ಆಲ್ ಇನ್ ಒನ್ ಫುಡ್ ಪ್ರೊಸೆಸರ್ ಬಳಸಿದ್ರೆ ಮನೆಕೆಲಸ ಅತೀ ಸುಲಭ
ಪ್ರತಿದಿನ ತರಕಾರಿ ಕತ್ತರಿಸಿ, ಪಲ್ಯ, ಸಾರು, ಸಾಂಬಾರ್ ಮಾಡಬೇಕಾಗತ್ತೆ. ಅಲ್ಲದೇ, ಚಪಾತಿ, ರೋಟಿ ಮಾಡಬೇಕಾಗತ್ತೆ. ಹೀಗಿರುವಾಗ ಎಲ್ಲಾ ಕೆಲಸ ಭಾರವಾಗಲು ಶುರುವಾಗತ್ತೆ. ಹಾಗಾಗಬಾರದು. ಮನೆಕೆಲಸ ಈಸಿ ಆಗಬೇಕು ಅಂದ್ರೆ, ನೀವು ಆಲ್ ಇನ್ ಒನ್ ಫುಡ್ ಪ್ರೊಸೆಸರ್ ಬಳಸಬಹುದು.
ಇದು ಮಿಕ್ಸಿ ರೀತಿ ಇರುತ್ತದೆ. ಇದರಲ್ಲಿ ನಿಮಗೆ ಬೇರೆ ಬೇರೆ ಬ್ಲೇಡ್ ನೀಡಿರುತ್ತಾರೆ. ಆ ಬ್ಲೇಡ್ ಬಳಸಿ ನೀವು ಬೇರೆ ಬೇರೆ ಕೆಲಸ ಮಾಡಬಹುದು. ಇದರಲ್ಲಿ ಮಸಾಲೆ ರುಬ್ಬಬಹುದು.
ನಿಮಗೆ ಪಲ್ಯ, ಸಾಂಬಾರ್ ಮಾಡಲು ಸಮಯ ಸಾಕಾಗದಿದ್ದಲ್ಲಿ, ನೀವು ತರಕಾರಿ ಕತ್ತರಿಸಲು ಬೇರೆ ಬ್ಲೇಡ್ ಬಳಸಿ, ತರಕಾರಿ, ಕತ್ತರಿಸಬಹುದು. ಈರುಳ್ಳಿ, ಸೌತೇಕಾಯಿ, ಹೀಗೆ ಯಾವ ತರಕಾರಿ ಬೇಕಾದ್ರೂ ಕತ್ತರಿಸಬಹುದು. ಸಲಾಡ್ ಮಾಡಲು ಕೂಡ ಬಲು ಸುಲಭವಾಗುತ್ತದೆ.
ಇನ್ನು ಚಪಾತಿಗಾಗಿ ಕೈಯಿಂದ ಹಿಟ್ಟು ಕಲಿಸಿ, ಕಲಿಸಿ ಕೈ ನೋವು ಬಂದಿದ್ದರೆ, ಬೇರೆ ಬ್ಲೇಡ್ ಬಳಸಿ, ಜಾರ್‌ಗೆ ಹುಡಿ, ಉಪ್ಪು, ನೀರು ಹಾಕಿ ಬಟನ್ ಪ್ರೆಸ್ ಮಾಡಿದ್ರೆ ಸಾಕು. ಚಪಾತಿ ಹಿಟ್ಟು ರೆಡಿಯಾಗುತ್ತದೆ. ಎಗ್ ಬಳಸುವವರು ಇದರಲ್ಲಿ ಎಲ್ಲೋ ಪಾರ್ಟ್ ಹಾಕಿ, ಪೇಸ್ಟ್ ಮಾಡಬಹುದು. ಇದರ ಬೆಲೆ 2ರಿಂದ 3 ಸಾವಿರದ ತನಕವಿರುತ್ತದೆ. ಆನ್‌ಲೈನ್‌ನಲ್ಲೇ ನೀವು ಇದನ್ನು ಖರೀದಿಸಬಹುದು.
ೃೃೃೃೃೃೃೃೃೃೃೃೃೃೃೃೃೃೃೃ
ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸ್ಮಾರ್ಟ್ ಟೇಬಲ್
ನೀವು ನಾರ್ಮಲ್ ಆಗಿರುವ Table, ಮರದ Table ನೋಡಿರಬಹುದು. ಆದರೆ ನಿಮ್ಮ Mobile Charge ಮಾಡುವ Table ನೋಡಿದ್ದೀರಾ..? ಹೌದು.. ಅಂಥ Table ಕೂಡ ಈಗ ಮಾರುಕಟ್ಟೆಗೆ ಬಂದಿದೆ. ಹಾಗಾದ್ರೆ ಆ ಟೇಬಲ್ ವಿಶೇಷತೆಗಳೇನು..? ಅದಕ್ಕೆಷ್ಟು ಬೆಲೆ ಇತ್ಯಾದಿ ತಿಳಿಯೋಣ ಬನ್ನಿ..
ಈ ಸ್ಮಾರ್ಟ್ ಟೇಬಲ್‌ನ್ನು ನೀವು ನಿಮ್ಮ ಬೆಡ್ ಪಕ್ಕ ಇರಿಸಬೇಕು. ರಾತ್ರಿ ನಿಮಗೆ ರೂಮ್‌ನಲ್ಲಿ ಡಿಮ್ ಲೈಟ್ ಬೇಕು ಅಂದ್ರೆ, ಇದೇ ಟೇಬಲ್‌ನಲ್ಲಿ ಲ್ಯಾಂಪ್ ಇದೆ. ಬೇಕಾದ ಹಾಗೆ ಲೈಟ್ ಸೆಟ್ ಮಾಡಬಹುದು.
ಇನ್ನು ಇತ್ತ Mobileನಲ್ಲಿ ಚಾರ್ಜ್ ಕಡಿಮೆ ಇದೆ. ಅತ್ತ ನಿಮಗೆ ನಿದ್ದೆ ಬರುತ್ತಿದೆ ಎಂದಲ್ಲಿ, ನೀವು ಈ ಟೇಬಲ್ ಮೇಲೆ ನಿಮ್ಮ Mobile ಇರಿಸಿದರೆ ತನ್ನಿಂದ ತಾನೇ ನಿಮ್ಮ ಸೆಲ್ ಫೋನ್ ಚಾರ್ಜ್ ಆಗುತ್ತದೆ. ಏಕೆಂದರೆ ಇದರಲ್ಲಿ ವೈರ್‌ಲೆಸ್ ಚಾರ್ಜರ್ ಕೂಡ ಇದೆ.
ಇದರಲ್ಲಿ ಸ್ಪೀಕರ್ ಇದ್ದು, ಈ ಸ್ಪೀಕರ್‌ಗಳನ್ನು ನೀವು ಟಿವಿ ಜತೆ ಕನೆಕ್ಟ್ ಮಾಡಬಹುದು. ಅಲ್ಲದೇ ಇದರಲ್ಲಿ ನೀವು ನಿಮಗೆ ಬೇಕಾದ ಅತ್ಯಮೂಲ್ಯ ವಸ್ತುಗಳನ್ನು ಇರಿಸಬಹುದು. ಏಕೆಂದರೆ, ನಿಮ್ಮ ಬೆರಳಚ್ಚು ಬೀಳುವ ತನಕ ಇದರ ಲಾಕ್ ಓಪನ್ ಆಗುವುದಿಲ್ಲ. ಇನ್ನು ಇದರ ಬೆಲೆ ಎಷ್ಟು ಅಂತಾ ನೀವು ಕೇಳಿದರೆ, ಇದರ ಬೆಲೆ 20 ಸಾವಿರದಿಂದ ಶುರುವಾಗುತ್ತದೆ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಚಿಕ್ಕ ವಸ್ತ್ರಗಳನ್ನು ವಾಶ್ ಮಾಡಲು ಚಿಕ್ಕ ವಾಶಿಂಗ್ ಮಷಿನ್
ನಾವು ಪಿಜಿ ಅಥವಾ ಬೇರೆ ಊರಲ್ಲಿ ಸಪರೇಟ್ ಆಗಿ ರೂಮ್ ಮಾಡಿಕ“ಂಡಿದ್ದಾಗ, ನಮಗೆ ಬಟ್ಟೆ ವಾಶ್ ಮಾಡಲು ಸಮಯ ಸಿಗುವುದಿಲ್ಲ. ಇನ್ನು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಅವರ ಬಟ್ಟೆ ವಾಶಾ ಮಾಡೋದ್ರಲ್ಲೇ ಎಲ್ಲ ಸಮಯ ವ್ಯರ್ಥವಾಗುತ್ತದೆ. ಆದರೆ ನಿಮ್ಮ ಬಳಿ ಈ ಚಿಕ್ಕ ವಾಶಿಂಗ್ ಮಷಿನ್ ಇದ್ದಲ್ಲಿ, ನೀವು ಚಿಕ್ಕ ಚಿಕ್ಕ ಬಟ್ಟೆಗಳನ್ನು ಈಸಿಯಾಗಿ ವಾಶ್ ಮಾಡಬಹುದು.
ಬಕೇಟ್ ರೀತಿ ಇರುವ ಈ ಸಣ್ಣ ವಾಶಿಂಗ್ ಮಷಿನ್ ನಲ್ಲಿ ನೀವು ಬಟ್ಟೆ ಹಾಕಿ, ನೀರು, ವಾಶಿಂಗ್ ಪೌಡರ್ ಹಾಕಿ ಬಟನ್ ಪ್ರೆಸ್ ಮಾಡಬೇಕು. ಬಟ್ಟೆ ವಾಶ್ ಆದ ಬಳಿಕ, ನೀವು ಅದರ ಪೈಪ್ ಓಪನ್ ಮಾಡಿ, ಅದರಿಂದ ನೀರು ಹೋಗುವಂತೆ ಮಾಡಬೇಕು. ಬಳಿಕ ಇದರ ಜತೆ ಸಿಗುವ ಇನ್ನ“ಂದು ವಸ್ತುವನ್ನು ಹಾಕಿ, ಬಟ್ಟೆ ಡ್ರೈ ಮಾಡಬೇಕು.
ಇದು ಆಟೋಮೆಟಿಕ್ ವಾಶಿಂಗ್ ಮಷಿನ್ ರೀತಿ ಕೆಲಸ ಮಾಡುವುದಿಲ್ಲ. ಬದಲಾಗಿ ನೀವು ಪದೇ ಪದೇ ಈ ವಾಶಿಂಗ್ ಮಷಿನ್ ಬಳಿ ಹೋಗಿ, ಇದಕ್ಕೆ ಕೆಲಸ ನೀಡಬೇಕಾಗುತ್ತದೆ. ಇದನ್ನು ಫೋಲ್ಡ್ ಮಾಡಿ, ನೀವು ಪ್ರವಾಸಕ್ಕೂ ತೆಗೆದುಕ“ಂಡು ಹೋಗಬಹುದು. 2 ಸಾವಿರ ರೂಪಾಯಿಗೂ ಕಡಿಮೆಗೆ ನಿಮಗೆ ಈ ಮಿನಿ ವಾಶಿಂಗ್ ಮಷಿನ್ ಸಿಗುತ್ತದೆ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ನಿಮ್ಮ ಕಾರ್ ಚೆಂದವಾಗಿರಿಸಲು ಈ ವಸ್ತುಗಳನ್ನು ಖಂಡಿತವಾಗಿಯೂ ಬಳಸಿ
ಯಾರ ಬಳಿ ಕಾರ್ ಇರುತ್ತದೆಯೋ, ಅವರಿಗೆ ಮಾತ್ರ ಆ ಕಾರ್ ಹೇಗೆ ಮೇಂಟೇನ್ ಮಾಡುತ್ತಿದ್ದಾರೆಂದು ತಿಳಿದಿರುತ್ತದೆ. ಏಕೆಂದರೆ, ಕಾರ್ ಖರೀದಿಸಿದರೆ ಸಾಲದು. ಅದೇ ರೀತಿ ಅದಕ್ಕೆ ಇನ್ಶುರೆನ್ಸ್, ಸರ್ವಿಸ್ ಎಲ್ಲವನ್ನೂ ಕಾಲ ಕಾಲಕ್ಕೆ ಮಾಡುತ್ತಿರಬೇಕು. ಕಾರ್ ಬಿಸಿಯಾಗದಂತೆ ನೋಡಿಕ“ಳ್ಳಬೇಕು. ಹಾಗಾಗಿ ನಾವಿಂದು ಕಾರ್ ಚೆಂದವಾಗಿರಿಸಲು ಬೇಕಿರುವ ಕೆಲ ವಸ್ತುಗಳ ಬಗ್ಗೆ ಹೇಳಲಿದ್ದೇವೆ.
ಕಾರ್ ಡೆಂಟ್ ಪುಲ್ಲರ್: ಕಾರನ್ನು ಎಷ್ಟೇ ಸಂಭಾಳಿಸಿದರೂ, ಕಾರ್ ಕೆಲವು ಸಾರಿ ಚಪ್ಪಟೆಯಾಗಬಹುದು. ಹಾಗೆ ಚಪ್ಪಟೆಯಾದ ಭಾಗವನ್ನು ಸರಿ ಮಾಡುವ ವಸ್ತುವೇ, ಈ ಕಾರ್ ಡೆಂಟ್ ಪುಲ್ಲರ್. ಇದನ್ನು ಚಪ್ಪಟೆಯಾದ ಕಡೆ ಹಾಕಿ ಗಟ್ಟಿಯಾಗಿ ಎಳೆದರೆ, ಕಾರ್ ಮುಂಚಿನ ರೀತಿ ಸರಿಯಾಗುತ್ತದೆ.
ವೆಂಟಿಲೇಟೇಡ್ ಸೀಟ್ ಕವರ್: ಬಿಸಿಲಿದ್ದಾಗ, ಕಾರ್‌ನ ಸೀಟ್ ಕಾದ ಹೆಂಚಿನಂತಾಗಿರುತ್ತದೆ. ಆದರೆ ನಿಮಗೆ ಕೂತಾಗ ಕೂಲ್ ಕೂಲ್ ಆಗುವ ಅನುಭವ ಬೇಕಿದ್ದಲ್ಲಿ, ನೀವು ವೆಂಟಿಲೇಟೇಡ್ ಸೀಟ್ ಕವರ್ ಹಾಕಿ, ಚಾರ್ಜ್ ಮಾಡಿದರೆ, ತಂಪಾದ ಸೀಟ್ ನಿಮ್ಮ ಪಾಾಲಾಗುತ್ತದೆ.
ಈಸಿ ಕಾರ್ ಕವರ್: ಇದು ಬಾಲ್ ರೀತಿಯ ಶೇಫ್‌ನಲ್ಲಿರುವ ಕವರ್ ಆಗಿದ್ದು, ನೀವು ಈಸಿಯಾಗಿ ನಿಮ್ಮ ಕಾರ್‌ನ್ನು ಮಳೆ,. ಬಿಸಿಲು, ಕಾಗೆ, ಧೂಳು ಎಲ್ಲದರಿಂದಲೂ ರಕ್ಷಿಸಬಹುದು. ಕಾರ್‌ಗೆ ಸಿಕ್ಕಿಸಿ, ಕವರ್ ಮಾಡಿ, ಬಾಲ್‌ನ್ನು ಡಿಕ್ಕಿಯಲ್ಲಿ ಹಾಕಿದ್ರೆ ಆಯ್ತು. ಈಸಿಯಾಗಿ ಕಾರ್ ಕವರ್ ಮಾಡಬಹುದು. ಈಸಿಯಾಗಿ ಕಾರ್ ಕವರ್ ಓಪನ್ ಮಾಡಬಹುದು.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
Robot Dog ಅಂದ್ರೇನು..? ಇದನ್ನು ಎಲ್ಲಿ ಬಳಕೆ ಮಾಡಲಾಗುತ್ತದೆ..?
ಈ ಪ್ರಪಂಚದಲ್ಲಿ ಹಲವು ದೇಶಗಳು ಭಾರತಕ್ಕಿಂತಲೂ ತಂತ್ರಜ್ಞಾನದಲ್ಲಿ ಮುಂದಿದೆ. ಅಂಥ ದೇಶಗಳು ತಮ್ಮ ಸೇನಾಾಬಲ ಹೆಚ್ಚಿಸಲು, ಕೆಲವು ಗ್ಯಾಜೇಟ್ ಬಳಸುತ್ತದೆ. ಅಂಥ ಗ್ಯಾಜೇಟ್‌ಗಳಲ್ಲಿ ರೋಬೋಟ್ ಡಾಗ್ ಕೂಡ 1. ಹಾಗಾದ್ರೆ ರೋಬೋಟ್ ಡಾಗ್ ಏಕೆ ಬಳಸುತ್ತಾರೆ..? ಭಾವನೆ ಇಲ್ಲದ ನಾಯಿ ಹೇಗೆ ಬಳಕೆಯಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ರೋಬೋಟ್ ಡಾಗ್‌ಗಳು ಜೀವವಿರುವ ನಾಯಿಯ ರೀತಿಯೇ ಬಿಹೇವ್ ಮಾಡುತ್ತದೆ. ಜಂಪ್ ಮಾಡುತ್ತದೆ. ಡಾನ್ಸ್ ಮಾಡುತ್ತದೆ. ನಾಯಿ ನಿಮಗೆ ಶೇಕ್ ಹ್ಯಾಂಡ್ ನೀಡುವ ರೀತಿ, ಇದು ಕೂಡ ಶೇಕ್ ಹ್ಯಾಂಡ್ ನೀಡುತ್ತದೆ. ನಮಸ್ಕಾರವೂ ಮಾಡುತ್ತದೆ.
ನೀವು ಈ ನಾಯಿಯನ್ನು ಮೆಟ್ಟಿಲ ಬಳಿ ಅಥವಾ ಯಾವುದೇ ಅಡ್ಡವಿರುವ ವಸ್ತುವಿನ ಬಳಿ ಬಿಟ್ಟರೆ, ಅದು ತನ್ನ ಮುಂದಿರುವ ಕ್ಯಾಮೇರಾ ಮೂಲಕ, ಮುಂದಿನ ವಸ್ತುವನ್ನು ಕಂಡುಹಿಡಿದು, ಅದಕ್ಕೆ ತಕ್ಕಂತೆ, ಚಲಿಸುತ್ತದೆ.
ಇನ್ನು ಈ ನಾಯಿಯ ಉಪಯೋಗವೇನು ಅಂತಾ ನೋಡೋದಾದ್ರೆ, ಯುಎಸ್ ಮತ್ತು ಚೈನಾದಲ್ಲಿ ಈ ನಾಯಿಯನ್ನು ಸೇನೆಯಲ್ಲಿ ಬಳಸಲಾಗುತ್ತದೆ. ಪೋಲೀಸ್ ನಾಯಿ ಎಲ್ಲೆಲ್ಲಿ ಹೋಗಲು ಸಾಧ್ಯವಿಲ್ಲವೋ, ಅಂಥ ಕಡೆ ಈ ರೋಬೋಟ್ ಡಾಗ್ ಹೋಗುತ್ತದೆ.
ಇದು ತನ್ನ ಮೇಲೆ ವಸ್ತುಗಳನ್ನು ಇರಿಸಿಕ“ಳ್ಳುವ ಸಾಮರ್ಥ್ಯ ಹೊಂದಿದೆ. ಅಲ್ಲದೇ, ಇದರ ಮೂಲಕ ಬೆಂಕಿ ಬಿದ್ದ ಜಾಗದಲ್ಲಿ ನೀರು ಹಾಕಿ , ಬೆಂಕಿ ನಂದಿಸಬಹುದು. ಕೆಲವು ಕಡೆ ಇದನ್ನು ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಸಲಾಗುತ್ತಿದೆ. ಫುಡ್ ಡಿಲೆವರಿಯನ್ನು ಈ ನಾಯಿಯ ಮೂಲಕ ಮಾಡಿಸಲಾಗುತ್ತದೆ. ಕೆಲವು ಕಡೆ ಪ್ರವಾಸಿ ತಾಣಗಳಲ್ಲಿ ಲಗೇಜ್ ಕೂಡ ಇದರ ಮೂಲಕವೇ ಮೂವ್ ಮಾಡಲಾಗುತ್ತದೆ. ಇದರ ಬೆಲೆ ಶುರುವಾಗೋದು 3 ಲಕ್ಷದಿಂದ.
==============================
Star Hotel ಗಳಿಗೆ ಹೋದಾಗ ನೀವು ಯಾವ ವಸ್ತುಗಳನ್ನು ತರಬಾರದು ಮತ್ತು ತರಬಹುದು..?
ನಿಮಗೆ ಯಾವಾಗಲಾದರೂ 3 ಸ್ಟಾರ್, 5 ಸ್ಟಾರ್ ಹೋಟೇಲ್‌ಗೆ ಹೋಗಿ ಅಲ್ಲಿ ಉಳಿಯುವ ಅವಕಾಶ ಸಿಕ್ಕಿದರೆ, ನೀವು ಅಲ್ಲಿಂದ ಏನನ್ನು ತರಬಹುದು, ಮತ್ತು ಏನನ್ನು ತರಬಾರದು ಅನ್ನೋ ಬಗ್ಗೆ ನಾವಿಂದು ನಿಮಗೆ ಟಿಪ್ಸ್ ನೀಡಲಿದ್ದೇವೆ.
ಅಲ್ಲಿ ಟೇಬಲ್ ಮೇಲೆ ನಿಮಗೆ ನೋಟ್ ಪ್ಯಾಡ್, ಪೇಪರ್ ಮತ್ತು ಪೆನ್ ಇರಿಸಿರುತ್ತಾರೆ. ನೀವು ಪೇಪರ್ -ಪೆನ್ನ ತರಬಹುದು. ನೋಟ್ ಪ್ಯಾಡ್ ತರಬಾರದು.
ಟೀ ಕಾಫಿ ಮಾಡಿ ಕುಡಿಯಲು ಮಗ್, ಕೆಟಲ್, ಸಕ್ಕರೆ ಪುಡಿ, ಟೀ-ಕಾಫಿ ಪುಡಿ ಇರಿಸಿರುತ್ತಾರೆ. ಆದರೆ ನೀವು ಮಗ್ ಮತ್ತು ಕೆಟಲ್ ತರಬಾರದು. ಕಾಫಿ- ಟೀ ಪುಡಿ, ಸಕ್ಕರೆ ಪುಡಿ ತರಬಹುದು.
ನೀರಿನ ಬಾಟಲಿ ತರಬಹುದು. ಅಲ್ಲೇ ಇರುವ ಕಪ್ ತರಬಾರದು.
ಇನ್ನು ಬಾತ್ ರೂಮ್‌್ನಲ್ಲಿ ಟವೆಲ್, ಶ್ಯಾಂಪೂ, ಬ್ರಶ್, ಸೋಪ್, ಇತ್ಯಾದಿ ಇಡುತ್ತಾರೆ. ನೀವು ಶ್ಯಾಂಪೂ, ಬ್ರಶ್, ಸೋಪ್, ಎಲ್ಲ ತರಬಹುದು. ಆದರೆ ಟವಲ್ ತರಕೂಡದು.
ಲಾಂಡ್ರಿ ಬ್ಯಾಗ್, ಹ್ಯಾಂಗರ್, ಮತ್ತು ಕೆಲ ಬಟ್ಟೆಗಳನ್ನು ಇರಿಸಿರುತ್ತಾರೆ. ನೀವು ಲಾಂಡ್ರಿ ಬ್ಯಾಗ್ ಮಾತ್ರ ತರಬಹುದು. ಆದರೆ ಹ್ಯಾಂಗರ್, ಮತ್ತು ಬಟ್ಟೆಗಳನ್ನು ತರಬಾರದು.
ಫ್ರಿಜ್‌ನಲ್ಲಿ ಕೆಲ ಡ್ರಿಂಕ್ಸ್ ಇಡುತ್ತಾರೆ. ಕೆಲವು ಕಡೆ ನೀವು ಅಲ್ಲೇ ಆ ಡ್ರಿಂಕ್ಸ್ ಕುಡಿಯಬಹುದು. ಮನೆಗೆ ತಗೆದುಕ“ಂಡು ಹೋಗುವಂತಿಲ್ಲ.
ಶೂ ಪಾಲಿಶ್ ಮಾಡಲು, ಬ್ರಶ್ ಮತ್ತು ಶೂ ಶೈನರ್ ಇಡುತ್ತಾರೆ. ಇದರಲ್ಲಿ ಶೂ ಶೈನರ್ ತರಬಹುದು ಆದ್ರೆ ಶೂ ಬ್ರಶ್ ಅಲ್ಲ. ಇನ್ನು ಅಲ್ಲಿನ ವಸ್ತುವನ್ನು ತರುವ ಭರದಲ್ಲಿ, ನೀವು ನಿಮ್ಮ ವಸ್ತುವನ್ನೇನಾದರೂ ಬಿಟ್ಟೀದ್ದೀರಾ ಅಂತಾ ಚೆಕ್ ಮಾಡಬೇಕು ಅಷ್ಟೇ.
=======================
ಹಬ್ಬದ ಸಂದರ್ಭದಲ್ಲಿ ನೀವು ನಿಮ್ಮ ಮನೆಯ ಮಹಿಳೆಯರಿಗೆ ನೀಡಬಹುದಾದ Gifts
ಇದೀಗ ಹಬ್ಬಗಳೆಲ್ಲ ಶುರುವಾಗಿದೆ. ಹಬ್ಬಕ್ಕೆ ಮನೆಯಲ್ಲಿರುವ ಸಹೋದರಿ, ಪತ್ನಿ, ಮಗಳಿಗೆ ಏನಾದರೂ ಗಿಫ್ಟ್ ನೀಡಬೇಕು ಅಂತಾ ನಿಮಗೆ ಅನ್ನಿಸಬಹುದು. ಯಾವಾಗ ನೋಡಿದರೂ ಬಟ್ಟೆ, ಚಪ್ಪಲಿ ಗಿಫ್ಟ್ ಮಾಡಿದ್ರೆ, ಅದು ತುಂಬಾ ಬೋರಿಂಗ್ ಆಗಿರತ್ತೆ. ಹಾಗಾಗಿಯೇ ನಾವಿಂದು ಯಾವ ರೀತಿಯ ಗಿಫ್ಟ್ ನೀಡಬಹುದು ಎಂಬ ಬಗ್ಗೆ ಐಡಿಯಾ ನೀಡಲಿದ್ದೇವೆ.
ಟೂ ಇನ್ 1 ಸ್ಕಾಲ್ಫ್ ಮಸಾಜರ್: ಈ ಮಸಾಜರ್‌ನಲ್ಲಿ ಎಣ್ಣೆ ಹಾಕಿ, ತಲೆಗೆ ಮಸಾಜ್ ಮಾಡಿದರೆ, ತಲೆನೋವು ಹೋಗುತ್ತದೆ. ಸೂಪರ್ ಮಸಾಜ್ ಕೂಡ ಆಗುತ್ತದೆ.
ಕ್ರ್ಯಾಂಪ್ ಮಸಾಜರ್: ಹೆಣ್ಣು ಮಕ್ಕಳಿಗೆ ತಿಂಗಳ ಸಮಸ್ಯೆ ಕಾಡೋದು ಸಹಜ. ಆದರೆ ನೀವು ಕ್ರ್ಯಾಂಪ್ ಮಸಾಜರ್ ನೀಡಿದರೆ, ಆ ನೋವಿಗೆ ಪರಿಹಾರ ಸಿಕ್ಕಂತೆ. ಈ ಮಸಾಜರ್‌ನ್ನು ಹೊಟ್ಟೆಗೆ ಕಟ್ಟಿದ್ರೆ ಅದು ಹಾಟ್ ಬ್ಯಾಗ್ ರೀತಿ ಕೆಲಸ ಮಾಡುತ್ತದೆ. ನೀವು ಬಟನ್ ಮೂಲಕ, ತಾಪಮಾನವನ್ನು ಹೆಚ್ಚು- ಕಡಿಮೆ ಮಾಡಿಕ“ಳ್ಳಬಹುದು.
ಐಫೋನ್ ಕೀ ಬಂಚ್: ನಿಮ್ಮ ಸಹೋದರಿಯ ಬಳಿ ಐಫೋನ್ ಇದ್ದರೆ, ನೀವು ಈ ಐಫೋನ್ ಕೀ ಬಂಚ್ ಗಿಫ್ಟ್ ಮಾಡಬಹುದು. ಈ ಕೀ ಬಂಚ್‌ನ ಸ್ಮಾರ್ಟ್ ಬಟನ್ ಆನ್ ಮಾಡಿ, ಬ್ಯಾಗ್‌ನಲ್ಲಿ ಹಾಕಿದ್ರೆ ಆಯ್ತು. ನಿಮ್ಮ ಬ್ಯಾಗ್ ಕಳೆದು ಹೋದ್ರೆ, ನೀವು ನಿಮ್ಮ Mobile ಆನ್ ಮಾಡಿ, ನಿಮ್ಮ ಬ್ಯಾಗ್ ಎಲ್ಲಿದೆ, ಯಾವ ಲೋಕೇಷನ್‌ನಲ್ಲಿ ಇದೆ ಅಂತಾ ಚೆಕ್ ಮಾಡಬಹುದು.
ಸ್ಮಾರ್ಟ್ ಮೇಕಪ್ ಕಿಟ್: ಈ ಕಿಟ್‌ನಲ್ಲಿ ಎಲ್ಲ ಮೇಕಪ್ ವಸ್ತುಗಳನ್ನು ಇರಿಸಬಹುದು. ಕನ್ನಡಿ ಇರುವುದರಿಂದ ಇದರ ಮುಂದೆ ನೀವು ಮೇಕಪ್ ಮಾಡಬಹುದು. ಜತೆಗೆ ಇದರಲ್ಲಿ ಎಲ್‌ಇಡಿ ಲೈಟ್ ಇದೆ. ಸೆಕೆಯಾದ್ರೆ ಮುಖಕ್ಕೆ ಫ್ಯಾನ್ ಕೂಡ ಬಳಸಬಹುದು.
========================
ಈ ಸಲ ದೀಪಾವಳಿಗೆ ಈ ವಸ್ತುಗಳಿಂದ ಮನೆ ಕ್ಲೀನ್ ಮಾಡಿ
ದೀಪಾವಳಿಗೆ ಮನೆ ಎಲ್ಲ ಕ್ಲೀನ್ ಮಾಡುವುದು ವಾಡಿಕೆ. ಎಲ್ಲ ಹಬ್ಬಗಳಿಗೂ ಮನೆ ಕ್ಲೀನ್ ಮಾಡುತ್ತಾರೆ. ಆದರೆ ದೀಪಾವಳಿ ಲಕ್ಷ್ಮೀ ಪೂಜೆ ಅಂದ್ರೆ ಸ್ವಲ್ಪ ಸ್ಪೆಶಲ್. ಹಾಗಾಗಿ ಇಂದು ನಾವು ಮನೆ ಕ್ಲೀನ್ ಮಾಡಲು ಸುಲಭವಾಗಿಸಬಹುದಾದ ಕೆಲವು ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸ್ಟೀಮ್ ಕ್ಲೀನರ್: ಸ್ಟೀಮ್ ಕ್ಲೀನರ್ ಬಳಸಿ, ನೀವು ಸೋಫಾ, ಮ್ಯಾಟ್ ಎಲ್ಲವನ್ನೂ ಕ್ಲೀನ್ ಮಾಡಬಹುದು. ಇದರಲ್ಲಿ ನೀರು ಹಾಕಿ, ಸ್ವಿಚ್ ಆನ್ ಮಾಡಿದ್ರೆ, ವಿದ್ಯುತ್ ಮೂಲಕ, ನೀವು ಸೋಫಾ, ಬೆಡ್, ಮ್ಯಾಟ್ ಹಲವು ವಸ್ತುಗಳನ್ನು ಕ್ಲೀನ್ ಮಾಡಬಹುದು. ಇದರಲ್ಲಿ ಬೇರೆ ಬೇರೆ ರೀತಿಯ ಕ್ಲೀನಿಂಗ್ ಬ್ರಶ್ ಇದ್ದು, ಸ್ಟೋವ್ ಕೂಡ ಕ್ಲೀನ್ ಮಾಡಬಹುದು.
ಮೆಶ್ ಕ್ಲೀನಿಂಗ್ ಬ್ರಶ್: ನಿಮ್ಮ ಮನೆಯಲ್ಲಿ ನೆಟ್ ಡೋರ್ ಇದ್ದರೆ, ಅಥವಾ ಕಿಟಕಿಗೆ ನೆಟ್ ಕವರ್ ಹಾಕಿದರೆ, ಅದನ್ನು ಸುಲಭವಾಗಿ ಕ್ಲೀನ್ ಮಾಡಲು ಆಗುವುದಿಲ್ಲ. ಹಾಗಾಗಿ ನೀವು ಮೆಶ್ ಕ್ಲೀನಿಂಗ್ ಬ್ರಶ್ ಖರೀದಿಸಿದರೆ, ಸುಲಭವಾಗಿ ನೆಟ್ ಕವರ್ ಕ್ಲೀನ್ ಮಾಡಬಹುದು.
ಫರ್ನಿಚರ್ ಮೂವಿಂಗ್ ಟೂಲ್: ಮನೆ ಕ್ಲೀನ್ ಮಾಡುವಾಗ, ಸೋಫಾ, ವಾಶಿಂಗ್ ಮಷಿನ್, ಫ್ರಿಜ್ ಎಲ್ಲವನ್ನೂ ಆಚೆ ಈಚೆ ಸರಿಸಬೇಕು. ಇದು ಸ್ವಲ್ಪ ಕಷ್ಟದ ಕೆಲಸ. ಆದರೆ ನೀವು ಫರ್ನಿಚರ್ ಮೂವಿಂಗ್ ಟೂಲ್ ಬಳಸಿ, ಈ ವಸ್ತುಗಳನ್ನೆಲ್ಲಾ ಯಾರ ಸಹಾಯವೂ ಇಲ್ಲದೇ, ಆರಾಮವಾಗಿ ಆಚೆ ಈಚೆ ಇಡಬಹುದು.
ಮ್ಯಾಗ್ನೇಟಿಕ್ ವಿಂಡೋ ಕ್ಲೀಯರ್: ಮ್ಯಾಗ್ನೇಟಿಕ್ ವಿಂಡೋ ಕ್ಲೀಯರ್ ಸೂಪರ್ ಟೂಲ್ ಅಂತಾನೇ ಹೇಳಬುಹುದು. ಯಾಕಂದ್ರೆ ಗಾಜಿನಿಂದ ಕವರ್ ಆಗಿರುವ ಮೂವಿಂಗ್ ಕಿಟಕಿ ಕ್ಲೀನ್ ಮಾಡೋದು 1 ಸಾಹಸವೇ ಸರಿ. ಮುಂದೆ ಗಾಜು ಕ್ಲೀನ್ ಮಾಡಿದ್ರೆ ಹಿಂದೆ ಗಲೀಜಾಗುತ್ತದೆ. ಹಿಂದೆ ಕ್ಲೀನ್ ಮಾಡಲು ಹೋದ್ರೆ, ಮುಂದಿನ ಕಿಟಕಿ ಶೈನ್ ಕಡಿಮೆ ಎನ್ನಿಸುತ್ತದೆ. ಆದರೆ ನೀವು ಮ್ಯಾಗ್ನೇಟಿಕ್ ವಿಂಡೋ ಕ್ಲೀಯರ್ ಖರೀದಿ ಮಾಡಿದ್ರೆ, ಇದರ ಸಹಾಯದಿಂದ ಸುಲಭವಾಗಿ ಮತ್ತು ಸ್ವಚ್ಛವಾಗಿ ನೀವು ವಿಂಡೋ ಕ್ಲೀನ್ ಮಾಡಬಹುದು.
ೃೃೃೃೃೃೃೃೃೃೃೃ
Deepavali: ದೀಪಾವಳಿಗೆ ಈ ಲೈಟ್ ಬಳಸಿ ಮನೆಯ ಅಂದ ಹೆಚ್ಚಿಸಿ
ಪ್ರತೀವರ್ಷ ದೀಪಾವಳಿಗೆ ಎಣ್ಣೆ, ಬತ್ತಿ, ಹಣತೆ ಹಚ್ಚಿ ಮನೆಗೆ ಅಲಂಕಾರ ಮಾಡೋದು ಹಿಂದೂಗಳ ವಾಡಿಕೆ. ಈ ಪದ್ಧತಿ ಎಂದಿಗೂ ನಿಲ್ಲಬಾರದು. ಆದರೆ ನೀವು ಇದರ ಜತೆ, ಮಾಡರ್ನ್ ಲೈಟ್ ಬಳಸಿ, ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು.
ಫೌಂಟೇನ್ ಸೋಲಾರ್ ಲೈಟ್: ಫೌಂಟೇನ್ ಸೋಲಾರ್ ಲೈಟ್ ಅಂದ್ರೆ, ಗಿಡದಂತೆ ಕಾಣುವ ಚಂದದ ಲೈಟ್. ಗಿಡ ನೆಡುವ ರೀತಿ ಇದನ್ನು ನೀವು ನಿಲ್ಲಿಸಬಹುದು. ಇದಕ್ಕೆ ವಿದ್ಯುತ್ ಅವಶ್ಯಕತೆ ಇಲ್ಲ. ಬದಲಾಗಿ ನೀವು ಇದನ್ನು ಬಿಸಿಲಿನಲ್ಲಿರಿಸಬೇಕು. ಸೂರ್ಯನ ಬೆಳಕಿನಿಂದ ಇದು ಚಾರ್ಜ್ ಆಗುತ್ತದೆ. ಬಳಿಕ ರಾತ್ರಿ ವೇಳೆ ಆನ್ ಮಾಡಿದ್ರೆ, 8 ಗಂಟೆಗಳ ಕಾಲ ಇದು ಕಲರ್ ಕಲರ್ ಬೆಳಕು ನೀಡುತ್ತದೆ. ಮನೆಯ ಅಂದವನ್ನು ಹೆಚ್ಚಿಸುತ್ತದೆ.
ನೆಟ್ ಲೈಟ್ಸ್: ಹಿಂದೆಲ್ಲಾ ಉದ್ದೂದ್ದವಾಗಿರುವ ಮಿಂಚಿನ ಲೈಟ್‌ಗಳಿಂದ ಮನೆಯನ್ನು ಅಲಂಕರಿಸುತ್ತಿದ್ದರು. ಆದರೆ ಈಗ ನೀವು ಸುಲಭವಾಗಿ ಮನೆಗೆ ಲೈಟ್ ಅಲಂಕಾರ ಮಾಡಬಹುದು. ನೆಟ್ ಲೈಟ್ ಬಳಸಿ, ಸುಲಭವಾಗಿ ದೀಪಾವಳಿ ಅಲಂಕಾರ ಮಾಡಬಹುದು. ನೆಟ್ ಲೈಟ್ ಅಂದ್ರೆ ಬಲೆಯ ರೀತಿಯೇ ಲೈಟ್ ಇರುತ್ತದೆ. ಇದನ್ನು ಸುಲಭವಾಗಿ ಮನೆ, ಸಾಲು ಸಾಲು ಗಿಡಗಳ ಮೇಲೆ ಹರಡಿದರೆ ಆಯಿತು. ಕರೆಂಟ್ ಕನೆಕ್ಟ್ ಮಾಡಿ, ಲೈಟ್ ಆನ್ ಮಾಡಿದೆ, ಝಗಮಗ ಝಗಮಗ .
ಡೆಕ್ ಲೈಟ್ಸ್: ಡೆಕ್ ಲೈಟ್ ಅಂದ್ರೆ ಚೌಕಾಕಾರದ ಮೆಟ್ಟಿಲಿಗೆ ಅಟ್ಯಾಚ್ ಮಾಡಬಹುದಾದ ಲೈಟ್. ಇದನ್ನು ನೀವು ಅಂಟಿಸಬಹುದು ಅಥವಾ ಸ್ಕ್ರೂ ಹಾಕಬಹುದು. ಇದು ಸೂರ್ಯನ ಬೆಳಕಿನಿಂದ ಚಾರ್ಜ್ ಆಗಿ ಬೆಳಕು ನೀಡುತ್ತದೆ.
ಆಟೋಮೆಟಿಕ್ ಲೈಟ್: ಇದು ದೀಪಾವಳಿಗೆ ಮಾತ್ರವಲ್ಲ. ಬದಲಾಗಿ ಯಾವಾಗ ಬೇಕಾದ್ರೂ ಬಳಸಬಹುದು. ಮನೆಯಲ್ಲಿ ಹಿರಿಯರಿದ್ದು, ಮಕ್ಕಳಿದ್ದು, ಮೆಟ್ಟಿಲು ಏರುವಾಗ ಕತ್ತಲಲ್ಲಿ ಕಾಣುವುದಿಲ್ಲವೆಂದಲ್ಲಿ ನೀವು ಮೆಟ್ಟಿಲಿಗೆ ಈ ಲೈಟ್ ಹಾಕಬೇಕು. ನಾವು ನಡೆದಾಡುತ್ತಿದ್ದಂತೆ, ಲೈಟ್ ತಾನಾಗಿಯೇ ಆನ್ ಆಗುತ್ತದೆ. ನಾವು ಹೋಗಿ ಕೆಲ ಸಮಯದ ಬಳಿ ಮತ್ತೆ ಆಫ್ ಆಗುತ್ತದೆ. ಇದಕ್ಕೆ ಚಾರ್ಜರ್ ಕೂಡ ಇರುತ್ತದೆ.
ೃೃೃೃೃೃೃೃೃ
ಹಬ್ಬದ ಸಂದರ್ಭದಲ್ಲಿ ಈ ವಸ್ತುಗಳಿಂದ ನಿಮ್ಮ ದೇವರ ಕೋಣೆಯ ಅಂದ ಹೆಚ್ಚಿಸಿ
ಹಬ್ಬದ ಸಂದರ್ಭದಲ್ಲಿ ಮನೆ ಕ್ಲೀನ್ ಆಗಿರಬೇಕು. ದೇವರ ಕೋಣೆ ಚೆಂದಗಾಣಿಸಬೇಕು. ಹಬ್ಬಕ್ಕೆ ಮನೆಗೆ ಬಂದವರು, ಮನೆಯನ್ನು, ಮನೆಯಲ್ಲಿರುವ ವಸ್ತುಗಳನ್ನು ನೋಡಿ ವಾವ್ ಅನ್ನಬೇಕು ಅಂತಾ ಹಲವರಿಗೆ ಆಸೆ ಇರುತ್ತೆ. ಅಂಥವರಿಗಾಗಿ ನಾವಿಂದು ಹಬ್ಬದ ಸಂದರ್ಭದಲ್ಲಿ ದೇವರ ಕೋಣೆಯಲ್ಲಿ ಇಡಬಹುದಾದ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಬಗ್ಗೆ ಹೇಳಲಿದ್ದೇವೆ.
ಮಂತ್ರಾ ಚಾಂಟಿಂಗ್ ಡಿವೈಸ್: ಈ ಡಿವೈಸ್ ಪ್ಲಗ್ ಮಾಡುವ ರೀತಿ ಇರುತ್ತದೆ. ಇದನ್ನು ನೀವು ಪ್ಲಗ್ ಮಾಡಿ, ಮಂತ್ರ ಹಾಕಬಹುದು. ಇದರಲ್ಲಿ 35ಕ್ಕೂ ಹೆಚ್ಚು ಪ್ರಿರೆಕಾರ್ಡಿಂಗ್ ಮಂತ್ರ ಇರುತ್ತದೆ. ನಿಮಗೆ ಬೇಕಾದ ಮಂತ್ರವನ್ನು ಚೇಂಜ್ ಮಾಡಬಹುದು ಮತ್ತು ಸೌಂಡ್ ಕಡಿಮೆ ಹೆಚ್ಚು ಮಾಡಬಹುದು.
ತ್ರಿಡಿ ರಾಮಮಂದಿರ್: ಈ ತ್ರಿಡಿ ರಾಮಮಂಂದಿರ ಪದೇ ಪದೇ ಬೇರೆ ಬೇರೆ ಬಣ್ಣಕ್ಕೆ ತಿರುಗುತ್ತದೆ. ನೋಡುವವರಿಗೆ ಚೆಂದಗಾಣಿಸುತ್ತದೆ.
ಲಕ್ಷ್ಮೀ ದೇವಿ ಗ್ಲೋವಿಂಗ್ ಫೋಟೋ ಗ್ಲಾಸ್: ಈ ಚೆಂದದ ಫೋಟೋ ಗ್ಲಾಸ್‌ನ್ನು ಪ್ಲಗ್ ಮಾಡಿ, ಆನ್ ಮಾಡಿದ್ರೆ, ಇದರಲ್ಲಿ ಲೈಟ್ ಆನ್ ಆಗುತ್ತದೆ. ಆಗ ಇದರಲ್ಲಿ ಮುದ್ದಾಗಿರುವ ಲಕ್ಷ್ಮೀ ಕಾಣುತ್ತಾಳೆ.
ವಾಟರಿ ಸ್ಮೋಕ್ ಶಿವಲಿಂಗ : ಇದರಲ್ಲಿ ಧೂಪ ಹಾಕಿದ್ರೆ ಶಿವಲಿಂಗಕ್ಕೆ ನೀರು ಬಿದ್ದ ಹಾಗೆ ಧೂಪದ ಸ್ಮೋಕ್ ಬರುತ್ತದೆ. ಇದರ ಜತೆಗೆ ನೀವು ವಿದ್ಯುತ್ ಬಳಸಿದ್ರೆ ಬಣ್ಣ ಕೂಡ ಬದಲಾಗುತ್ತದೆ.
ಎಲೆಕ್ಟ್ರಿಕ್ ಬೆಲ್: ಮನೆಯಲ್ಲಿ ಆರತಿ ಮಾಡುವ ವೇಳೆ ಈ ಬೆಲ್ ಬಟನ್ ಪ್ರೆಸ್ ಮಾಡಿದ್ರೆ ಸಾಕು. ಗಂಟೆ ಬಾರಿಸುತ್ತಲೇ ಇರುತ್ತದೆ. ನೀವು ಆರಾಮವಾಗಿ ಆರತಿ ಮಾಡಿ, ಭಜನೆ ಹಾಡುತ್ತ, ಭಕ್ತಿಯಿಂದ ಪೂಜೆ ಮಾಡಬಹುದು.

























Discussion about this post