Sandalwood News: ಡಾ.ರಾಜ್‌ಕುಮಾರ್ ಕುಟುಂಬದಲ್ಲಿ ಮೊದಲ ಡಿವೋರ್ಸ್ ಕೇಸ್ ಆಗಿದ್ದು, ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್‌ಕುಮಾರ್ ತಮ್ಮ ವೈವಾಹಿಕ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾರೆ.
2019ರಲ್ಲಿ ಯುವರಾಜ್‌ಕುಮಾರ್ ಶ್ರೀದೇವಿ ಅವರನ್ನು ವಿವಾಹವಾಗಿದ್ದರು. ಆದರೆ ಇವರಿಬ್ಬರ ಮಧ್ಯೆ ಸಂಬಂಧ ಸರಿ ಇರಲಿಲ್ಲ. ಹಾಗಾಗಿ 6 ತಿಂಗಳಿಂದ ಇಬ್ಬರೂ ಸಂಸಾರ ನಡೆಸಿರಲಿಲ್ಲ. ಡಿವೋರ್ಸ್ ಕೇಸ್ ಆದ ಬಳಿಕ, ಶ್ರೀದೇವಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದಾರೆ. ಯುವ ಪರ ವಕೀಲರು ಲೀಗಲ್ ನೋಟೀಸ್ ನೀಡಿದ್ದರೂ ಕೂಡ, ಶ್ರೀದೇವಿ ಅದಕ್ಕೆ ಉತ್ತರಿಸಲಿಲ್ಲ.
ಇದೀಗ ಯುವರಾಜ್ ಪರ ವಕೀಲರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಶ್ರೀದೇವಿಗೆ ಇನ್ನೊಂದು ಅಫೇರ್ ಇತ್ತು. ಮದುವೆ ಮೊದಲಿದ್ದ ಅಫೇರ್, ಮದುವೆಯಾದ ಮೇಲೂ ಮುಂದುವರೆದಿತ್ತು. ಹೀಗಾಗಿ ಯುವರಾಜ್‌ಗೆ ಶ್ರೀದೇವಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಳು ಎಂದು ಆರೋಪಿಸಿದ್ದಾರೆ.
ಯುವರಾಜ್ ಜೊತೆ ಜಗಳ ಮಾಡಿಕೊಂಡು ರಾತ್ರಿ ಬಾಯ್‌ಫ್ರೆಂಡ್ ಮನೆಗೆ ಹೋಗುತ್ತಿದ್ದ ಶ್ರೀದೇವಿ, ಬೆಳಿಗ್ಗೆ ಎದ್ದು ಅಳುತ್ತ ಮನೆಗೆ ಬರುತ್ತಿದ್ದಳು. ಕೆಲವೊಮ್ಮೆ ಆತ ಇವರ ಮನೆಗೂ ಬರುತ್ತಿದ್ದ. ಆಗ ಆಕೆ, ಅವನೊಂದಿಗೆ ಅತೀಯಾಗಿ ಸಲುಗೆಯಿಂದ ಇರುತ್ತಿದ್ದಳು. ಅಲ್ಲದೇ, ವಾಕಿಂಗ್ ಹೋಗುವುದು. ಪಿಕ್‌ನಿಕ್ ಹೋಗುವಾಗಲೂ, ಬಾಯ್‌ಫ್ರೆಂಡ್ ಜೊತೆಗೆ ಬರಲೇಬೇಕೆಂದು ಶ್ರೀದೇವಿ ಹಠ ಮಾಡುತ್ತಿದ್ದಳು ಅಂತಾ ಲಾಯರ್ ಆರೋಪಿಸಿದ್ದಾರೆ.
ಅಲ್ಲದೇ, ಬಾಯ್‌ಫ್ರೆಂಡ್ ಮದುವೆಯಾದಾಗ, ಈಕೆ ಅಳುತ್ತಿದ್ದಳು, ಒಂದು ವಾರ ಸರಿಯಾಗಿ ಊಟ ಮಾಡಿಲ್ಲವೆಂದು ಲಾಯರ್ ಹೇಳಿದ್ದಾರೆ. ಅಷ್ಟೇ ಅಲ್ಲದೇ, ರಾಜ್ ಅಕಾಡೆಮಿಗೆ ಸೇರಿದ ಹಣವನ್ನು ಶ್ರೀದೇವಿ ದುರುಪಯೋಗ ಮಾಡಿಕೊಂಡಿದ್ದು, ಹಲವು ಕಡೆ ಸೈಟ್, ಮನೆ ಖರೀದಿಸಿದ್ದಾರೆ. ಅಲ್ಲದೇ, ಅಮೆರಿಕಕ್ಕೆ ಹೋಗಿ, ಯುವರಾಜ್ ಅವರಿಗೂ ಅಲ್ಲಿಗೆ ಬಂದು ಇರುವಂತೆ ಒತ್ತಾಯ ಮಾಡಿದ್ದರೆಂದು ಯುವರಾಜ್ ಪರ ಲಾಯರ್ ಆರೋಪಿಸಿದ್ದಾರೆ.
ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್
Discussion about this post