ನವದೆಹಲಿ: ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿದ್ದಾಗ ಆಯ್ಕೆ ಸಮಿತಿಯು ಅವರ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲವೇ? ತಂಡದಲ್ಲಿ ಎಲ್ಲವೂ ಅವರಿಗೆ ಬೇಕಾದಂತೆ ಇರಲಿಲ್ಲವೇ? ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ನೀಡಿರುವ ಹೇಳಿಕೆಯೊಂದು ಈಗ ಅಂಥ ಅನುಮಾನಕ್ಕೆ ಕಾರಣವಾಗಿದೆ.
2019ರ ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡುವಾಗ ಕೊಹ್ಲಿ ಬಯಸಿದ್ದ ಆಟಗಾರರನ್ನು ನೀಡಿರಲಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ.
‘ಟೈಮ್ಸ್ ಆಫ್ ಇಂಡಿಯಾ’ ಜತೆ ಸಂದರ್ಶನದಲ್ಲಿ ಮಾತನಾಡಿದ ರವಿ ಶಾಸ್ತ್ರಿ, ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಅಂಬಟಿ ರಾಯುಡು ಬೇಕು ಎಂಬುದು ಕೊಹ್ಲಿ ಅವರ ಬಯಕೆಯಾಗಿತ್ತು. ಅದನ್ನವರು ಟೂರ್ನಿಗೆ ಕೆಲವು ತಿಂಗಳುಗಳ ಮೊದಲೇ ಹೇಳಿದ್ದರು. ಆದರೆ ಅವರ ಮಾತಿಗೆ ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಸೊಪ್ಪುಹಾಕಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಈಗಲೂ ತಂಡದ ನಾಯಕ, ಅವರ ಶ್ರೇಷ್ಠ ಆಟ ಟೀಂ ಇಂಡಿಯಾಗೆ ಅಗತ್ಯ: ರೋಹಿತ್ ಶರ್ಮಾ
ಮೂವರು ಕೀಪರ್‌ಗಳನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ್ದರ ಬಗ್ಗೆಯೂ ಅವರು ಈಗ ಅಸಮಾಧಾನ ಹೊರಹಾಕಿದ್ದಾರೆ. ‘ಎಂಎಸ್ ಧೋನಿ, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಮೂವರನ್ನೂ ತಂಡದಲ್ಲಿ ಇರಿಸಿಕೊಳ್ಳುವ ಬದಲು ಅಂಬಟಿ ರಾಯುಡು ಅಥವಾ ಶ್ರೇಯಸ್‌ಗೆ ತಂಡದಲ್ಲಿ ಸ್ಥಾನ ನೀಡಬಹುದಿತ್ತಲ್ಲವೇ? ಮೂವರು ಕೀಪರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿದ್ದರ ಹಿಂದಿನ ಮರ್ಮವೇನು’ ಎಂದು ಅವರು ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಪರಾಭವಗೊಂಡಿತ್ತು.
ಇತ್ತೀಚೆಗೆ ಯುಎಇಯಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್‌ನಲ್ಲಿಯೂ ಲೀಗ್ ಹಂತದಲ್ಲೇ ಟೀಂ ಇಂಡಿಯಾ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು. ಈ ಟೂರ್ನಿಯಲ್ಲೂ ರವಿ ಶಾಸ್ತ್ರಿ ತಂಡದ ಕೋಚ್ ಆಗಿದ್ದರು. ಈ ಟೂರ್ನಿಯ ಬಳಿಕ ಟ್ವೆಂಟಿ–20 ಮಾದರಿ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವ ತೊರೆಯುವುದಾಗಿ ಕೊಹ್ಲಿ ಅವರು ಮೊದಲೇ ಹೇಳಿದ್ದರು. ಅದರಂತೇ ನಡೆದುಕೊಂಡಿದ್ದಾರೆ. ಆದರೆ, ಬಳಿಕ ನಡೆದ ಹಠಾತ್ ಬೆಳವಣಿಗೆಯಲ್ಲಿ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದಲೂ ಅವರನ್ನು ಕೈಬಿಡಲಾಗಿದೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್: ಟೀಂ ಇಂಡಿಯಾ ನಾಯಕತ್ವ ಬಿಟ್ಟುಕೊಡಲು ನಿರಾಕರಿಸಿದ್ದರೇ ಕಿಂಗ್ ಕೊಹ್ಲಿ?
Discussion about this post