ನವದೆಹಲಿ: ಮಗಳು ವಮಿಕಾಳ ಫೊಟೊ ಹಾಗೂ ವಿಡಿಯೊಗಳನ್ನು ಪ್ರಕಟಿಸದ ಮಾಧ್ಯಮಗಳಿಗೆ ಹಾಗೂ ಛಾಯಾಗ್ರಾಹಕರಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಧನ್ಯವಾದ ತಿಳಿಸಿದ್ದಾರೆ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಳೆದ ವಾರ ಮಗಳು ವಮಿಕಾ ಜತೆಗೆ ಟೀಂ ಇಂಡಿಯಾದೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅನೇಕ ಛಾಯಾಗ್ರಾಹಕರು ಅವರ ಫೋಟೊ ಸೆರೆಹಿಡಿದಿದ್ದರು. ಜತೆಗೆ ಕೆಲವರು ವಿಡಿಯೊವನ್ನೂ ಮಾಡಿಕೊಂಡಿದ್ದರು. ದಯಮಾಡಿ ಮಗಳ ಫೋಟೊ, ವಿಡಿಯೊಗಳನ್ನು ಪ್ರಕಟಿಸಬೇಡಿ ಎಂದು ಅನುಷ್ಕಾ ಮನವಿ ಮಾಡಿದ್ದರು. ಅದರಂತೆ ಮಾಧ್ಯಮದವರೂ ನಡೆದುಕೊಂಡಿದ್ದರು.
ಇದನ್ನೂ ಓದಿ: Panama Papers Leak ಪ್ರಕರಣ: ಇ.ಡಿ.ವಿಚಾರಣೆಗೆ ಹಾಜರಾದ ಐಶ್ವರ್ಯಾ ರೈ
ಈ ಕುರಿತು ಅಭಿಮಾನಿಗಳನ್ನು ಉದ್ದೇಶಿಸಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಪ್ರಕಟಿಸಿರುವ ಅವರು ಧನ್ಯವಾದ ಹೇಳಿದ್ದಾರೆ.
‘ವಮಿಕಾಳ ಚಿತ್ರಗಳು/ವಿಡಿಯೊಗಳನ್ನು ಪ್ರಕಟಿಸದಿದ್ದಕ್ಕಾಗಿ ನಾವು ಭಾರತೀಯ ಛಾಯಾಗ್ರಾಹಕರಿಗೆ ಮತ್ತು ಹೆಚ್ಚಿನ ಮಾಧ್ಯಮ ಬಂಧುಗಳಿಗೆ ಕೃತಜ್ಞರಾಗಿರುತ್ತೇವೆ. ಪಾಲಕರಾಗಿ, ನಾವು ನಮ್ಮ ಮಗುವಿನ ಗೌಪ್ಯತೆಯನ್ನು ಬಯಸುತ್ತೇವೆ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಮುಕ್ತವಾಗಿ ಅವಳು ಜೀವನವನ್ನು ಆಸ್ವಾದಿಸುವಂತೆ ನೋಡಿಕೊಳ್ಳಲು ಕೈಲಾದಷ್ಟು ಪ್ರಯತ್ನಿಸುತ್ತೇವೆ. ಅವಳು ಪ್ರಬುದ್ಧಳಾದ ಬಳಿಕ ಅವಳನ್ನು ನಾವು ನಿಯಂತ್ರಿಸುವುದಿಲ್ಲ. ಅವಳಿಗೆ ಹೇಗೆ ಬೇಕೋ ಹಾಗೆ ಸ್ವತಂತ್ರಳಾಗಿ ಬದುಕಲು ಅವಕಾಶ ಕಲ್ಪಿಸುತ್ತೇವೆ. ನಿಮಗೆಲ್ಲರಿಗೂ ವಿಶೇಷ ಧನ್ಯವಾದಗಳು’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.
ವಮಿಕಾಳ ಹಲವು ಫೋಟೊಗಳನ್ನು ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಾರಿ ಹಂಚಿಕೊಂಡಿದ್ದಾರಾದರೂ ಮುಖ ಕಾಣಿಸುವಂತಹ ಫೋಟೊಗಳನ್ನು ಈವರೆಗೆ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಕನ್ನಡದಲ್ಲೂ ನಟಿಸ್ತೀನಿ- ರಶ್ಮಿಕಾ ಮಂದಣ್ಣ

























Discussion about this post