ನಾಯಿ-ಮನುಷ್ಯನ ನಡುವಿನ ಅನುಬಂಧಕ್ಕೆ ನಮ್ಮಲ್ಲಿ ಸಾಕಷ್ಟು ದೃಷ್ಟಾಂತಗಳಿವೆ. ಮನುಷ್ಯನಿಗಿಂತ ನಾಯಿಗೇ ನಿಯತ್ತು ಜಾಸ್ತಿ ಅನ್ನೋ ಮಾತೇನು ಸುಳ್ಳಲ್ಲ ಬಿಡಿ. ನಾಯಿ ಕೂಡ ಹಾಗೇನೆ ಅನ್ನ ಹಾಕಿದವರನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ, ರಕ್ಷಿಸುವ ಪ್ರಸಂಗಗಳು ಬೇಕಾದಷ್ಟು ನಡೆದಿವೆ.
ಇಲ್ಲೊಂದು ಮನಕಲಕುವ ವೀಡಿಯೋ ಇದೆ. ಇದರಲ್ಲಿ ತನಗೆ ಊಟ ಹಾಕಿ ಸಲುಹಿದ ಮಾಲೀಕ ಬೋಟ್ ನಲ್ಲಿ ಪ್ರಯಾಣ ಮಾಡುತ್ತಿದ್ದರೆ, ತನ್ನನ್ನು ಬಿಟ್ಟು ಹೋಗಿದ್ದಕ್ಕೆ ನದಿಯ ದಂಡೆಯ ಮೇಲೆ ಓಡೋಡುತ್ತಾ ಹಿಂಬಾಲಿಸುವ ನಾಯಿಯನ್ನು ನೋಡುವುದೇ ಚಂದ. ಅದರ ಈ ನಿಯತ್ತಿಗೆ ಅಂತರ್ಜಾಲದಲ್ಲಿ ಮಹಾ ಪ್ರಶಂಸೆ ದೊರೆತಿದೆ.
ತನ್ನ ಬೋಟನ್ನು ಅಟ್ಟಿಸಿಕೊಂಡು ಬರುವ ನಾಯಿಯನ್ನು ನೋಡಿ, ಮಾಲೀಕ ಬೋಟ್ ಅನ್ನು ನದಿಯ ಒಂದು ಬದಿಗೆ ತಂದು ನಿಲ್ಲಿಸುತ್ತಾನೆ. ತಕ್ಷಣ ನಾಯಿ ಓಡಿಹೋಗಿ ತನ್ನ ಎರಡೂ ಕೈಗಳಿಂದ ನನ್ನ ಬಿಟ್ಟು ಹೋಗಿದ್ಯಾ ಅಂಥ ಬೋಟಿನಲ್ಲಿದ್ದ ಮಾಲೀಕನ ಮೇಲೆ ಹಾಕುತ್ತಾ, ಆತ ಪ್ರೀತಿ ಆದರದಿಂದ ಅಪ್ಪಿಕೊಂಡು ಕೂರುವ ದೃಶ್ಯ ಎಂಥವರನ್ನು ಮನಃ ಕಲಕಿಬಿಡುತ್ತದೆ.
ಇದನ್ನೂ ಓದಿ: ಪದ್ಮ ಪ್ರಶಸ್ತಿ ಸ್ವೀಕರಿಸಲು ಬಂದವರು, ರಾಷ್ಟ್ರಪತಿಗೆ ಆಶೀರ್ವಾದಿಸಿದ ಫೋಟೋ ವೈರಲ್
Discussion about this post