ಜೈಪುರ: ಬಾಲಿವುಡ್ ಖ್ಯಾತ ತಾರಾ ಜೋಡಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವಿವಾಹ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ಗುರುವಾರ ಅದ್ದೂರಿಯಾಗಿ ನಡೆದಿದೆ.
ಡಿಸೆಂಬರ್ 7ರಿಂದಲೇ ಆರಂಭವಾಗಿದ್ದ ವಿವಾಹಪೂರ್ವ ಕಾರ್ಯಕ್ರಮಗಳು ಹಾಗೂ 9ರಂದು ನಡೆದ ಮದುವೆಯಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರಷ್ಟೇ ಉಪಸ್ಥಿತರಿದ್ದರು.
ಮದುವೆ ಸಂಭ್ರಮದ ಬಗ್ಗೆ ಕತ್ರೀನಾ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿದ್ದು, ‘ನಮ್ಮ ಜೀವನದಲ್ಲಿ ಈ ಸುಂದರ ಕ್ಷಣ ಕೂಡಿಬರಲು ಕಾರಣರಾದವರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವಿರಲಿ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Katrina Kaif Vicky Kaushal: ಹೊಸಜೋಡಿಗೆ ಹರಸಲು ಬಂದ ಕತ್ರಿನಾ ಕೈಫ್ 3 ಅಕ್ಕಂದಿರು, 3 ತಂಗಿಯರು ಮತ್ತು ಓರ್ವ ಸೋದರ
ಕತ್ರೀನಾ–ಕೌಶಲ್ ಜೋಡಿಯ ವಿವಾಹ ಬಾಲಿವುಡ್‌ನಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ, ತೀರಾ ಖಾಸಗಿಯಾಗಿ ವಿವಾಹ ಕಾರ್ಯಕ್ರಮ ನಡೆದಿದೆ. ಹೀಗಾಗಿ, ಮದುವೆಗೆ ಆಹ್ವಾನ ಇರದ ಬಾಲಿವುಡ್‌ನ ಗಣ್ಯರು ಹಾಗೂ ಸಹೋದ್ಯೋಗಿಗಳಿಗಾಗಿ ಕತ್ರೀನಾ–ಕೌಶಲ್ ಜೋಡಿ ಶೀಘ್ರದಲ್ಲೇ ಮುಂಬೈಯಲ್ಲಿ ಔತಣಕೂಟ ಆಯೋಜಿಸಲಿದೆಯಂತೆ.
View this post on Instagram
























Discussion about this post