Spiritual: ರಾತ್ರಿ ಪರ್ಫ್ಯೂಮ್ ಹಾಕಬಾರದು ಅಂತಾ ಹೇಳೋದ್ಯಾಕೆ..?
ಈಗೆಲ್ಲಾ ಘಮ ಘಮ ಅನ್ನೋಕ್ಕೆ ಯುವ ಪೀಳಿಗೆ ಪರ್ಫ್ಯೂಮ್ ಹಾಕುತ್ತಾರೆ. ಆದರೆ ಮುಂಚೆ ಎಲ್ಲಾ, ಉತ್ತಮ ಸೋಪ್‌ನಿಂದ ಸ್ನಾನ ಮಾಡಿದ್ರೆ ಸಾಕಿತ್ತು. ದೇಹ ಘಮಗೂಡುವುದಕ್ಕೆ ಅದಷ್ಟೇ ಸಾಕಿತ್ತು. ಪರ್ಫ್ಯೂಮ್ ಅಥವಾ ಸೆಂಟ್ ಅಂದ್ರೆ ಅಪರೂಪದ ವಸ್ತುವಾಗಿತ್ತು. ಅದರ ಬಳಕೆಯೂ ಕಡಿಮೆ ಇತ್ತು. ಆದರೆ ಇದೀಗ ಎಲ್ಲರ ಬಳಿಯೂ 5ರಿಂದ 10 ತರಹದ ಪರ್ಫ್ಯೂಮ್ ಇರುತ್ತದೆ.
ಆದರೆ ನಾವು ಕೆಲವು ಬಾರಿ ಪರ್ಫ್ಯೂಮ್ ಹಾಕಬಾರದು ಅನ್ನೋ ನಿಯಮ ಇದೆ. ರಾತ್ರಿ ವೇಳೆ ಪರ್ಫ್ಯೂಮ್ ಹಾಕಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ಯಾಕೆ ಹೀಗೆ ಹೇಳ್ತಾರೆ..? ಇದರ ಹಿಂದಿರುವ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಆಧ್ಯಾತ್ಮಿಕತೆಗೆ ಧಕ್ಕೆಯುಂಟಾಗುತ್ತದೆ: ಹಿಂದೂ ಧರ್ಮದ ಪ್ರಕಾರ, ರಾತ್ರಿ ವೇಳೆ ನಾವು ದೇವರ ಧ್ಯಾನದಲ್ಲಿ ತ“ಡಗಬೇಕು. ಪ್ರಾರ್ಥಿಸಿ ಮಲಗಬೇಕು ಅಂತಾ ಹೇಳಲಾಗುತ್ತದೆ. ಆದರೆ ಸುಗಂಧ ದ್ರವ್ಯ ಬಳಸುವುದರಿಂದ ನಿಮ್ಮ ಏಕಾಗೃತೆಗೆ ಧಕ್ಕೆಯುಂಟಾಗಬಹುದು.
ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ: ರಾತ್ರಿ ವೇಳೆ ಪರ್ಫ್ಯೂಮ್ ಬಳಸಿದರೆ, ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಅಂತಾ ಹೇಳಲಾಗಿದೆ. ಇದರ ಅನುಭವವೂ ಹಲವರಿಗೆ ಆಗಿರುತ್ತದೆ. ಕೆಲ ಜಾಗಗಳಲ್ಲಿ ಆತ್ಮಗಳ ಓಡಾಟವಿರುತ್ತದೆ. ಇವುಗಳು ಸುವಾಸನೆಯನ್ನು ಹುಡುಕಿ, ಮನುಷ್ಯನ ಬೆನ್ನಟ್ಟುತ್ತದೆ ಅಂತಾ ಹೇಳಲಾಗಿದೆ. ಹಾಗಾಗಿ ರಾತ್ರಿ ವೇಳೆ ಪರ್ಫ್ಯೂಮ್ ಹಾಕಬಾರದು.
ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ: ರಾತ್ರಿ ಪರ್ಫ್ಯೂಮ್ ಬಳಸುವುದರಿಂದ ತಲೆನೋವು ಬರಬಹುದು. ಅಲ್ಲದೇ, ಕೆಲವರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಕನಸು ಕೂಡ ಅಸ್ಪಷ್ಟವಾಗುತ್ತದೆ.
ಆರೋಗ್ಯ ಹದಗೆಡಬಹುದು: ಹಲವು ಪರ್ಫ್ಯೂಮ್ ನಲ್ಲಿ ಕೆಮಿಕಲ್‌ಗಳು ಇರುತ್ತದೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಅದರಲ್ಲೂ ರಾತ್ರಿ ವೇಳೆ ಸೂರ್ಯನ ಶಾಖವಿರದ ಕಾರಣ, ಪರ್ಫ್ಯೂಮ್ ಹೆಚ್ಚು ವೇಳೆ ನಿಮ್ಮ ಉಡುಪಿಗೋ, ಅಥವಾ ದೇಹಕ್ಕೋ ಅಂಟಿಕ“ಂಡಿರುತ್ತದೆ. ಇದರಿಂದ ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾತ್ರಿ ವೇಳೆ ಪರ್ಫ್ಯೂಮ್ ಹಾಕುವುದನ್ನು ಆದಷ್ಟು ಕಡೆಗಣಿಸಿ.
ಇನ್ನು ದೇಹ ಪರಿಮಳದಿಂದ ಕೂಡಿರಬೇಕು ಅಂದ್ರೆ, ನೀರಿಗೆ ಉಪ್ಪು- ನಿಂಬೆರಸ ಬೆರೆಸಿ ಸ್ನಾನ ಮಾಡಿ. ಇದರಿಂದ ದೇಹದ ದುರ್ಗಂಧ ಹೋಗುತ್ತದೆ. ಫ್ರೆಶ್ ಆಗಿಯೂ ಇರುತ್ತೀರಿ.
=======================
ಈ ಕೆಲಸಗಳನ್ನು ನಿಂತು ಮಾಡಬೇಡಿ
ಹಿಂದೂ ಧರ್ಮದಲ್ಲಿ ಹಲವು ನೀತಿ ನಿಯಮಗಳಿದೆ. ಅದರಲ್ಲೂ ನಾವು ನಾವು ಕೆಲವು ಕೆಲಸಗಳನ್ನು ಈ ರೀತಿಯಾಗಿಯೇ ಮಾಡಬೇಕು ಅಂತ ಹೇಳಲಾಗಿದೆ. ಏಕೆಂದರೆ, ಆ ಕೆಲಸಗಳನ್ನು ಆ ರೀತಿಯಾಗಿಯೇ ಮಡಿದಾಗಲಷ್ಟೇ ಅದರ ಫಲ ಸಿಗುತ್ತದೆ. ಹಾಗಾಗಿ ನಾವಿಂದು ಯಾವ ಕೆಲಸಗಳನ್ನು ನಿಂತು ಮಾಡಬಾರದು ಅಂತಾ ಹೇಳಲಿದ್ದೇವೆ.
ಊಟ ಮಾಡುವುದು: ನಾವು ನಿಂತು ಊಟ ಮಾಡಬಾರದು. ನಿಂತು ಊಟ ಮಾಡುವುದರಿಂದ ಅದರ ಯಾವ ಪೋಷಕಾಂಶವೂ ನಮ್ಮ ದೇಹ ಸೇರುವುದಿಲ್ಲ. ಹಾಗಾಗಿಯೇ ನೆಲದ ಮೇಲೆ ಚಟ್ಟೆಮಟ್ಟೆ ಹಾಕಿ ಕುಳಿತೇ ಊಟ ಮಾಡಬೇಕು. ಶಾಸ್ತ್ರಗಳ ಪ್ರಕಾರ ಕೂಡ ಕುಳಿತೇ ಊಟ ಮಾಡಬೇಕು ಎನ್ನಲಾಗಿದೆ.
ನೀರು ಕುಡಿಯುವುದು: ನೀರು ಕುಡಿಯುವಾಗಲೂ ಕುಳಿತು, ಆರಾಮವಾಗಿ ನೀರು ಕುಡಿಯಬೇಕು. ನಿಂತು ನೀರು ಕುಡಿಯುವುದರಿಂದ ಆ ನೀರು ನಮ್ಮ ದೇಹ ಸೇರಬಹುದು. ಆದರೆ ಅದರಿಂದ ನಮ್ಮ ಆರೋಗ್ಯಕ್ಕೇನೂ ಲಾಭವಿಲ್ಲ.
ಓದುವುದು: ನಿಂತು ಓದಬಾರದು. ಕುಳಿತು ಓದಿದರೆ, ಏಕಾಗೃತೆ ಹೆಚ್ಚುತ್ತದೆ. ಓದಿದ್ದು ನೆನಪಿನಲ್ಲಿರುತ್ತದೆ. ನಿಂತು ಓದಿದರೆ, ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರುವುದಿಲ್ಲ.
ಮಂತ್ರ ಪಠಣ ಮಾಡುವುದು: ನೀವು ಮಂತ್ರ ಪಠಣ ಮಾಡುವಾಗಲೂ ಕುಳಿತೇ ಮಾಡಬೇಕು. ನಿಂತು ಮಾಡುವುದರಿಂದ ಪ್ರಯೋಜನವಿಲ್ಲ.
================
ಅವಿವಾಹಿತ ಮಹಿಳೆಯರು ಈ ಕೆಲಸಗಳನ್ನು ಮಾಡಬಾರದು
ಅವಿವಾಹಿತ ಮಹಿಳೆಯರು ಕೆಲ ಕೆಲಸಗಳನ್ನು ಮಾಡಬಾರದು ಅನ್ನೋದು ಹಿಂದೂ ಧರ್ಮದ ಪದ್ಧತಿ. ಕತ್ತಿಗೆ ತಾಳಿ ಬಿದ್ದ ಮೇಲೆಯೇ ಹೆಣ್ಣು ಮಕ್ಕಳು ಈ ಕೆಲಸಗಳನ್ನು ಮಾಡಬಹುದು. ಹಾಗಾದ್ರೆ ಅವಿವಾಹಿತೆಯರು ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ತುಳಸಿ ಗಿಡಕ್ಕೆ ನೀರು ಹಾಕುವುದಿಲ್ಲ: ತುಳಸಿ ದೇವಿಯನ್ನು ಆರಾಧಿಸಿದರೆ, ಬೇಗ ವಿವಾಹವಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ಮದುವೆಗೂ ಮುನ್ನ ತುಳಸಿಗೆ ನೀರು ಹಾಕಬಾರದು ಅಂತಾ ಹೇಳಲಾಗಿದೆ. ತುಳಸಿಗೆ ವಿವಾಹದ ಬಳಿಕ ನೀರೆರೆದು, ಪ್ರಾರ್ಥಿಸಿದರೆ, ಆಕೆ ಪತಿಯ ಆಯುಷ್ಯ, ಆರೋಗ್ಯ ವೃದ್ಧಿಸುತ್ತಾಳೆ ಅನ್ನೋ ನಂಬಿಕೆ ಇದೆ.
ಈಗಿನ ಕಾಲದಲ್ಲಿ ಫ್ಯಾಷನ್ ಹೆಸರಲ್ಲಿ ಜನ ಏನೇನೋ ಮಾಡ್ತಿದ್ದಾರೆ. ಅಂಥ ಫ್ಯಾಷನ್ ಹೆಸರಲ್ಲಿ ಕೆಲವು ರಿಂಗ್ ಅಂತಾ, ಕಾಲಿನ ಬೆರಳಿಗೆ ಉಂಗುರ ಹಾಕ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಮದುವೆಯಗದವರು ಕಾಲುಂಗುರ ಧರಿಸಲೇಬಾರದು.
ಕೂದಲು ಓಪನ್ ಆಗಿರಿಸುವುದು ಇಂದಿನ ಕಾಲದಲ್ಲಿ ಕಾಮನ್ ಮತ್ತು ಫ್ಯಾಷನ್. ಆದರೆ ಹಿಂದಿನ ಕಾಲದವರ ಪ್ರಕಾರ, ಕೂದಲು ಓಪನ್ ಆಗಿರಿಸಿದರೆ, ನಕಾರಾತ್ಮಕ ಶಕ್ತಿ ನಮ್ಮನ್ನು ಆವರಿಸಿಕ“ಳ್ಳುತ್ತದೆ. ಹಾಗಾಗಿ ಹೆಣ್ಣು ಮಕ್ಕಳು, ಅದರಲ್ಲೂ ಅವಿವಾಾಹಿತೆಯರು ಕೂದಲು ಓಪನ್ ಬಿಡಬಾರದು ಅಂತಾ ಹೇಳಲಾಗುತ್ತದೆ.
ಇನ್ನು ಅವಿವಾಹಿತೆಯರು ಸಿಂಧೂರ ಹಚ್ಚಬಾರದು. ಹಣೆಯ ಮೇಲ್ಭಾಗದಲ್ಲಿ, ಮಧ್ಯಭಾಗದಲ್ಲಿ ಸಿಂಧೂರ ಹಚ್ಚಲಾಗುತ್ತದೆ. ವಿವಾಹದ ಬಳಿಕವೇ ಹೀಗೆ ಸಿಂಧೂರ ಹಚ್ಚಬೇಕು. ವಿವಾಹಕ್ಕೂ ಮುನ್ನ ಸಿಂಧೂರ ಹಚ್ಚುವುದು ಉತ್ತಮವಲ್ಲ ಅಂತಾರೆ ಹಿರಿಯರು.
ೃೃೃೃೃೃೃೃೃೃೃೃೃೃೃೃೃೃೃೃೃ
ಪತಿಗೆ ಕೇಳದೇ ಪತ್ನಿ ಈ ಕೆಲಸಗಳನ್ನು ಮಾಡಬಾರದಂತೆ..
ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಕೆಲ ವಿಷಯಗಳನ್ನು ಸಿಕ್ರೇಟ್ ಆಗಿಯೇ ಇಡಬೇಕು ಅಂತಾ ಕೆಲವರು ಹೇಳ್ತಾರೆ. ಸತ್ಯವಂತರಾಗಲು ಹೋಗಿ, ಜೀವನ ಹಾಳಾಗಿ ಹೋಗುವ ಸಾಧ್ಯತೆ ಇರುವ ಸಂದರ್ಭದಲ್ಲಿ ಹೀಗೆ ಮಾಡುವುದೇ ಉತ್ತಮ. ಆದರೆ ಕೆಲ ವಿಷಯಗಳ ಬಗ್ಗೆ ಎಂದಿಗೂ ಪತಿಗೆ ಹೇಳದೇ ಪತ್ನಿ, ಪತ್ನಿಗೆ ಹೇಳದೇ ಪತಿ ಇರಬಾರದಂತೆ. ಹಾಗಾದ್ರೆ ಪತ್ನಿ ಯಾವ ಕೆಲಸವನ್ನು ಪತಿಗೆ ಹೇಳದೇ ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ದುಡ್ಡಿನ ವ್ಯವಹಾರ: ಪತ್ನಿಯಾದವಳು ಪತಿಗೆ ಹಣದ ವಿಚಾರದ ಬಗ್ಗೆ ಎಲ್ಲವೂ ಹೇಳಬೇಕಂತೆ. ಪತಿಗೆ ಹೇಳದೇ, ಬೇರೆಯವರಿಂದ ಹಣ ಪಡೆಯಬಾರದು. ಪತಿಗೆ ಹೇಳದೇ ಬೇರೆಯವರಿಗೆ ಹಣ ನೀಡಬಾರದು. ಹೀಗಾದಾಗ, ವಿಷಯವೇನಾದರೂ ಪತಿಗೆ ತಿಳಿದರೆ, ಜಗಳವಾಗಿ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ.
ಆಚೆ ಹೋಗಬಾರದು: ಪತ್ನಿಯಾದವಳು ಪತಿಗೆ ಹೇಳದೇ, ಆಚೆ ಹೋಗಬಾರದು. ಹಾಗೇ ಹೋದಾಗ, ಏನಾದರೂ ಅನಾಹುತವಾದರೆ, ಪತಿ ತಲೆತಗ್ಗಿಸಬೇಕಾಗುತ್ತದೆ. ಹಾಗಾಗಿ ಪತಿಗೆ ವಿಷಯ ತಿಳಿಸದೇ, ಎಂದಿಗೂ ಆಚೆ ಹೋಗಬಾರದು. ಪತಿಯ ಜತೆಗೆ ಹೋದರೆ ಇನ್ನೂ ಉತ್ತಮ.
ದಾನ ಮಾಡಬಾರದು: ದಾನ ಮಾಡುವುದು ಉತ್ತಮ ವಿಷಯ. ಆದರೆ ಪತಿಗೆ ಕೇಳದೇ, ದಾನ ಮಾಡುವುದು ತಪ್ಪು. ಅದರಲ್ಲೂ ಪತಿಯ ದುಡಿಮೆಯ ಹಣವನ್ನು ನೀವು ಅವರಿಗೆ ಕೇಳದೇ ದಾನ ಮಾಡಿದರೆ, ಅವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಬೇರೆಯವರಿಂದ ಏನನ್ನು ತೆಗೆದುಕ“ಳ್ಳಬಾರದು: ಪತಿಗೆ ಹೇಳದೇ, ಬೇರೆಯವರಿಂದ ಯಾವ ವಸ್ತುವನ್ನು ತೆಗೆದುಕ“ಳ್ಳಬಾರದು. ಇದರಿಂದ ಪತಿಗೆ ಅವಮಾನ ಮಾಡಿದಂತಾಗುತ್ತದೆ. ಅದೇ ಮಾತನ್ನಿಟ್ಟುಕ“ಂಡು ಜನ ನಿಮ್ಮ ಪತಿಯನ್ನು ತಮಾಷೆಯೂ ಮಾಡಬಹುದು. ಹಾಗಾಗಿಯೇ ಪತಿಯ ಗಮನಕ್ಕೆ ತಾರದೇ, ಬೇರೆಯವರಿಂದ ಏನನ್ನು ತೆಗೆದುಕ“ಳ್ಳಬೇಡಿ.
ೃೃೃೃೃೃೃೃೃೃೃೃೃೃ
ವಾರದ 7 ದಿನಗಳಲ್ಲಿ ಯಾವ ದಿನ ಹೊಸ ಉಡುಪು ಧರಿಸಬಾರದು..?
ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಜನನದಿಂದ ಮರಣದವರೆಗೂ ಹಲವು ಪದ್ಧತಿಗಳು ಕಾಣಸಿಗುತ್ತದೆ. ಅದೇ ರೀತಿ ನಾವು ಉಡುಪು ಧರಿಸುವ ವಿಷಯದಲ್ಲೂ ಕೆಲವು ಪದ್ಧತಿಗಳಿದೆ. ಅದೇನೆಂದರೆ, ವಾರದ 7 ದಿನಗಳಲ್ಲಿ ನಾವು ಕೆಲ ದಿನ ಹೊಸ ಉಡುಪು ಧರಿಸಬಾರದು. ಹಾಗಾದ್ರೆ ಯಾವ ದಿನ ಹೊಸ ಉಡುಪು ಧರಿಸಬಾರದು ಅಂತಾ ತಿಳಿಯೋಣ ಬನ್ನಿ.
ಸೋಮವಾರ: ಸೋಮವಾರ ಉತ್ತಮವಾದ ದಿನ. ಈ ದಿನ ನೀವು ಹೊಸ ಉಡುಪು ಧರಿಸಬಹುದು. ಶಿವನ ದಿನವಾದ ಸೋಮವಾರ, ಡ್ರೆಸ್ ಖರೀದಿಸಲು ಮತ್ತು ಧರಿಸಲು ಉತ್ತಮ ದಿನವಾಗಿದೆ. ಇದು ಚಂದ್ರನ ದಿನವಾಗಿದೆ. ಈ ದಿನ ಹೊಸ ಉಡುಪು ಧರಿಸಿದರೆ, ಯಶಸ್ಸು ನಿಮ್ಮದಾಗುತ್ತದೆ.
ಮಂಗಳವಾರ: ಮಂಗಳವಾರ ಹನುಮ ಮತ್ತು ಗಣಪನನ್ನು ಪೂಜಿಸುವ ದಿನ. ಈ ದಿನ ಉತ್ತಮ ದಿನವಾದರೂ ಕೂಡ, ಈ ದಿನ ನೀವು ಹೊಸ ಉಡುಪು ಧರಿಸಬಾರದು. ಮತ್ತು ಖರೀದಿಸಬಾರದು. ಅಲ್ಲದೇ ಮಂಗಳವಾರ ಯಾವುದೇ ಶುಭಕಾರ್ಯ ಕೂಡ ಮಾಡಲಾಗುವುದಿಲ್ಲ.
ಬುಧವಾರ: ಬುಧವಾರ ವಿಷ್ಣು ಮತ್ತು ಗಣಪನನ್ನು ಪೂಜಿಸುವ ದಿನ. ಈ ದಿನ ನಾವು ಹೊಸ ಉಡುಪು ಧರಿಸಬಹುದು. ಖರೀದಿಸಲೂಬಹುದು. ಆದರೆ ಈ ದಿನ ಹೊಸ ಉಡುಪು ವಾಶ್ ಮಾಡಬಾರದು. ಏಕೆಂದರೆ ಹಿರಿಯರು ಹೇಳುವ ಪ್ರಕಾರ, ಈ ದಿನ ಹೊಸ ಉಡುಪು ವಾಶ್ ಮಾಡಿದರೆ, ಅದು ತನ್ನ ಬಣ್ಣ ಕಳೆದುಕ“ಳ್ಳುತ್ತದೆ. ಬುಧವಾರ ಹೊಸ ಉಡುಪು ವಾಶ್ ಮಾಡಿದರೆ ಬೂದಿ ಬಣ್ಣವಾಗುತ್ತದೆ ಅಂತಾ ಹಿರಿಯರ ನಂಬಿಕೆ.
ಗುರುವಾರ: ಗುರುವಿನ ದಿನವಾದ ಈ ದಿನ ಹೊಸ ಉಡುಪು ಧರಿಸುವುದು ಮತ್ತು ಖರೀದಿಸುವುದು ಶುಭ ಎನ್ನಲಾಗಿದೆ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ ಎಲ್ಲವೂ ಹೆಚ್ಚುತ್ತದೆ.
ಶುಕ್ರವಾರ: ಶುಕ್ರವಾರ ಹೊಸ ಉಡುಪು ಧರಿಸುವುದರಿಂದ ಲಕ್ಷ್ಮೀ ಅನುಗ್ರಹ ನಿಮ್ಮ ಮೇಲಿರುತ್ತದೆ. ಶುಕ್ರವಾರ ಲಕ್ಷ್ಮೀಯ ಆಶೀರ್ವಾದ ಪಡೆಯಲು ಉತ್ತಮ ದಿನ. ಹೀಗಾಗಿ ಈ ದಿನ ಸ್ವಚ್ಛವಾದ ಉಡುಪು ಧರಿಸಬೇಕು.
ಶನಿವಾರ: ಶನಿವಾರ ಹೊಸ ಉಡುಪು ಧರಿಸಬಾರದು. ಇದರಿಂದ ಅಶುಭವಾಗುವ ಸಾಧ್ಯತೆ ಹೆಚ್ಚು.
ರವಿವಾರ: ಸೂರ್ಯನ ಅನುಗ್ರಹ ಹೆಚ್ಚಾಗಿರುವ ಈ ದಿನ ಹೊಸ ಉಡುಪು ಧರಿಸಬಹುದು. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ೃೃೃೃೃೃೃೃೃೃೃೃೃೃೃ
ಈ ಕಾರಣಕ್ಕೆ ಹೆಣ್ಣು ಮಕ್ಕಳು ಸ್ಮಶಾನಕ್ಕೆ ಹೋಗಬಾರದು ಅನ್ನೋದು
ಸಾವಿನ ಬಳಿಕ ಹೆಣವನ್ನು ಸ್ಮಶಾನಕ್ಕೆ ಹೋಗಿ ಅಂತ್ಯಸಂಸ್ಕಾರ ಮಾಡುವುದು ಹಿಂದೂ ಧರ್ಮದ ಪದ್ಧತಿ. ಆದರೆ ಈ ಪದ್ಧತಿ ಅನುಸರಿಸುವಾಗ, ಕೆಲ ನಿಯಮಗಳನ್ನು ಅನುಸರಿಸಬೇಕು. ಅದರಲ್ಲೂ ಸ್ಮಶಾನಕ್ಕೆ ಹೆಣ್ಣು ಮಕ್ಕಳು ಹೋಗಬಾರದು ಅನ್ನೋ ಪದ್ಧತಿ ಇದೆ. ಹಾಗಾದ್ರೆ ಯಾಕೆ ಹೆಣ್ಣು ಮಕ್ಕಳು ಸ್ಮಶಾನಕ್ಕೆ ಹೋಗಬಾರದು ಅಂತಾರೆ ಅಂತ ತಿಳಿಯೋಣ ಬನ್ನಿ..
ಮನೆಯಲ್ಲಿ ಯಾರಾದರೂ ಇರಬೇಕು: ವ್ಯಕ್ತಿ ಸತ್ತ ಬಳಿಕ ಆತನ ಆತ್ಮ ಮನೆಯಲ್ಲಿಯೇ ಇರುತ್ತದೆ. ಅಷ್ಟು ಬೇಗ ಆತ್ಮ ಮನೆ ಬಿಟ್ಟು ಹೋಗಲು ಇಚ್ಛಿಸುವುದಿಲ್ಲ. ಆತನ ಸಂಬಂಧಿಕರ ಬಳಿಯೇ ಇರಲು ಇಚ್ಛಿಸುತ್ತದೆ. ಹಾಗಾಗಿಯೇ 13ನೇ ದಿನದವರೆಗೂ ಆತ್ಮ ಮನೆಯಲ್ಲಿಯೇ ಇರುತ್ತದೆ. 13ನೇ ದಿನ ಕಾರ್ಯ ಮಾಡಿದ ಬಳಿಕ ಆತ್ಮ ಹೋಗುತ್ತದೆ ಎನ್ನಲಾಗಿದೆ. ಹಾಗಾಗಿಯೇ ಕಾರ್ಯವನ್ನು ಪದ್ಧತಿ ಪ್ರಕಾರವಾಗಿ, ಆತ್ಮಕ್ಕೆ ಶಾಂತಿ ಸಿಗುವ ರೀತಿ ಮಾಡಬೇಕು.
ಇನ್ನು ಮನೆಯಲ್ಲಿ ಯಾರಾದರೂ ಇರಬೇಕು. ಸಾವಿನ ಮನೆ ಖಾಲಿ ಬಿಡಬಾರದು ಎಂಬ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಲಾಗುತ್ತದೆ.
ಮಹಿಳೆಯರು ಸೂಕ್ಷ್ಮ ಸ್ವಭಾವದವರು: ಮಹಿಳೆಯರು ಸೂಕ್ಷ್ಮ ಸ್ವಭಾವದವರು. ಹೀಗಾಗಿ ಅವರು ಪುರುಷರ ರೀತಿ ದುಃಖವನ್ನು ತಡೆಯಲು ಅಸಾಧ್ಯ. ಮಾನಸಿಕವಾಗಿ, ದೈಹಿಕವಾಗಿ ಅವರು ಕುಂದುಹೋಗುತ್ತಾರೆ. ಈ ಕಾರಣಕ್ಕೆ ಮಹಿಳೆಯರನ್ನು ಸ್ಮಶಾನಕ್ಕೆ ಕರೆದ“ಯ್ಯಲಾಗುವುದಿಲ್ಲ.
ನಕಾರಾತ್ಮಕ ಶಕ್ತಿಗಳ ಪ್ರಭಾವ ಬೀರುತ್ತದೆ: ಮಹಿಳೆಯರ ಮೇಲೆ ನಕಾರಾತ್ಮಕ ಪರಿಣಾಮ ಬಹುಬೇಗ ಬೀರುವ ಸಂಬಂಧ, ಮಹಿಳೆಯರು ಸ್ಮಶಾನಕ್ಕೆ ಹೋಗಬಾರದು ಅಂತಾ ಹೇಳಲಾಗುತ್ತದೆ. ಏಕೆಂದರೆ ಈ ಮುಂಚೆಯೇ ಹೇಳಿದಂತೆ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುತ್ತದೆ. ಮತ್ತು ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳ ಮೇಲೆ ನಕಾರಾತ್ಮಕ ಶಕ್ತಿ ಹೆಚ್ಚು ಪರಿಣಾಮ ಬೀರುತ್ತದೆ.
=========================================================
Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ
Spiritual: ನಾವು ಬೇರೆಯವರ ಮನೆಗೆ ಹೋದರೆ ಅವರು ನೀಡಿದರೂ, ಅಥವಾ ನಾವಾಗಿಯೇ ಕೆಲ ವಸ್ತುಗಳನ್ನು ತರಬಾರದು. ಹಾಗಾದ್ರೆ ನಾವು ಎಂಥ ವಸ್ತುಗಳನ್ನು ಮತ್ತು ಯಾಕೆ ತರಬಾರದು ಅಂತಾ ತಿಳಿಯೋಣ ಬನ್ನಿ..
ಛತ್ರಿ: ಬೇರೆಯವರ ಮನೆಯಿಂದ ನೀವು ಛತ್ರಿ ತರಬಾರದು. ಅಥವಾ ಯಾರ ಛತ್ರಿಯನ್ನಾದರೂ ಕದಿಯಬಾರದು. ಇದರಿಂದ ಗ್ರಹಗತಿ ಬದಲಾಗಿ, ಅವರ ಪಾಲಿನ ದುರಾದೃಷ್ಟ ನಿಮ್ಮ ಪಾಲಾಗುತ್ತದೆ.
ಚಪ್ಪಲಿ: ಬೇರೆಯವರ ಮನೆಯಿಂದಾಗಲಿ, ದೇವಸ್ಥಾನ ಅಥವಾ ಯಾವುದೇ ಸ್ಥಳಕ್ಕೆ ಹೋದಾಗ, ಅಲ್ಲಿಂದ ಯಾವುದೇ ಕಾರಣಕ್ಕೂ ಚಪ್ಪಲಿಯನ್ನು ಮನೆಗೆ ತರಬೇಡಿ. ನಿಮ್ ಚಪ್ಪಲಿ ಯಾರೋ ಕದ್ದರೆಂದು, ಬೇರೆಯವರ ಚಪ್ಪಲಿ ನೀವು ತಂದು ಮನೆಯಲ್ಲಿರಿಸಿದರೆ, ಅವರಿಗಾಗಬೇಕಾದ ನಷ್ಟ ನಿಮ್ಮ ಪಾಲಾಗುತ್ತದೆ. ಆ ಚಪ್ಪಲಿ ನಡೆದು ಬಂದ ಜಾಗದ ದರಿದ್ರವೆಲ್ಲ ನಿಮ್ಮ ಮನೆಯ ಭಾಗವಾಗುತ್ತದೆ. ಹಾಗಾಗಿಯೇ ಮನೆಯಲ್ಲಿ ಸದಾಕಾಲ ಜಗಳ, ನೆಮ್ಮದಿ ಇಲ್ಲದಿರುವ ವಾತಾವರಣ ನಿರ್ಮಾಣವಾಗುತ್ತದೆ.
ಖಾಲಿ ವಸ್ತು: ನೀವು ನೋಡಿರಬಹುದು. ನೀವು ಯಾರಿಗಾದರೂ ತಿಂಡಿ, ತಿನಿಸು ನೀಡಿದರೆ, ಆ ಡಬ್ಬ, ಪ್ಲೇಟ್, ಲೋಟೆ ಖಾಲಿ ನೀಡದೇ, ಸಕ್ಕರೆಯನ್ನಾದರೂ ತುಂಬಿಸಿಕ“ಡುತ್ತಾರೆ. ಅಥವಾ ಅದರಲ್ಲಿ ಯವಾುದಾದರೂ ತಿಂಡಿ ಹಾಾಕಿಕ“ಡುತ್ತಾರೆ. ಏಕೆಂದರೆ, ಖಾಲಿ ವಸ್ತುಗಳನ್ನು ಎಂದಿಗೂ ನೀಡಬಾರದು, ಮತ್ತು ತೆಗೆದುಕ“ಳ್ಳಬಾರದು.
ಕಬ್ಬಿಣ: ನೀವು ಬೇರೆಯವರ ಮನೆಗೆ ಹೋದಾಗ, ಅಥವಾ ರಸ್ತೆಯಲ್ಲಿ, ಅಥವಾ ಯಾವುದೇ ಸ್ಥಳದಿಂದ ಕಬ್ಬಿಣದ ವಸ್ತು ಮನೆಗೆ ತರಬಾರದು. ಅದೇನೇ ಆಗಲಿ, ಪಿನ್, ಆಣಿ, ಚಾಕು, ಕತ್ತಿ, ಹೀಗೆ ಯಾವುದೇ ಕಬ್ಬಿಣದ ವಸ್ತು ಮನೆಗೆ ತರಬಾರದು.
Discussion about this post