Movie News: ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಅಂತೆಲ್ಲ ಬಿರುದು ಪಡೆದಿರುವ ನಟ ದರ್ಶನ್, ಕೊಲೆ ಆರೋಪದಡಿ ಜೈಲು ಪಾಲಾಗಿದ್ದು, ಈ ಬಗ್ಗೆ ಕನ್ನಡತಿ ನಟಿ ರಂಜಿನಿ ರಾಘವನ್ ಬೇಸರ ಹೊರಹಾಕಿದ್ದಾರೆ.
ವಿಲ್ಲನ್‌ಗಳು ಸತ್ತಾಗ ಸಂಭ್ರಮಿಸೋದು ಅಭ್ಯಾಸವಾಗಿ ಹೋಗಿ ಈ ಸಾವಿನ ತೀವ್ರತೆ ತಾಗುತ್ತಿಲ್ಲವೇ..? ಅಂತಾ ರಂಜಿನಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಆದರೆ ಎಲ್ಲಿಯೂ ದರ್ಶನ್ ಅವರ ಹೆಸರನ್ನು ರಂಜಿನಿ ಪ್ರಸ್ತಾಪಿಸಿಲ್ಲ. ಈ ಪೋಸ್ಟ್ ಅರ್ಥ ಮಾಡಿಕೊಂಡು ಹಲವರು ಕಾಮೆಂಟ್ ಮಾಡಿದ್ದು, ದರ್ಶನ್ ಮಾಡಿರುವ ಕೃತ್ಯದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಸ್ನೇಹಿತೆ ಎಂದು ಹೇಳಿಕೊಳ್ಳುವ ಪವಿತ್ರಗೌಡಗೆ ರೇಣುಕಾಸ್ವಾಮಿ ಎಂಬಾತ ಗಲೀಜಾಗಿ ಮೆಸೇಜ್ ಮಾಡಿದ್ದ, ಮರ್ಮಾಂಗದ ಫೋಟೋ ಕಳಿಸಿದ್ದ ಎಂಬ ಕಾರಣಕ್ಕೆ, ಆತನನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿಸಿದ್ದ, ದರ್ಶನ್, ಬೆಂಗಳೂರಿಗೆ ಕರೆ ತಂದು, ಚೆನ್ನಾಗಿ ಹಲ್ಲೆ ಮಾಡಿ ಕೊಂದು ಹಾಕಿದ್ದರು.
ಶೆಡ್‌ವೊಂದರಲ್ಲಿ ರೇಣುಕಾಸ್ವಾಮಿಯನ್ನು ಕರೆ ತಂದು, ಬುದ್ಧಿ ಕಲಿಸಬೇಕೆಂದು, ದರ್ಶನ್, ಪವಿತ್ರಗೌಡ ಮತ್ತು 13ಕ್ಕೂ ಹೆಚ್ಚು ಜನ ಆರೋಪಿಗಳು, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ದರ್ಶನ್ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಒದ್ದಿದ್ದಾರೆ. ಪವಿತ್ರ ಗೌಡ ಕೂಡ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದಳು ಅಂತಾ ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಬಂದಿದೆ.
ರೇಣುಕಾಸ್ವಾಮಿ ಸಾವಿನ ಬಳಿಕ, ಮೂವರೊಂದಿಗೆ ಸೇರಿ 30 ಲಕ್ಷ ಡೀಲ್ ಮಾಡಿದ್ದ, ದರ್ಶನ್, ಆರೋಪ ನಿಮ್ಮ ಮೇಲೆ ಹೊರಿಸಿಕೊಂಡು ಜೈಲು ಸೇರಿ ಎಂದಿದ್ದಾರೆ. ಆದರೆ, ಶವ ಪೊಲೀಸರ ಕೈಗೆ ಸಿಕ್ಕಾಗ, ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳಿಗೆ ತಮ್ಮದೇ ಭಾಷೆಯಲ್ಲಿ ಬೆಂಡೆತ್ತಿದ್ದಾರೆ. ಆಗ ಸತ್ಯ ಹೊರಹಾಕಿರುವ ಆರೋಪಿಗಳು, ಈ ಘಟನೆ ನಡೆಯುವಾಗ, ದರ್ಶನ್ ಕೂಡ ಇದ್ದರು, ಅವರು ಮರ್ಮಾಂಗಕ್ಕೆ ಒದ್ದಾಗ, ಜೋರಾಗಿ ಪೆಟ್ಟು ಬಿದ್ದಿತ್ತು. ಆಗ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ. ಆದರೆ 30 ಲಕ್ಷ ಕೊಟ್ಟು ನಮ್ಮ ಮೇಲೆ ಆರೋಪ ಹೊರಿಸಿಕೊಂಡು ಜೈಲು ಸೇರುವಂತೆ ಹೇಳಿದ್ದರು ಅಂತಾ ಸತ್ಯ ಬಾಯ್ಬಿಟ್ಟಿದ್ದಾರೆ.
ಆನ್‌ಲೈನ್‌ನಲ್ಲಿ ಆರ್ಡರ್ ಕೊಟ್ಟು ತರಿಸಿದ್ದ ಐಸ್‌ಕ್ರೀಮ್‌ನಲ್ಲಿ ಸಿಕ್ತು ಮನುಷ್ಯನ ಬೆರಳು
Discussion about this post