಾಬಾದ್: ಬ್ಯಾಟ್ಸ್‌ಮನ್ ಆಗಿ ಇನ್ನಷ್ಟು ಯಶಸ್ಸು ಗಳಿಸುವ ದೃಷ್ಟಿಯಿಂದ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್ ನಾಯಕತ್ವ ತ್ಯಜಿಸುವುದು ಒಳಿತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರೀದಿ ಸಲಹೆ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ರೋಹಿತ್ ಶರ್ಮಾ ಅವರನ್ನು ಟ್ವೆಂಟಿ–2– ಕ್ರಿಕೆಟ್‌ಗೆ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರ ಸಮಂಜಸವಾದದ್ದು’ ಎಂದು ಹೇಳಿದ್ದಾರೆ.
‘ಕೊಹ್ಲಿ ಅವರು ಭಾರತೀಯ ಕ್ರಿಕೆಟ್‌ನ ಅದ್ಭುತ ಆಟಗಾರ. ಎಲ್ಲ ಮಾದರಿಯ ಕ್ರಿಕಟ್‌ನ ನಾಯಕತ್ವದಿಂದ ನಿವೃತ್ತರಾದರೆ ಬ್ಯಾಟಿಂಗ್ ದೃಷ್ಟಿಯಿಂದ ಬಹಳ ಒಳ್ಳೆಯದು’ ಎಂದು ಅಫ್ರೀದಿ ಹೇಳಿದ್ದಾರೆ.
ರೋಹಿತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅಫ್ರೀದಿ, ಅವರೊಬ್ಬ ಅದ್ಭುತ ಆಟಗಾರ. ಅಗತ್ಯವಿದ್ದಾಗ ರಿಲ್ಯಾಕ್ಸ್ ಆಗಿ ಹಾಗೂ ಬೇಕೆನಿಸಿದಾಗ ಆಕ್ರಮಣಕಾರಿಯಾಗಿ ಇರುವುದೂ ಅವರಿಗೆ ಗೊತ್ತಿದೆ. ಇದು ಅವರ ದೊಡ್ಡ ಸಕಾರಾತ್ಮಕ ಅಂಶ ಎಂದು ಹೇಳಿದ್ದಾರೆ.
ನಾಯಕನಾಗಿ ಜವಾಬ್ದಾರಿ ನಿರ್ವಹಿಸಲು ರೋಹಿತ್‌ಗೆ ಮಾನಸಿಕ ಶಕ್ತಿ ಇದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅವರ ನಾಯಕತ್ವದ ನಿರ್ವಹಣೆಯನ್ನು ನಾವು ನೋಡಬಹುದು. ಅವರೊಬ್ಬ ಅಗ್ರಮಾನ್ಯ ಆಟಗಾರ ಎಂದು ಅಫ್ರೀದಿ ಹೇಳಿದ್ದಾರೆ.
‘ಐಪಿಎಲ್ ಟೂರ್ನಿಯಲ್ಲಿ ‘ಡೆಕ್ಕನ್ ಚಾರ್ಜರ್ಸ್’ ತಂಡದಲ್ಲಿ ರೋಹಿತ್ ಜತೆ ಅಫ್ರೀದಿಯೂ ಒಂದು ವರ್ಷ ತಂಡದಲ್ಲಿದ್ದರು.
ಟ್ವೆಂಟಿ–20 ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದಲೂ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಅವರು ಅಲಭ್ಯರಾಗಿರುವುದರಿಂದ ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ಘೋಷಿಸಲಾಗಿದೆ. 2019ರಿಂದ ಕೊಹ್ಲಿ ಅವರಿಂದ ಒಂದೂ ಟೆಸ್ಟ್ ಶತಕ ದಾಖಲಾಗಿಲ್ಲ.
ಇನ್ನಷ್ಟು…
ರೋಹಿತ್ ಶರ್ಮಾ ಪೂರ್ಣಾವಧಿ ನಾಯಕರಾಗಲಿ ಎಂದ ಶಾಹೀದ್ ಅಫ್ರೀದಿ ಕೊಹ್ಲಿಗೆ ನೀಡಿದ ಸಲಹೆ ಏನು?
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ: ಟೀಂ ಇಂಡಿಯಾಕ್ಕೆ ಅಜಿಂಕ್ಯ ರಹಾನೆ ನಾಯಕ
Discussion about this post