ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಡಿಸೆಂಬರ್ 11ರಂದು ನಾಲ್ಕನೇ ವರ್ಷದ ಹರ್ಷ. ಈ ಸಂದರ್ಭದಲ್ಲಿ ಪತ್ನಿ ಹಾಗೂ ಮಗಳ ಜತೆ ಇರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿರುವ ಕೊಹ್ಲಿ, ಅನುಷ್ಕಾ ಅವರನ್ನು ಹಾಡಿಹೊಗಳಿದ್ದಾರೆ.
‘ನಾಲ್ಕು ವರ್ಷಗಳಿಂದ ನೀನು ನನ್ನ ಬಾಲಿಷ್ ತಮಾಷೆ ಹಾಗೂ ಔದಾಸೀನ್ಯವನ್ನು ನಿಭಾಯಿಸಿದ್ದಿ. 4 ವರ್ಷಗಳಿಂದ ಪ್ರತಿ ದಿನ ನನ್ನನ್ನು ನಾನು ಏನಾಗಿದ್ದೇನೋ ಹಾಗೆಯೇ ಸ್ವೀಕರಿಸಿದ್ದಿ. ನಾನು ಉಂಟುಮಾಡುವ ಕಿರಿಕಿರಿಗಳನ್ನೂ ಲೆಕ್ಕಿಸದೆಯೇ ನನ್ನನ್ನು ಪ್ರೀತಿಸಿದ್ದಿ. ನಾಲ್ಕು ವರ್ಷಗಳಿಂದ ದೇವರ ಆಶೀರ್ವಾದ ನಮ್ಮ ಮೇಲಿದೆ. ಅತ್ಯಂತ ಪ್ರಾಮಾಣಿಕ, ಪ್ರೀತಿಯ, ಧೈರ್ಯವಂತ ಮಹಿಳೆಯನ್ನು ಮದುವೆಯಾಗಿ 4 ವರ್ಷಗಳಾದವು. ಇಡೀ ಜಗತ್ತು ನಮ್ಮ ವಿರುದ್ಧವಿದ್ದಂತಹ ಸಂದರ್ಭದಲ್ಲೂ ಸತ್ಯದ ಪರವಾಗಿ ನಿಲ್ಲಲು ನನಗೆ ಸ್ಫೂರ್ತಿ ನೀಡಿದ ಮಹಿಳೆ ನೀನು. ನಾನು ಯಾವತ್ತೂ ನಿನ್ನನ್ನು ಪ್ರೀತಿಸುತ್ತೇನೆ. ಈ ವರ್ಷದ ಆ್ಯನಿವರ್ಸರಿ ನಮಗೆ ವಿಶೇಷವಾದದ್ದು. ಈ ಪುಟ್ಟ ಮಗುವಿನೊಂದಿಗೆ ನಮ್ಮ ಜೀವನ ಪರಿಪೂರ್ಣವಾಗಿದೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ತಂಡ ಆಯ್ಕೆ ಮಾಡುವಾಗ ಕೊಹ್ಲಿ ಮಾತಿಗೆ ನೀಡಿರಲಿಲ್ಲ ಮನ್ನಣೆ: ರವಿ ಶಾಸ್ತ್ರಿ
2017ರ ಡಿಸೆಂಬರ್ 11ರಂದು ಕೊಹ್ಲಿ ಹಾಗೂ ಅನುಷ್ಕಾ ವಿವಾಹವಾಗಿದ್ದರು.
View this post on Instagram
Discussion about this post