Horoscope: ಈ ರಾಶಿಯ ಹೆಣ್ಣುಮಕ್ಕಳು ಜನ್ಮದಿಂದಲೇ ಬಾಸ್ ಆಗಿರುತ್ತಾರೆ.
ಕೆಲ ರಾಶಿಯ ಹೆಣ್ಣು ಮಕ್ಕಳು ಚಿಕ್ಕಂದಿನಿಂದಲೇ, ಧೈರ್ಯವಂತರಾಗಿರುತ್ತಾರೆ. ಅವರು ಕತ್ತಲೆಗೋ, ಬೆದರಿಕೆಯೋ, ಬಡಿತಕ್ಕೋ, ಯಾವುದಕ್ಕೂ ಹೆದರುವುದಿಲ್ಲ. ಎಲ್ಲರಿಗೂ ಧೈರ್ಯದಿಂದ ಎದುರಿಸುತ್ತಾರೆ. ಅಂಥ ಹೆಣ್ಣು ಮಕ್ಕಳು ಮುಂದೆ ಭವಿಷ್ಯದಲ್ಲೂ ಧೈರ್ಯವಾಗಿಯೇ ಸಾಗುತ್ತಾರೆ. ಅಂಥ ರಾಶಿಗಳು ಯಾವುದು..? ಯಾವ ರಾಶಿಯ ಹೆಣ್ಣು ಮಕ್ಕಳು ಧೈರ್ಯವಂತರಾಗಿರುತ್ತಾರೆ ಅಂತಾ ತಿಳಿಯೋಣ ಬನ್ನಿ..
ಮೇಷ: ಮೇಷ ರಾಶಿಯವರು ಸ್ಪರ್ಧೆ ಅಂತ ಬಂದರೆ, ಏನಾದರೂ ಮಾಡಿ ಮುಂದೇ ಬಂದೇ ಬರುತ್ತಾರೆ. ಗೆಲುವು ಸಾಧಿಸಲೇಬೇಕೆಂಬ ಛಲ ಅವರಲ್ಲಿ ಇರುತ್ತದೆ. ಧೈರ್ಯವಂತರೂ ಆದ ಇವರು, ಎಲ್ಲ ಸಮಸ್ಯೆಗಳನ್ನು ಎದುರಿಸಿ, ಬಾಸ್ ಆಗೇ ಆಗುತ್ತಾರೆ.

ಮಿಥುನ: ಮಿಥುನ ರಾಶಿಯವರಲ್ಲಿ ಕಾನ್ಫಿಡೆನ್ಸ್ ಅನ್ನೋದು ಅಗತ್ಯಕ್ಕಿಂತ ಹೆಚ್ಚೇ ಇರುತ್ತದೆ. ಇವರದ್ದು ಭಂಡ ಧೈರ್ಯ ಅಂದರೂ ತಪ್ಪೇನಿಲ್ಲ. ಆದರೆ ಪ್ರಥಮ ಸ್ಥಾನಕ್ಕಾಗಿ ಪ್ರಯತ್ನಿಸುವ ಗುಣ ಮಾತ್ರ ಇವರಿಗೆ ಇದ್ದೇ ಇರುತ್ತದೆ. ಇದೇ ಕ್ವಾಲಿಟಿ ಇವರನ್ನು ಬಾಸ್ ಮಾಡುತ್ತದೆ.

ಸಿಂಹ: ಸಿಂಹ ರಾಶಿಯವರು ಸದಾ ನಾಯಕತ್ವದ ಗುಣವನ್ನೇ ಉಳ್ಳವರು. ಹೆಣ್ಣು ಮಕ್ಕಳು ಕೂಡ, ಎಲ್ಲದರಲ್ಲೂ ತಾನೇ ಮುಂಂದಿರಬೇಕು ಅಂತಾ ಬಯಸುವವರು. ಅದಕ್ಕೆ ತಕ್ಕಂತೆ, ಪ್ರಯತ್ನಿಸಿ, ಗೆಲುವು ಸಾಧಿಸುವವರು. ಇವರು ಬಾಸ್ ಆಗಲು ಸರ್ವ ಪ್ರಯತ್ನ ಪಡುವವರು.

=============================
Horoscope: ಈ 5 ರಾಶಿಯವರು ಉತ್ತಮ ಶಿಕ್ಷಕರಾಗಬಲ್ಲರು..
12 ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಕೆಲವು ಕೆಲಸಗಳು ಸರಿಹೊಂದುತ್ತದೆ. ಅವರಿಗೆ ಹಿಡಿಸದ ಕೆಲಸವನ್ನು ಮಾಡಿದಾಗ, ಆ ರಾಶಿಯವರಿಗೆ ಆ ಕೆಲಸದಿಂದ ಯಾವುದೇ ಲಾಭವಾಗುವುದಿಲ್ಲ. ಹಾಗಾಗಿ ಯಾವುದೇ ಕೆಲಸ ಮಾಡುವ ಮುನ್ನ, ಅಥವಾ ಕಲಿಕೆಗೂ ಮುನ್ನ ಜಾತಕ ನೋಡಿ ಅಂತಾ ಹಿರಿಯರು ಹೇಳ್ತಾರೆ. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಶಿಕ್ಷಕ ವೃತ್ತಿ ಉತ್ತಮವಾಗಿ ಮ್ಯಾಚ್ ಆಗುತ್ತದೆ ಅಂತಾ ಹೇಳಲಿದ್ದೇವೆ.
ಮೇಷ: ಮೇಷ ರಾಶಿಯವರು ಬುದ್ಧಿವಂತಿಕೆಗೆ ಹೆಸರುವಾಸಿ. ಹಾಗಾಗಿ ಇವರು ಮಕ್ಕಳಿಗೆ ಶಿಕ್ಷಕ ನೀಡುವಲ್ಲಿ ಖಂಡಿತ ಯಶಸ್ವಿ ಎನ್ನಿಸಿಕ“ಳ್ಳುತ್ತಾರೆ. ಅಲ್ಲದೇ, 1 ವಿಷಯದ ಬಗ್ಗೆ ವಿವರವಾಗಿ ಜ್ಞಾನ ಹಂಚುವ ಇವರ ಸ್ವಭಾವ ಮಕ್ಕಳಿಗೆ ಖಂಡಿತ ಹಿಡಿಸುತ್ತದೆ.

ಮಿಥುನ: ಮಿಥುನ ರಾಶಿಯವರ ಪ್ರಮುಖ ವಿಚಾಾರ ಅಂದ್ರೆ, ಎದುರಿನವರಿಗೆ ಇವರು ಸುಲಭವಾಗಿ ವಿಷಯವನ್ನು ವಿವರಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಬೇಗ ವಿಷಯವನ್ನು ಅರ್ಥ ಮಾಡಿಕ“ಳ್ಳುತ್ತಾರೆ. ಹಾಗಾಗಿ ಇವರು ಶಿಕ್ಷಕರಾಗಲು ಸದಾ ಅರ್ಹರು.

ಕನ್ಯಾ: ಕನ್ಯಾ ರಾಶಿಯವರು ಸದಾ ಕಾಲ ಎಲ್ಲೆಡೆಯಿಂದ ಜ್ಞಾನ ಪಡೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ. ಮತ್ತು ಆ ಬಗ್ಗೆ ವಿವರಿಸುವುದು ಕೂಡ ಇವರಿಗೆ ಇಷ್ಟದ ಕೆಲಸ. ಅಲ್ಲದೇ, ಎದುರಿನವರಿಗೆ ಬೇಗ ತಿಳಿಯುವಂತೆ ಕಲಿಸುವುದು ಕೂಡ ಇವರಿಗೆ ತಿಳಿದಿದೆ.
ತುಲಾ: ತುಲಾ ರಾಶಿಯವರು ತಮ್ಮ ಮಾತಿನಿಂದಲೇ ಎದುರಿನವರ ಗಮನ ಸೆಳೆಯುವವರು. ಹಾಗಾಗಿ ಇವರಿಗೆ ಶಿಕ್ಷಕ ವೃತ್ತಿ ಅತೀ ಉತ್ತಮ ವೃತ್ತಿ ಎನ್ನಬಹುದು. ತಾಳ್ಮೆಯಿಂದ ಹೇಳಿಕ“ಡುವ ಗುಣ ಇವರಿಗಿದ್ದು, ವಿದ್ಯಾರ್ಥಿಗಳ ಜತೆ ಸಾಮರಸ್ಯದಿಂದಿರುತ್ತಾರೆ.

ಧನು: ಧನು ರಾಶಿಯವರು ಬುದ್ಧಿವಂತರಾಗಿದ್ದು ತಾಳ್ಮೆ ಇರುವವರಾಗಿರುತ್ತಾರೆ. ಕೋಪ ಬಂದಾಗ, ಅದನ್ನು ತಡೆಯಲು ಆಗದಿದ್ದರೂ ಸಹ, ಏನಾದರೂ ಕಲಿಸುವ, ಹೇಳಿಕ“ಡುವ ಸಮಯ ಬಂದಾಗ, ಎಲ್ಲವನ್ನೂ ಬದಿಗಿರಿಸಿ, ತಾಳ್ಮೆಯಿಂದ ಕಲಿಸುತ್ತಾರೆ. ಇವರಿಗೆ ಹಲವು ವಿಷಯದ ಬಗ್ಗೆ ಜ್ಞಾನವಿರುವ ಕಾರಣ, ಇವರು ಅತ್ಯುತ್ತಮ ಶಿಕ್ಷಕರಾಗಬಲ್ಲರು.

================================
Horoscope: ಈ ರಾಶಿಯ ಹೆಣ್ಣು ಮಕ್ಕಳು ಪತಿಯ ಜೀವನದಲ್ಲಿ ಅದೃಷ್ಟ ತರುತ್ತಾರೆ..
ಕೆಲವರು ಹೇಳೋದನ್ನ ನೀವು ಕೇಳಿರುತ್ತೀರಿ. ಅವಳು ನಮ್ಮ ಜೀವನಕ್ಕೆ ಬಂದ ಮೇಲೆ ನಮಗೆ ಇಷ್ಟೆಲ್ಲ ಲಾಭವಾಗಿದ್ದು ಅಂತಾ. ಅಂದ್ರೆ ಹೆಣ್ಣಿನ ಕಾಲ್ಗುಣ ಅಷ್ಟು ಉತ್ತಮವಾಗಿದೆ ಎಂದರ್ಥ. ಹಾಗಾದ್ರೆ ಯಾವ ರಾಶಿಯ ಹೆಣ್ಣು ಮಕ್ಕಳು ಪತಿಗೆ ಅದೃಷ್ಟ ತಂದು ಕ“ಡುತ್ತಾರೆ ಅಂತಾ ತಿಳಿಯೋಣ ಬನ್ನಿ,..
ವೃಷಭ: ವೃಷಭ ರಾಶಿಯ ಹೆಣ್ಣು ಮಕ್ಕಳು ಜೀವನ ನಿರ್ವಹಣೆ ಮಾಡುವುದನ್ನು ಅತ್ಯಂತ ಅದ್ಭುತವಾಗಿ ಕಲಿತಿರುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ, ಮನೆ ಜನರ ಆಸೆಗಳಿಗೆ ಬೆಲೆ ನೀಡುವ ಇವರು, ಉತ್ತಮ ಪತ್ನಿಯಾಗಬಲ್ಲರು.

ಕರ್ಕ: ಕರ್ಕ ರಾಶಿಯ ಹೆಣ್ಣು ಮಕ್ಕಳು ಪತಿಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಅವರಿಗೆ ಬೇಕಾದ ಆರ್ಥಿಕ ಸಹಾಯ ಸೇರಿ ಎಲ್ಲ ರೀತಿಯ ಸಹಾಯ ಮಾಡುತ್ತಾಳೆ. ಅಲ್ಲದೇ ಭಾವುಕ ಸ್ವಭಾವ, ಪ್ರೀತಿ, ಕಾಳಜಿಯ ಸ್ವಭಾವದಿಂದ ಇಡೀ ಫ್ಯಾಮಿಲಿಯನ್ನು ಜತೆಗಿರಿಸುವ ಪ್ರಯತ್ನ ಈ ರಾಶಿಯ ಹೆಣ್ಣು ಮಕ್ಕಳದ್ದಾಗಿರುತ್ತದೆ.

ಕನ್ಯಾ: ಕನ್ಯಾ ರಾಶಿಯವರು ತಮ್ಮ ಪತಿ, ತಮ್ಮ ಮನೆಯವರು ಆರ್ಥಿಕವಾಗಿ ಅಭಿವೃದ್ಧಿ ಆಗಲಿ ಎಂದು ಆಶಿಸುತ್ತಾರೆ. ಹಾಗಾಗಿ ಅದಕ್ಕಾಗಿ ಬೆಂಬಲಿಸುತ್ತಾಳೆ. ಬೆಂಬಲಿಸುವ ರೀತಿಯಲ್ಲಿ ಕಿರಿ ಕಿರಿ ಇದ್ದರೂ, ತಾನು ಅವಮಾನ ಅನುಭವಿಸಿದರೂ, ಮನೆಯವರ ಅಭಿವೃದ್ಧಿಗೆ ಹೆಚ್ಚು ಬೆಂಬಲ ನೀಡುವ ಸ್ವಭಾವ ಇವರದ್ದಾಗಿರುತ್ತದೆ.
ತುಲಾ: ಈ ರಾಶಿ ಚಿಹ್ನೆಯಂತೆ ಇವರು ಸಾಮರಸ್ಯ-ಪ್ರೀತಿಯನ್ನು ಸಮತೋಲವಾಗಿರಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಇವರು ಉತ್ತಮ ಪತ್ನಿಯಾಗಬಲ್ಲರು. ಅಲ್ಲದೇ, ಸದಾ ಪತಿಯ ಕೆಲಸಕ್ಕೆ ಬೆಂಬಲಿಸುತ್ತಾರೆ.
ಮೀನ: ಮೀನ ರಾಶಿಯವರು ಕೂಡ ಸಹಾನುಭೂತಿ ಉಳ್ಳವರು. ತಾಳ್ಮೆ ಉಳ್ಳವರು. ಬೇರೆಯವರ ಸಮಸ್ಯೆಗೆ ಸ್ಪಂದಿಸುವವರು. ಅಲ್ಲದೇ ಆಧ್ಯಾತ್ಮಿಕತೆಗೆ ಹೆಚ್ಚು ಬೆಲೆ ನೀಡುವವರು. ಧಾರ್ಮಿಕ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ಇರುವವರು. ಇವರು ಉತ್ತಮ ಪತ್ನಿ ಆಗಬಲ್ಲರು.
======================
ಈ ರಾಶಿಯವರನ್ನು ಅವಮಾನಿಸಿದರೆ ಜೀವನಪೂರ್ತಿ ನಿಮ್ಮನ್ನು ದೂರವಿಡುತ್ತಾರೆ.
ಕೆಲವು ರಾಶಿಯವರು ಯಾವಾಗಲೂ ಖುಷಿಯಾಗಿರುತ್ತಾರೆ. ಇನ್ನು ಕೆಲವರು ಸದಾ ದುಃಖದಲ್ಲಿರುತ್ತಾರೆ. ಮತ್ತೆ ಕೆಲವರು ಅತೃಪ್ತರಾಗಿರುತ್ತಾರೆ. ಹೀಗೆ ಕೆಲವರದ್ದು ಕೆಲವು ಸ್ವಭಾವ. ಅದೇ ರೀತಿ ಕೆಲ ರಾಶಿಯವರನ್ನು ನೀವೇನಾದರೂ ಅವಮಾನಿಸಿದರೆ, ಅವರು ನಿಮ್ಮನ್ನೆಂದಿಗೂ ಹತ್ತಿರ ಸೇರಿಸುವುದಿಲ್ಲ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ..
ವೃಷಭ ರಾಶಿ: ತಾಳ್ಮೆ ಸ್ವಭಾವವುಳ್ಳ ರಾಶಿ ಅಂದ್ರೆ, ಅದು ವೃಷಭ ರಾಶಿಯವರದ್ದು. ಆದರೆ ಇವರು ತಾಳ್ಮೆ ಕಳೆದುಕ“ಂಡರೆ, ಮತ್ತೆ ನಿಮ್ಮನ್ನು ಮನಸಾರೆ ಎಂದಿಗೂ ಪ್ರೀತಿಸುವುದಿಲ್ಲ. ಹಾಗಾಗಿ ನಿಮ್ಮ ಪ್ರೀತಿ ಪಾತ್ರರು ವೃಷಭ ರಾಶಿಯವರಾಗಿದ್ದರೆ, ಅವರ ಮನಸ್ಸನ್ನು ಎಂದಿಗೂ ನೋಯಿಸಬೇಡಿ. ಅವರನ್ನು ಎಂದಿಗೂ ಅವಮಾನಿಸಬೇಡಿ.

ಕಟಕ ರಾಶಿ: ಕಟಕ ರಾಶಿಯವರು ಎಲ್ಲರನ್ನೂ ತಮ್ಮವರೆಂದೇ ಭಾವಿಸುತ್ತಾರೆ. ಸಹಾಯದ ಮನೋಭಾವ ಉಳ್ಳವರು. ಭಾವನಾತ್ಮಕ ಜೀವಿಗಳು. ಆದರೆ ಇವರ ಮನಸ್ಸಿಗೆ ನೀವು ಸ್ವಲ್ಪ ನೋವು ಮಾಡಿದರೂ ಕೂಡ, ಇವರು ನಿಮ್ಮನ್ನು ದೂರವಿಡುತ್ತಾರೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಗಂಭೀರ ಸ್ವಭಾವದವರು. ಸ್ವಲ್ಪ ಮಾತು ತಪ್ಪಿದರೂ, ಅವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಲ್ಲದೇ, ಅವರು ಮುಖ ನೋಡಿಯೇ, ಎದುರಿನವರು ಎಂಥವರು ಅಂತಾ ಹೇಳಿಬಿಡುತ್ತಾರೆ. ಹಾಗಾಗಿ ಇವರ ಬಳಿ ಸರಿಯಾಗಿ ವರ್ತಿಸಬೇಕು. ನಿಮ್ಮ ವರ್ತನೆಯಲ್ಲಿ ಏರುಪೇರಾದರೂ, ಅವರು ನಿಮ್ಮನ್ನು ದೂರವಿಡುತ್ತಾರೆ.
ಧನು ರಾಶಿ: ಧನು ರಾಶಿಯವರು ತುಂಬ ಸೂಕ್ಷ್ಮ ಸ್ವಭಾವದವರು. ಅವರು ಉತ್ತಮ ಸ್ವಬಾವದವರೂ ಹೌದು. ಆದರೆ ಅವರನ್ನು ನೀವು ತಮಾಷೆ ಮಾಡಿ ಅಥವಾ ಯಾವುದೇ ರೀತಿಯಿಂದ ಅವಮಾನಿಸಿದರೂ, ಅವರು ನಿಮ್ಮನ್ನು ದೂರವಿಡುತ್ತಾರೆ.

==========================
Horoscope: ಈ ರಾಶಿಯವರಿಗೆ ಕಪ್ಪು ಬಣ್ಣ ಅದೃಷ್ಟದ ಬಣ್ಣ
ಕಪ್ಪು ಅಂದ್ರೆ, ಹಲವರಿಗೆ ಅತೀ ಇಷ್ಟವಾಗುವ ಬಣ್ಣ. ಆದರೆ ಇನ್ನು ಕೆಲವರಿಗೆ ತಾವು ಕಪ್ಪು ವಸ್ತ್ರ ಅಥವಾ ವಸ್ತು ಬಳಸಿದರೆ, ಉತ್ತಮವಲ್ಲ ಅಂತಾ ಇದೆ. ಹಾಗಾದ್ರೆ ಯಾವ ರಾಶಿಯವರಿಗೆ ಕಪ್ಪು ಬಣ್ಣ ಉತ್ತಮ ಅಂತಾ ತಿಳಿಯೋಣ ಬನ್ನಿ..
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಕಪ್ಪು ಬಣ್ಣ ಲಕ್ಕಿಯಾಗಿದೆ. ಆದರೆ ಎಲ್ಲ ಕಾಲದಲ್ಲೂ ಅಲ್ಲ. ಎಲ್ಲರೂ ತಮ್ಮ ತಮ್ಮ ಜಾತಕದ ಪ್ರಕಾರ, ಸರಿಯಾಗುವ ಬಣ್ಣ, ದಿನ ಎಲ್ಲವನ್ನು ಪದೇ ಪದೇ ಪರಿಶೀಲಿಸಬೇಕು. ಅದರಂತೆ ವೃಶ್ಚಿಕ ರಾಶಿಯವರಿಗೆ ಕಪ್ಪು ಬಣ್ಣ ಲಕ್ಕಿ ಬಣ್ಣ.

ಮಕರ: ಕಪ್ಪು ಬಣ್ಣದ ಬಳಕೆ ಮಾಡೋದು, ಮಕರ ರಾಶಿಯವರಿಗೆ ಉತ್ತಮ. ಇವರು ಜೀವನದಲ್ಲಿ ಅಭಿವೃದ್ಧಿಯಾಗಲು ಕಪ್ಪು ಬಣ್ಣ ಸಹಕಾರಿಯಾಗಿದೆ. ನೀವು ಕಪ್ಪು ಬಣ್ಣದ ದೇವರ ದಾರ ಬಳಸಬಹುದು.
ಕುಂಭ: ಕುಂಭ ರಾಶಿಯವರು ಹುಂಭರು ಅಂತಲೇ ಹೇಳಲಾಗುತ್ತದೆ. ಏಕೆಂದರೆ ಅವರದ್ದು ಬಂಡಾಯವೇಳುವ ಗುಣ. ಎದುರಿನವರಿಗೆ ಅವರ ನಡುವಳಿಕೆ ಸ್ವಲ್ಪ ಕಿರಿಕಿರಿಯಾಗಬಹುದು. ಅವರು ಕೂಡ ಕಪ್ಪು ಬಣ್ಣ ಬಳಸಿದರೆ, ಜೀವನದಲ್ಲಿ ಸ್ವಲ್ಪ ಅಭಿವೃದ್ಧಿ ಕಾಣಬಹುದು.
ಮೀನ : ಸಹಾನುಭೂತಿ ಗುಣವಿರುವ ಮೀನ ರಾಶಿಯವರಿಗೆ ಕಪ್ಪು ಲಕ್ಕಿ ಬಣ್ಣ. ಮತ್ತು ಇವರು ಹೆಚ್ಚಾಗಿ ಕಪ್ಪು ಉಡುಪು, ಚಪ್ಪಲಿ ಧರಿಸಲು ಇಚ್ಛಿಸುತ್ತಾರೆ. ಯವುದೇ ವಸ್ತುಗಳನ್ನು ಖರೀದಿಸುವುದಿದ್ದರೂ ಕಪ್ಪು ಬಣ್ಣದ್ದೇ ಖರೀದಿಸಲು ಇಚ್ಛಿಸುತ್ತಾರೆ.

=========================================
Horoscope: ಪ್ರವಾಸದ ಬಗ್ಗೆ ಹೆಚ್ಚು ತಿಳುವಳಿಕೆ ಇರುವ ರಾಶಿಯವರು ಇವರು
ನೀವು ಪ್ರವಾಸ ಪ್ಲಾನ್ ಮಾಡಿದಾಗ, ನಿಮ್ಮ ಗ್ರೂಪ್‌ನಲ್ಲಿ ಯಾರಾದರೂ ಪ್ರವಾಸದ ಬಗ್ಗೆ ತುಂಬಾ ನಾಲೆಜ್ ಇರುವ ವ್ಯಕ್ತಿ ಇದ್ದೇ ಇರುತ್ತಾರೆ. ಪ್ರವಾಸಕ್ಕೆ ಹೋಗುವಾಗ, ಈ ದಾರಿಯಲ್ಲಿ ಹೋಗಬೇಕು. ಏನೇನು ತರಬೇಕು..? ಎಲ್ಲಿ ಉಳಿಯಬೇಕು ಎಲ್ಲವೂ ಅವರಿಗೆ ತಿಳಿದಿರುತ್ತದೆ. ಅಂಥ ರಾಶಿಗಳ ಬಗ್ಗೆ ನಾವಿಂದು ಹೇಳಲಿದ್ದೇವೆ.
ಧನು ರಾಶಿ: ಧನು ರಾಶಿಯವರು ಪ್ರವಾಸ ಮಾಡೋದ್ರಲ್ಲಿ ನಂಬರ್ 1 ಅಂತಾನೇ ಹೇಳಬಹುದು. ಪ್ರವಾಸಿ ತಾಣಗಳ ಬಗ್ಗೆ ಚೆನ್ನಾಗಿ ಮಾಹಿತಿ ಹುಡುಕಿ ತೆಗೆದು, ಅದರ ಬಗ್ಗೆ ತಿಳಿದು, ತಮ್ಮ ಜತೆ ಬರುವ ಜನರಿಗೆ ಗೈಡ್ ಮಾಡುವ ಅರ್ಹತೆ ಇವರಿಗಿರುತ್ತದೆ. ಬುದ್ಧಿವಂತರು, ತಿಳುವಳಿಕೆ ಉಳ್ಳವರು ಇವರಾಗಿದ್ದು, ನೂತನ ವಿಷಯ ತಿಳಿಯುವ ಪ್ರಯತ್ನ ಸದಾಕಾಲ ಇವರದ್ದಾಗಿರುತ್ತದೆ.
ತುಲಾ ರಾಶಿ: ತುಲಾ ರಾಶಿಯವರು ಪ್ರವಾಸ ಪ್ರಿಯರು. ಇವರಿಗೆ ಪ್ರತೀ ಕ್ಷಣವನ್ನು ಎಂಜಾಯ್ ಮಾಡುವ, ಪ್ರವಾಸಿ ತಾಣಗಳಲ್ಲಿ ಸಿಗುವ ಆಹಾರ ಸೇವಿಸುವ ಗುಣವಿರುತ್ತದೆ. ಹಾಗಾಗಿ ಪ್ರವಾಸವನ್ನು ಸಖತ್ ಎಂಜಾಯ್ ಮಾಡ್ತಾರೆ.
ಕರ್ಕ ರಾಶಿ: ಕರ್ಕ ರಾಶಿಯವರು ಪ್ರವಾಸ ಪ್ರಿಯರು. ಆದರೆ ಪ್ರವಾಸದ ವೇಳೆ ಎಂಜಾಯ್ ಮಾಡೋದು ಕಡಿಮೆ. ಆದರೆ ಇವರಿಗೆ ಎಲ್ಲೆಲ್ಲಿ ಹೋಗಬಹುದು ಅನ್ನೋ ಐಡಿಯಾ ಇರುತ್ತದೆ. ಅದಕ್ಕಾಗಿ ಸುಮಾರು ಹುಡುಕಾಟ ನಡೆಸಿ, ವಿಷಯ ಕಲೆಕ್ಟ್ ಮಾಡಿರುತ್ತಾರೆ.

======================================
Horoscope: ಜೀವನ ಸಂಗಾತಿ ಜತೆಗೂ ಅಹಂ ತೋರಿಸುವವರು ಈ ರಾಶಿಯವರು
ಕೆಲವರು ಮೊಂಡು ಸ್ವಭಾವ ತೋರಿಸುವುದನ್ನು ನೀವು ನೋಡಿರಬಹುದು. ಎದುರಿನವರೇ ಮಾತನಾಡಿಸಲಿ, ನಾನು ಹೇಳಿದ್ದೇ ನಡೆಯಬೇಕು, ನನಗೆ ಇದೇ ರೀತಿ ಇರಬೇಕು , ಈ ರೀತಿ ಈಗೋ ತೋರಿಸುವ ಜನರನ್ನು ನೀವು ನೋಡಿರುತ್ತೀರಿ. ಅದೇ ರೀತಿ ನಾವಿಂದು ಸಂಗಾತಿ ಜತೆಗೂ ತಮ್ಮ ಅಹಂ ತೋರಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ.
ಮೇಷ ರಾಶಿ: ಮೇಷ ರಾಶಿಯವರು ಎಲ್ಲದರಲ್ಲೂ ತಾವೇ ಮುಂದಿರಬೇಕು ಎನ್ನುವವರು. ಅದೇ ರೀತಿ ಛಲ ಬಿಡದೇ, ಹಿಡಿದ ಕೆಲಸ ಮಾಡುವರು. ಆದರೆ ಜಗಳದ ವಿಷಯ ಅಥವಾ ಯಾವುದೇ ವಿಷಯದಲ್ಲಿ ತಮ್ಮ ಮಾತೇ ಮುಂದಿರಬೇಕು ಎಂಬ ಸ್ವಭಾವವನ್ನು ಇವರು ಕೆಲವು ಬಾರಿ ತೋರಿಸುತ್ತಾರ.
ಮಿಥುನ ರಾಶಿ: ಮಿಥುನ ರಾಶಿಯವರು ಉತ್ತಮ ಸ್ವಭಾವದವರು. ಇವರಿಗೆ ಜಗಳ, ಮನಸ್ತಾಪಗಳು ಇಷ್ಟವಾಗೋದಿಲ್ಲ. ಇವರು ಸದಾ ಎಲ್ಲರ ಜತೆ ನಗು ನಗುತ್ತ ಇರಲು ಬಯಸುತ್ತಾರೆ. ಆದರೆ ಇವರ ಗೌರವಕ್ಕೆ ಧಕ್ಕೆ ಬಂದರೆ, ಇವರು ಎಂದಿಗೂ ಸುಮ್ಮನಿರುವವರಲ್ಲ. ಅದೇ ರೀತಿ ಹಾಗೆ ಮನಸ್ಸಿಗೆ ನೋವು ಮಾಡಿದವರು ಜೀವನ ಸಂಗಾತಿಯಾದರೂ ಸಹ, ಅಂಥವರ ಎದುರು ಮಿಥುನ ರಾಶಿಯವರು ಬಗ್ಗುವುದಿಲ್ಲ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕೋಪ ಹೆಚ್ಚು. ಗಂಭೀರ ಸ್ವಭಾವದವರು. ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ಆದರೆ ಇವರಿಗೆ ಅಹಂ ಹೆಚ್ಚು. ಅದೇ ಅಹಂ ಸಂಬಂಧಗಳನ್ನು ಸಹ ಕಡಿದು ಹಾಕುವ ಸಾಧ್ಯತೆ ಹೆಚ್ಚು.

ಸಿಂಹ ರಾಶಿ: ನಾಯಕತ್ವ ಸ್ವಭಾವವುಳ್ಳ ಸಿಂಹ ರಾಶಿಯವರು ಅಹಂ ಇರುವವರಾಾಗಿರುತ್ತಾರೆ. ಎಲ್ಲದರಲ್ಲೂ ತಾವೇ ಮುಂದಿರಬೇಕು ಎಂದುಕ“ಳ್ಳುತ್ತಾರೆ. ಆದರೆ ಅವರು ಅಂದುಕ“ಂಡಿದ್ದನ್ನು ಸಾಧಿಸಲು ಸಾಧ್ಯವಾಗದಿದ್ದಲ್ಲಿ, ಅವರದನ್ನು ಸಹಿಸುವುದಿಲ್ಲ.
























Discussion about this post