Spiritual: ಭಗವದ್ಗೀತೆಯಲ್ಲಿ ಬರುವ ಈ ವಿಚಾಾರಗಳನ್ನು ತಿಳಿದರೆ ಜೀವನ ಸುಲಭ
ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳು ನಮ್ಮ ಜೀವನವನ್ನು ಉತ್ತಮವಾಗಿಸಲು ಉಪಯುಕ್ತವಾಗಿದೆ. ಹಾಗಾಗಿ ನಾವು ಅದರ ಅರ್ಥವನ್ನು ತಿಳಿದಿರಬೇಕು. ಆಗ ಜೀವನ ಸುಲಭವಾಗುತ್ತದೆ. ಹಾಗಾದ್ರೆ ನಾವು ಭಗವದ್ಗೀತೆಯ ಯಾವ ವಿಚಾರಗಳನ್ನು ತಿಳಿದರೆ, ಜೀವನ ಚೆನ್ನಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ..
ಕರ್ಮ ಮಾಡು ಅದರ ಫಲ ನನಗೆ ಬಿಡು: ಭಗವದ್ಗೀತೆಯಲ್ಲಿ ಕೃಷ್ಣ ಕರ್ಮಣ್ಯವಾಧಿಕಾರಸ್ಥೆ ಮಾ ಫಲೇಶು ಕದಾಚನಾ ಎಂದು ಹೇಳಿದ್ದಾರೆ. ಅಂದ್ರೆ ನೀನು ನಿನ್ನ ಕೆಲಸ ಮಾಡು, ಅದರ ಫಲತಾಂಶದ ಬಗ್ಗೆ ಚಿಂತಿಸಬೇಡ. ಅದನ್ನು ನಾನು ನೋಡಿಕ“ಳ್ಳುತ್ತೇನೆ ಎಂದರ್ಥ. ಹಾಗಾಗಿ ನಾವು ಯಾವುದಾದರೂ ಕೆಲಸ ಮಾಡಿ, ಅದರ ಫಲವನ್ನು ನಿರೀಕ್ಷಿಸದೇ ಇದ್ದರೆ, ಇದರಿಂದ ಬರುವ ಫಲ ನಮಗೆ ದುಃಖ ತರುವುದಿಲ್ಲ. ಬದಲಾಗಿ ನಮ್ಮನ್ನು ಇನ್ನೂ ಶಕ್ತಿ ಶಾಲಿಯನ್ನಾಗಿ ಮಾಡುತ್ತದೆ.
ಏಕೆಂದರೆ ಮನುಷ್ಯ ಯಾವಾಗ ಏನಾದರೂ ಕೆಲಸ ಮಾಡಿ, ಅದರ ಫಲಕ್ಕಾಗಿ ಕಾತುರದಿಂದ ಕಾಯುತ್ತಾನೋ, ಆಗಲೇ ಅವನಿಗೆ ನಿರಾಸೆಯಾಗುತ್ತದೆ. ಅವನು ಗೆಲುವಿಗಾಗಿಯೇ, ಲಾಭಕ್ಕಾಗಿಯೇ ಕಾಯುತ್ತಾನೆ. ಆದರೆ ಅವನಿಗೆ ಸೋಲು ಸಿಕ್ಕರೆ, ಅವನಿಗೆ ನಿರಾಸೆಯಾಗುತ್ತದೆ. ಅದೇ ನಿರೀಕ್ಷೆಯೇ ಇಲ್ಲದವರಿಗೆ ಸೋಲು ನೋವು ತರುವುದಿಲ್ಲ.
ಇನ್ನು ಎರಡನೇಯದಾಗಿ ನಿಮ್ಮ ಮನಸ್ಸನ್ನು ನೀವೇ ಗೆಲ್ಲಿ. ಯಾರು ತಮ್ಮ ಮನಸ್ಸಿನ ಮಾತು ಕೇಳಿ ಜೀವನ ಮಾಡುತ್ತಾರೋ, ಅವರು ಈ ಪ್ರಪಂಚದ ಅತ್ಯಂತ ಖುಷಿ ಮತ್ತು ನೆಮ್ಮದಿಯಾಗಿರುವ ಮನುಷ್ಯನಾಾಗಿರುತ್ತಾನೆ. ಯಾರಾದ್ರೂ ಏನಾದ್ರೂ ಅಂದುಕ“ಂಡರೆ ಅಂತಾ ತಿಳಿದು ಬದುಕು ಮಾಡುವವರು ಎಂದಿಗೂ ಖುಷಿಯಾಗಿರಲು ಸಾಧ್ಯವಿಲ್ಲ.
ಬದಲಾವಣೆಗೆ ಹೆದರದಿರಿ: ನಾವು ಬದಲಾವಣೆಗೆ ಎಂದಿಗೂ ಹೆದರಬಾರದು. ಬದಲಾವಣೆಗೆ ಹೆದರಿ ಇದ್ದಲ್ಲೇ ಇದ್ದರೆ, ಪಾಚಿ ಹಿಡಿದ ನೀರಿನ ಹಾಗಾಗುತ್ತೇವೆ. ಹಾಗಾಗಿ ಇಷ್ಟವಿಲ್ಲದ ಕೆಲಸವನ್ನು ಮಾಡುವ ಬದಲು, ನಿಮಗಿಷ್ಟವಾದ ಕೆಲಸ ಮಾಡಿ. ಕೆಲವು ಸಮಯ ಕೆಲಸ ಕಷ್ಟ ಎನ್ನಿಸಿದರೂ, ಬಳಿಕ ಆ ಕೆಲಸವೂ ನಿಮಗೆ ಸುಲಭವಾಗುತ್ತದೆ.
ನಿರ್ಭಯವಾಗಿ ಪ್ರತಿಕ್ರಿಯಿಸಿ: ಯಾವ ಮನುಷ್ಯ ಯಾವುದಕ್ಕೂ ಹೆದರದೇ, ಬಂದಿದ್ದು ಬರಲಿ ಎದುರಿಸುತ್ತೇನೆ ಎನ್ನುತ್ತಾನೋ, ಅಂಥವರು ಜೀವನದಲ್ಲಿ ನೆಮ್ಮದಿಯಾಗಿ, ಚೆನ್ನಾಗಿರುತ್ತಾರೆ. ಹಾಗಾಗಿಯೇ ಧೈರ್ಯಂ ಸರ್ವತ್ರ ಸಾಧನಂ ಅಂತಾ ಹೇಳೋದು. ಯಾರ ಧೈರ್ಯ ಮಾಡಿ ಮುಂದುವರಿಯುತ್ತಾರೋ, ಅಂಥವರೇ ಜೀವನದಲ್ಲಿ ಉದ್ಧಾರವಾಗೋದು.
ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡಿ. ನಾವು ಯಾವುದೇ ಕೆಲಸ ಮಾಡಿದರೂ, ಅದರ ಹಿಂದೆ ಉತ್ತಮ ಉದ್ದೇಶವಿರಬೇಕು. ಆಗಲೇ ಆ ಕೆಲಸಕ್ಕೆ ಬೆಲೆ ಸಿಗೋದು. ಮತ್ತು ನಮ್ಮ ಜೀವನದಲ್ಲಿ ನಾವು ಯಶಸ್ಸು ಕಾಣೋದು.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಈ 4 ಜನರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ.
ಕಾಶಿಗೆ ಹೋಗಿ ಸಾವನ್ನಪ್ಪಿ, ಅಲ್ಲಿ ನಮ್ಮ ಅಂತ್ಯಸಂಸ್ಕಾರ ನಡೆದರೆ, ನಮಗೆ ಜನ್ಮ ಜನ್ಮಂತರದ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ಮಾತಿದೆ. ಹಾಗಾಗಿಯೇ ಬೇರೆ ಕಡೆಯಿಂದ ಬಂದ ರೋಗಿಗಳು, ವೃದ್ಧರಿಗೆ ಅಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗುತ್ತದೆ. ಅವರ ಮರಣದ ಬಳಿಕ, ಅಲ್ಲೇ ಅವರ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ 4 ಜನರ ಅಂತ್ಯ ಸಂಸ್ಕಾರವನ್ನು ಮಾತ್ರ ಅಲ್ಲಿ ಮಾಡಲಾಗುವುದಿಲ್ಲ. ಹಾಗಾದ್ರೆ ಯಾರ ಅಂತ್ಯಸಂಸ್ಕಾರವನ್ನು ಅಲ್ಲಿ ಮಾಡಲಾಗುವುದಿಲ್ಲ ಮತ್ತು ಏಕೆ ಮಾಡಲಾಗುವುದಿಲ್ಲ ಅಂತ ತಿಳಿಯೋಣ ಬನ್ನಿ..
ಮಕ್ಕಳ ಅಂತ್ಯಕ್ರಿಯೆ : 12 ವಯಸ್ಸಕ್ಕೂ ಚಿಕ್ಕ ಮಕ್ಕಳು ಸಾಾವನ್ನಪ್ಪಿದರೆ, ಅಂಥವರ ದೇಹವನ್ನು ಕಾಶಿಯಲ್ಲಿ ದಹಿಸಲಾಗುವುದಿಲ್ಲ. ಏಕೆಂದರೆ, ಅಂಥ ಮಕ್ಕಳು ಪಾಪಗಳಿಂದ ಮುಕ್ತರಾಗಿರುತ್ತಾರೆ. ಹಾಗಾಗಿ ಚಿಕ್ಕ ಮಕ್ಕಳ ಶವಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ.
ಗರ್ಭಿಣಿಯರ ಅಂತ್ಯಕ್ರಿಯೆ : ಗರ್ಭಿಣಿಯರ ಉದರದಲ್ಲಿ ಮಗು ಇರುವ ಕಾರಣ ಗರ್ಭಿಣಿಯನ್ನು ಹೂಳಲಾಗುತ್ತದೆ. ಇದೇ ಕಾರಣಕ್ಕೆ ಕಾಶಿಯಲ್ಲಿ ಗರ್ಭಿಣಿಯರ ಶವಸಂಸ್ಕಾರ ಮಾಡಲಾಗುವುದಿಲ್ಲ.
ಸಂತರ ಅಂತ್ಯಕ್ರಿಯೆ : ಸಂತರ ಶವವನ್ನು ನದಿಯಲ್ಲಿ ಬಿಡಲಾಗುತ್ತದೆ. ಅಥವಾ ಮಣ್ಣಿನಲ್ಲಿ ಹೂಳಲಾಗುತ್ತದೆ. ಏಕೆಂದರೆ, ಅವರು ತಮ್ಮ ಜೀವನದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡಿ, ದೇವರ ಭಕ್ತಿ, ಜಪ-ತಪ ಮಾಡಿ, ಪುಣ್ಯ ಸಂಪಾದಿಸಿರುತ್ತಾರೆ. ಹಾಗಾಗಿ ಅವರನ್ನು ದಹಿಸಲಾಗುವುದಿಲ್ಲ. ಇದೇ ಕಾರಣಕ್ಕೆ ಕಾಶಿಯಲ್ಲಿ ಸಂತರ ಶವಸಂಸ್ಕಾರ ಮಾಡಲಾಗುವುದಿಲ್ಲ.
ಹಾವು ಕಚ್ಚಿ ಮರಣಿಸಿದವರ ಅಂತ್ಯಕ್ರಿಯೆ : ಹಾವು ಕಚ್ಚಿ ಯಾರು ಸಾಯುತ್ತಾರೋ, ಅವರ ಮೆದುಳು 21 ದಿನ ಸಕ್ರಿಯವಾಗಿರುತ್ತದೆಯಂತೆ. ಹಾಗಾಗಿ ಹಾವು ಕಚ್ಚಿ ಸತ್ತವರ ಶವವನ್ನು ಕಾಶಿಯಲ್ಲಿ ದಹಿಸಲಾಗುವುದಿಲ್ಲ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಈ 3 ಸ್ಥಳಗಳು ಸ್ಮಶಾನಕ್ಕೆ ಸಮ, ಇಂಥ ಜಾಗದಲ್ಲಿ ಎಂದಿಗೂ ಇರಬೇಡಿ
ಚಾಣಕ್ಯರು ಕೆಲವು ಸ್ಥಳಗಳನ್ನು ಸ್ಮಶಾನಕ್ಕೆ ಹೋಲಿಸಿದ್ದಾರೆ. ಏಕೆಂದರೆ, ಆ ಜಾಗದಲ್ಲಿ ಎಂದಿಗೂ ನೆಮ್ಮದಿ ಸಿಗುವುದಿಲ್ಲ, ನಮ್ಮ ಆರ್ಥಿಕ ಪರಿಸ್ಥಿತಿ, ಅರ್ಹತೆ, ಜೀವನ ಎಂದಿಗೂ ಅಭಿವೃದ್ಧಿಯಾಗುವುದಿಲ್ಲ ಎಂದಿದ್ದಾರೆ. ಹಾಗಾದ್ರೆ ಯಾವ ಸ್ಥಳವನ್ನು ಚಾಣಕ್ಯರು ಸ್ಮಶಾನ ಎಂದಿದ್ದಾರೆ, ಏಕೆ ಎಂದಿದ್ದಾರೆ ಅಂತಾ ತಿಳಿಯೋಣ ಬನ್ನಿ..
ಧಾರ್ಮಿಕ ಕಾರ್ಯ ನಡೆಯದ ಮನೆ: ಮನೆಯಲ್ಲಿ ವರ್ಷಕ್ಕೆ 1 ಬಾರಿಯಾದರೂ ಪೂಜೆ, ಪುನಸ್ಕಾರ, ಅಥವಾ ಯಾವುದಾದರೂ 1 ಕಾರ್ಯಕ್ರಮ ನಡೆಯಲೇಬೇಕು. ಹೆಚ್ಚು ಹಣ ಖರ್ಚು ಮಾಡದಿದ್ದರೂ, ತಕ್ಕ ಮಟ್ಟಿಗಾದರೂ ಕೆಲವರಿಗೆ ಅನ್ನದಾನ ಮಾಡಿಯಾದರೂ ಧಾರ್ಮಿಕ ಕಾರ್ಯ ಮಾಡಬೇಕು. ಯಾವ ಮನೆಯಲ್ಲಿ ವರ್ಷದಲ್ಲಿ 1 ಬಾರಿಯೂ ಪೂಜೆ ನಡೆಯುವುದಿಲ್ಲವೋ, ಅಂಥ ಮನೆ ಸ್ಮಶಾನಕ್ಕೆ ಸಮ ಅಂತಾರೆ ಚಾಣಕ್ಯರು.
ಪೂಜೆ ಮಾಡದ, ಭಕ್ತಿ ಇರದ ಜನರಿರುವ ಮನೆ: ಪ್ರತೀ ಹಿಂದೂಗಳ ಮನೆಯಲ್ಲಿ ಪ್ರತಿದಿನ ಪೂಜೆಯಾಗಬೇಕು. ಮನೆ ಎಲ್ಲ ಗುಡಿಸಿ, ಸ್ವಚ್ಛ ಮಾಡಿ. ನಾಲ್ಕು ಹೂವು ತಂದು, ಊದುಬತ್ತಿ ಹಚ್ಚಿ, ದೀಪ ಬೆಳಗಿ, ದೇವರಿಗೆ 1 ಕೈ ಮುಗಿದರೂ, ಅದರಲ್ಲಿ ಭಕ್ತಿ ಎನ್ನುವುದಿದ್ದರೆ, ಅದು ಪೂಜೆಯೇ. ಅಷ್ಟು ಮಾಡಲಾಗದ. ಭಕ್ತಿಯೇ ಇಲ್ಲದ ಜನರಿರುವ ಮನೆ ಸ್ಮಶಾನಕ್ಕೆ ಸಮ ಅಂತಾರೆ ಚಾಣಕ್ಯರು.
ಗುರು-ಹಿರಿಯರನ್ನು ಗೌರವಿಸದ ಮನೆ: ಯಾವ ಮನೆಯಲ್ಲಿ ಗುರು ಹಿರಿಯರಿಗೆ ಗೌರವವಿರುವುದಿಲ್ಲವೋ, ಅಂಥ ಮನೆ ಸ್ಮಶಾನಕ್ಕೆ ಸಮವಂತೆ. ಯೋಗ್ಯತೆ ಮೀರದಿದ್ದರೂ, ಯೋಗ್ಯತೆ ಇರುವಷ್ಟು ಮನೆಯ ಜವಾಬ್ದಾರಿ ವಹಿಸಿ, ಗುರು ಹಿರಿಯರ ಕಷ್ಟಕ್ಕೆ ಸ್ಪಂದಿಸುವುದು ಕೂಡ ಗೌರವಿಸಿದಂತೆ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಗಣಪನಿಗೆ ಗರಿಕೆ ಅರ್ಪಿಸುವ ಹಿಂದಿರುವ ಸತ್ಯವೇನು..?
ಲಕ್ಷ್ಮೀ ದೇವಿಗೆ ಕೆಂಪು ಹೂವು, ಶ್ರೀಕೃಷ್ಣನಿಗೆ ಬೆಣ್ಣೆ, ಶಿವನಿಗೆ ನೀರು, ವಿಷ್ಣುವಿಗೆ ತುಳಸಿ ಹೇಗೆ ಪ್ರಿಯವೋ ಅದೇ ರೀತಿ ಮೋದಕ ಪ್ರಿಯನಾದ ಗಣಪನಿಗೆ ಗರಿಕೆ ಪ್ರಿಯ. ಹಾಗಾದರೆ ನಾವು ನಮ್ಮ ಆಸೆ ಈಡೇರಬೇಕೆಂದು ಪ್ರಾರ್ಥಿಸಿ, ಗಣಪನಿಗೆ ಏಕೆ ಗರಿಕೆ ಇಡುತ್ತೇವೆ ಅಂತಾ ತಿಳಿಯೋಣ ಬನ್ನಿ..
ಲೋಕದಲ್ಲಿ ಎಲ್ಲರಿಗೂ ಉಪದ್ರ ನೀಡುತ್ತಿದ್ದ ಅನಲಾಸುರನ ಸಂಹಾರಕ್ಕಾಗಿ ದೇವಾದಿದೇವತೆಗಳು, ಪಾರ್ವತಿಯ ಬಳಿ ಬರುತ್ತಾರೆ. ಆಗ ಪಾರ್ವತಿಯ ಜತೆಯಿದ್ದ ಗಣೇಶನಿಗೆ ಅನಲಾಸುರನ ಮೇಲೆ ಕೋಪ ಬಂದು, ಆತನ ಮೇಲೆ ಪ್ರಹಾರ ಮಾಡುತ್ತಾನೆ. ಆತನಿಗೆ ಏನೇ ಮಾಡಿದರೂ, ಆತ ಮತ್ತೆ ಮತ್ತೆ ಮರಳಿ ಬರುತ್ತಿದ್ದುದ್ದನ್ನು ಕಂಡ ಗಣೇಶ, ಆತನನ್ನು ನುಂಗಿಯೇ ಬಿಡುತ್ತಾನೆ.
ಆಗ ಗಣೇಶನಿಗೆ ಉದರ ಬೇನೆ ಬರುತ್ತದೆ. ಹೊಟ್ಟೆ ಉರಿಯಲು ಪ್ರಾರಂಭಿಸುತ್ತದೆ. ಹಾಗಾಗಿ ಕಶ್ಯಪ ಋಷಿಗಳು ಗಣೇಶನಿಗೆ 21 ಗರಿಕೆಯನ್ನು ತಿನ್ನಲು ನೀಡುತ್ತಾರೆ. ಆತ 21 ಗರಿಕೆ ಗಂಟು ಸೇವಿಸಿದ ಬಳಿಕ ತಣ್ಣಗಾಗುತ್ತಾನೆ. ಹೀಗಾಗಿಯೇ ಗಣಪನಿಗೆ 21 ಗರಿಕೆ ಗಂಟು ನೀಡಿದರೆ, ಮನದ ಆಸೆ ಈಡೇರಿಸುತ್ತಾನೆ ಅನ್ನೋ ನಂಬಿಕೆ ಇದೆ.
ಗಣೇಶ ಚತುರ್ಥಿ, ಸಂಕಷ್ಟ ಚತುರ್ಥಿ, ಮಂಗಳವಾರ, ಬುಧವಾರದಂದು ಗಣೇಶನಿಗೆ ಪೂಜಿಸುವ ವೇಳೆ 21 ಗರಿಕೆ ಗಂಟು ಅಥವಾ, 21 ಗರಿಕೆಗಳನ್ನು ಇರಿಸಿ ಪೂಜಿಸುವುದು ಉತ್ತಮ ಅಂತಾ ಹೇಳಲಾಗುತ್ತದೆ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಕುಂಕುಮದ ಡಬ್ಬದಲ್ಲಿ ಇದನ್ನು ಇರಿಸಿದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ
ಕುಂಕುಮ ಅನ್ನೋದು ಮುತ್ತೈದೆಗೆ ಬೇಕಾದ ಅತ್ಯಂತ ಅವಶ್ಯಕ ವಸ್ತು. ಸೌಭಾಗ್ಯವತಿಯಾದವಳು ಸದಾ ಕುಂಕುಮ ಧರಿಸಬೇಕು ಅಂತಾ ಹೇಳಲಾಗುತ್ತದೆ. ಇನ್ನು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದರೆ, ಕುಂಕುಮ ಡಬ್ಬದಲ್ಲಿ ಕೆಲ ವಸ್ತುಗಳನ್ನು ಇರಿಸಬೇಕು. ಹಾಗಾದರೆ ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ..
ಕುಂಕುಮ ಡಬ್ಬದಲ್ಲಿ 1 ರೂಪಾಯಿ ನಾಣ್ಯವನ್ನಿರಿಸಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕುಂಕುಮವನ್ನು ನೀವು ಯಾರ ಎದುರಿಗೆ ಹಚ್ಚಬೇಡಿ. ಅಲ್ಲದೇ, ನಿಮ್ಮ ಪತಿ ಮಾತ್ರ ನಿಮಗೆ ಕುಂಕುಮ ಹಚ್ಚಬೇಕು. ಬೇರೆ ಮಹಿಳೆಯರು ಕೂಡ ಕುಂಕುಮ ಹಚ್ಚಲು ಬಂದರೆ, ನೀವೇ ಹಚ್ಚಿಕ“ಳ್ಳಬೇಕು.
ಇನ್ನು ಹುಬ್ಬಿನ ಮಧ್ಯ ಭಾಗದಲ್ಲಿ ಕುಂಕುಮ ಹಚ್ಚಿದರೆ, ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಯೋಚನಾ ಶಕ್ತಿ ಹೆಚ್ಚಾಗುತ್ತದೆ. ಬೈತಲೆಯಲ್ಲಿ ಸಿಂಧೂರ ಹಚ್ಚುವುದು ಕೂಡ ಇದೇ ಕಾರಣಕ್ಕೆ, ವಿವಾಹದ ಬಳಿ ಸ್ತ್ರೀ ಯೋಚಿಸಿ, ನಿರ್ಧಾರ ತೆಗೆದುಕ“ಳ್ಳಲು ಈ ಸಿಂಧೂರ ಕೂಡ ಕಾರಣವಾಗಿದೆ ಅಂದ್ರೆ ನೀವು ನಂಬಲೇಬೇಕು.
ೃೃೃೃೃೃೃೃೃೃೃೃ
ಮದುವೆ ಕಾರ್ಯಕ್ರಮದಲ್ಲಿ ಅನುಸರಿಸಲೇಬೇಕಾದ ಪದ್ಧತಿಗಳಿವು
ಮದುವೆ ಅಂದ್ರೆ ಸಂಭ್ರಮದ ಕಾರ್ಯಕ್ರಮ. ಸುಂದರವಾಾದ ಜೀವನ ನಿರ್ಮಿಸಲು ಸಿಗುವ ಅದ್ಭುತ ಮತ್ತು ಏಕೈಕ ಅವಕಾಶ. ಆದರೆ ನಾವು ಹೇಗೆ ಮದುವೆಯಾದೆವು ಅನ್ನೋದು ಮುಖ್ಯವಲ್ಲ. ಬದಲಾಗಿ ನಾವು ಹೇಗೆ ಜೀವನ ಮಾಡುತ್ತಿದ್ದೇವೆ ಅನ್ನೋದು ಮುಖ್ಯ. ಹಾಗೆ ಸುಂದರ ಜೀವನ ನಮ್ಮದಾಗಬೇಕು ಅಂದ್ರೆ, ಮದುವೆಯೂ ಪದ್ಧತಿ ಪ್ರಕಾರವಾಗಿ ನಡೆಯಬೇಕು. ಹಾಗಾದ್ರೆ ಹಿಂದೂ ಪದ್ಧತಿಯಲ್ಲಿ ನಡೆಯುವ ಮದುವೆ ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ..
ಅರಿಶಿನ ಶಾಸ್ತ್ರ: ಹಿಂದೂ ಪದ್ಧತಿಯಲ್ಲಿ ನಡೆಯುವ ಮದುವೆಯಲ್ಲಿ ಅರಿಶಿನ ಶಾಸ್ತ್ರ ಮಾಡಲೇಬೇಕು. ಅರಿಶಿನದಲ್ಲಿ ನಕಾರಾತ್ಮಕ ಶಕ್ತಿ ಹೋಗಲಾಡಿಸುವ ಗುಣವಿದೆ. ಹಾಗಾಗಿ ಮದುವೆಗೂ 3 ದಿನ ಮುಂಚೆ ಹಳದಿ ಶಾಸ್ತ್ರ ಮಾಡಲಾಗುತ್ತದೆ. ಈ ಶಾಸ್ತ್ರದ ಬಳಿಕ, ವಧು ವರರು ಮನೆಯಿಂದ ಆಚೆ ಹೋಗುವಂತಿಲ್ಲ.
ಮೆಹೆಂದಿ ಶಾಸ್ತ್ರ: ಮೆಹೆಂದಿ ಶಾಸ್ತ್ರವನ್ನು ಗ್ರ್ಯಾಂಡ್ ಆಗಿ ಮಾಡದಿದ್ದರೂ, ವಧು ಮತ್ತು ವರನ ಕೈಗೆ ಮೆಹೆಂದಿ ಹಚ್ಚುತ್ತಾರೆ. ಏಕೆಂದರೆ, ಇದು ಬರೀ ಚೆಂದಕ್ಕೆ ಮಾತ್ರವಲ್ಲ. ಇದರಿಂದ ದೇಹ ತಂಪಾಗುತ್ತದೆ. ಅಲ್ಲದೇ ಕೆಲವು ಕಡೆ ಮೆಹೆಂದಿಯ ಬಣ್ಣ ನೋಡಿ, ಆಕೆಗೆ ವರಿಸುವವನು ಎಷ್ಟು ಪ್ರೀತಿ ಮಾಡುತ್ತಾನೆಂದು ಅಂದಾಜಿಸುತ್ತಾರೆ.
ಸಪ್ತಪದಿ: ಸಪ್ತಪದಿ ತುಳಿಯದೇ ಹಿಂದೂ ವಿವಾಹ ಅಪೂರ್ಣವಾಗುತ್ತದೆ. ಹಾಗಾಗಿ ಅಗ್ನಿದೇವನಿಗೆ 7 ಸುತ್ತು ಪ್ರದಕ್ಷಿಣೆ ಹಾಕಿ, 7 ಪ್ರತಿಜ್ಞೆ ಮಾಡಲಾಗುತ್ತದೆ. ಹಾಗಾಗಿ ಇದನ್ನು ಸಪ್ತಪದಿ ಎನ್ನಲಾಾಗಿದೆ.
ಕನ್ಯಾದಾನ: ಮದುವೆ ಮಾಡುವಾಗ, ವಧುವಿನ ತಂದೆ ತಾಯಿ ವಧುವನ್ನು ವರನಿಗೆ ಅರ್ಪಿಸುತ್ತಾರೆ. ನಮ್ಮ ಮಗಳು ಇನ್ನು ನಿಮ್ಮ ಜವಾಬ್ದಾರಿ ಎನ್ನುತ್ತಾರೆ. ಹೀಗೆ ಅರ್ಪಿಸುವಾಗ, ಕೆಲವು ಪದ್ಧತಿಗಳು ಇರುತ್ತದೆ. ಈ ಪ್ರಕ್ರಿಯೆಯನ್ನು ಕನ್ಯಾದಾನ ಎನ್ನುತ್ತಾರೆ. ಕನ್ಯಾದಾನ ಮಾಡುವುದರಿಂದ ಜನ್ಮ ಜನ್ಮದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗಿದೆ.

=================
ಶಿವ ದೇಹಕ್ಕೆ ಭಸ್ಮ ಲೇಪಿಸಿಕೊಳ್ಳಲು ಕಾರಣವೇನು..?
ದೇವರಲ್ಲಿ ಸರಳವಾಗಿರುವ ದೇವರು ಅಂದರೆ ಶಿವ. ಆತನೂ ಸರಳ, ಆತನಿಗೆ ಭಕ್ತಿ ಮಾಡುವ ರೀತಿಯೂ ಸರಳ. ನೀವು ಶಿವಲಿಂಗಕ್ಕೆ ನೀರು ಅರ್ಪಿಸಿದರೂ ಸಾಕು. ದೇವರು ನಿಮ್ಮ ಭಕ್ತಿಯನ್ನು ಅರ್ಪಿಸಿಕ“ಳ್ಳುತ್ತಾನೆ. ಅದೇ ರೀತಿ ಶಿವ ಕೂಡ ಹುಲಿಯಚರ್ಮ, ರುದ್ರಾಕ್ಷಿ, ಸರ್‌ಪ, ತ್ರಿಶೂಲ, ಭಸ್ಮ ಧಾರಣೆ ಮಾಡುತ್ತಾನೆ.
ಹಾಗಾದ್ರೆ ಶಿವ ಭಸ್ಮ ಧಾರಣೆ ಮಾಡಲು ಕಾರಣವೇನು..? ಶಿವಭಕ್ತರಿಗೂ ಕೂಡ ಶಿವನ ಪೂಜೆ ಭಸ್ಮವೇ ಹಣೆಗೆ ತಿಲಕವಾಗಿರುತ್ತದೆ. ಹಾಗಾದ್ರೆ ಇದರ ಹಿಂದಿರುವ ಸತ್ಯವೇನು ತಿಳಿಯೋಣ ಬನ್ನಿ..
ಸತಿದೇವಿ ಶಿವನನ್ನು ಮದುವೆಯಾಗಿದ್ದು, ಸತಿಯ ತಂದೆ ದಕ್ಷನಿಗೆ ಇಷ್ಟವಿರುವುದಿಲ್ಲ. ಹಾಗಾಗಿ ವಿವಾಹದ ಬಳಿಕ, ದಕ್ಷ ಮಹಾರಾಜ ಶಿವ ಮತ್ತು ಸತಿಯನ್ನೂ ದೂರವಿರಿಸಿರುತ್ತಾನೆ. ದಕ್ಷ ಮಹಾರಾಜ ಯಜ್ಞ ಆಯೋಜಿಸಿ, ಶಿವ ಮತ್ತು ಸತಿಯನ್ನು ಬಿಟ್ಟು ಉಳಿದವರನ್ನೆಲ್ಲ ಯಜ್ಞಕ್ಕೆ ಕರೆಯುತ್ತಾನೆ.
ಸತಿದೇವಿಗೆ ವಿಷಯ ತಿಳಿದು ಆಕೆ ಕರೆಯದಿದ್ದರೂ, ಯಜ್ಞಕ್ಕೆ ಹೋಗುತ್ತಾಳೆ. ಆಗ ಆಕೆಗೆ ಅಲ್ಲಿ ದಕ್ಷ ಮಹಾರಾಜ ಅವಮಾನಿಸುತ್ತಾನೆ. ಇದರಿಂದ ಬೇಸರವಾಗುವ ಸತಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಆಕೆಯ ದೇಹವನ್ನು ಹಿಡಿದು ಶಿವ ಶಿವ ತಾಂಡವ ನೃತ್ಯ ಮಾಡುತ್ತಾನೆ.
ಇದನ್ನು ಕಂಡ ವಿಷ್ಣು ಸತಿಯ ದೇಹವನ್ನು 18 ಭಾಗಗಳಾಗಿ ತುಂಡರಿಸುತ್ತಾನೆ. ಈ ಭಾಗಗಳು ಭೂಮಿಯ ಹಲವು ಭಾಗಗಳಲ್ಲಿ ಬಿದ್ದು, ಆ ಸ್ಥಳ ಶಕ್ತಿ ಪೀಠವಾಗಿ ಮಾರ್ಪಾಡಾಗುತ್ತದೆ. ಆದರೆ ಶಿವನ ಕೈಯಲ್ಲಿ ಬರೀ ಭಸ್ಮ ಉಳಿಯುತ್ತದೆ. ಆಗ ಶಿವ ಸತಿಯ ನೆನಪಿಗಾಗಿ ಭಸ್ಮವನ್ನು ತನ್ನ ದೇಹಕ್ಕೆ ಲೇಪಿಸಿಕ“ಳ್ಳುತ್ತಾನೆ.
ಭಸ್ಮ ಎಂದರೆ ಬೂದಿ ಎಂದರ್ಥ. ಈ ಪ್ರಪಂಚದಲ್ಲಿ ಜನಿಸಿದ ಪ್ರತಿಯೋರ್ವನು ಮುಂದೆ 1 ದಿನ ಬೂದಿಯಾಗಲೇಬೇಕು. ನಮ್ಮ ದೇಹ, ಸೌಂದರ್ಯ, ಮಾತು ಇದ್ಯಾವುದು ಶಾಶ್ವತವಲ್ಲ. ಈ ಪ್ರಪಂಚದಲ್ಲಿರುವ ಯಾವುದೂ ಶಾಶ್ವತವಲ್ಲ. ಎಲ್ಲವೂ ಭಸ್ಮವಾಗಲೇಬೇಕು. ಹಾಗಾಗಿ ಭಸ್ಮವನ್ನು ನಮ್ಮ ಹಣೆಗೆ ಇರಿಸುವ ಮುನ್ನ ನಾವು ಇದನ್ನು ತಿಳಿದಿರಬೇಕು.
Discussion about this post