Bigg Boss: ಬಿಗ್‌ಬಾಸ್ ಸೀಸನ್ 11 ಇಂದಿನಿಂದ ಶುರುವಾಗುತ್ತಿದೆ. ದೊಡ್ಮನೆಯಲ್ಲಿ ಇಂದಿನಿಂದ ಬಿಗ್‌ಬಾಸ್ ಆಟ ಪ್ರಾರಂಭವಾಗಲಿದ್ದು, ಕಿಚ್ಚ ಸುದೀಪ್ ಎಲ್ಲರನ್ನೂ ಸ್ವಾಗತಿಸಿ, ಸ್ವರ್ಗ- ನರಕಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಸ್ಟೇಜ್ ಮೇಲೆ ಬಂದಿದ್ದ ಪುತ್ತೂರಿನ ಧನರಾಜ್ ಆಚಾರ್ ಅವರ ವಿಟಿ ಪ್ಲೇ ಆದ ಬಳಿಕ, ಕಿಚ್ಚ ಸುದೀಪ್ ಕೊಂಚ ಸಮಯ ಗರಂ ಆಗಿದ್ದು, ಬಿಗ್‌ಬಾಸ್ ಬಗ್ಗೆ ಗೌರವ ಇಲ್ಲದವರನ್ನು ಹೇಗೆ ಬಿಗ್‌ಬಾಸ್ ಮನೆಗೆ ಹೋಗಲು ಅನುಮತಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿ, ಧನರಾಜ್ ಅವರನ್ನು ಸಿಟ್ಟಿನಿಂದ ನೋಡಿದ್ದಾರೆ.
ಹಾಗಾದ್ರೆ ಆ ವಿಟಿಯಲ್ಲಿ ಅಂಥಾದ್ದೇನಿತ್ತು ಅಂತಾ ಹೇಳುವುದಾದರೆ, ಬಿಗ್ ಬಾಸ್ ಮನೆಯಲ್ಲಿ ಎಂಥೆಂಥ ಘಟನೆ ನಡೆಯುತ್ತದೆ ಎಂದು ಧನರಾಜ್ ಮತ್ತು ಅವರ ಪತ್ನಿ, ಸಹೋದರಿಯರೆಲ್ಲ ಸೇರಿ, ತಮಾಷೆಯಾಗಿ ರೀಲ್ಸ್ ಮಾಡಿದ್ದರು. ಅದನ್ನೇ ಬಿಗ್‌ಬಾಸ್‌ನಲ್ಲಿ ಪ್ಲೇ ಮಾಡಲಾಗಿತ್ತು.
ಇದನ್ನು ನೋಡಿ ಸುದೀಪ್ ಗರಂ ಆಗಿ ಪ್ರಶ್ನಿಸಿದ್ದಾರೆ. ಈ ವೇಳೆ ಧನರಾಜ್ ಪೆಚ್ಚಾಗಿದ್ದು, ಬಳಿಕ ಕಿಚ್ಚ ತಾನು ಮಾಡಿದ್ದು ತಮಾಷೆ, ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಹೊಗಳಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗಲು ಖುಷಿಯಿಂದ ಬಂದಿದ್ದ ಧನರಾಜ್ ಆ ಕ್ಷಣ, ತಬ್ಬಿಬ್ಬಾಗಿದ್ದಂತೂ ನಿಜ.
ಬಳಿಕ ಇಬ್ಬರೂ ಅಪ್ಪಿಕೊಂಡು, ತಮಾಷೆಯ ಮಾತನ್ನಾಡಿದ್ದಾರೆ. ಈ ವೇಳೆ ಮಾತನಾಡಿರುವ ಧನರಾಜ್ ನನ್ನ ಮಗಳು ಹುಟ್ಟಿದ ದಿನ, ಆಸ್ಪತ್ರೆಯಲ್ಲೇ ನನಗೆ ಬಿಗ್‌ಬಾಸ್‌ನಿಂದ ಕರೆ ಬಂದಿತ್ತು. ಆಕೆಯ ಅದೃಷ್ಟದಿಂದಲೇ ನನಗೆ ಈ ಅವಕಾಶ ಸಿಕ್ಕಿದೆ. ಹಾಗಾಗಿ ಸಿಕ್ಕ ಅವಕಾಶವನ್ನು ಬಿಡದೇ ಬಂದೆ. ನನ್ನ ಮಗಳು ನನ್ನ ಪಾಲಿನ ಲಕ್ಕಿ ಚಾರ್ಮ್ ಎಂದು ಧನಂಜಯ್ ಹೇಳಿದ್ದಾರೆ.
ಇನ್ನು ಪತಿ ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದು ನಿಮಗೆ ಹೇಗೆ ಎನ್ನಿಸುತ್ತಿದೆ ಎಂದು ಪತ್ನಿ ಪ್ರಜ್ಞಾ ಅವರನ್ನು ಕೇಳಿದಾಗ, ಆಕೆ, ನನಗೆ ಬೇಜಾರಾಗುತ್ತಿದೆ. ಅವರು ನನಗೆ ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕಿದೆ. ಆದರೆ ನಾನು ಹೋಗುವುದಿಲ್ಲ, ಈಗಷ್ಟೇ ಮಗು ಹುಟ್ಟಿದೆ. ಪಾಪು ದೊಡ್ಡದಾದ ಮೇಲೆ ಹೋಗುತ್ತೇನೆ ಎಂದಿದ್ದರು. ಆದರೆ, ಆಕೆ ಹುಟ್ಟಿದ ತಕ್ಷಣವೇ ಈ ಅದೃಷ್ಟ ಬಂದಿದ್ದು, ಬಿಡುವುದೇಕೆ ಎಂದು ಬಿಗ್‌ಬಾಸ್‌ಗೆ ಹೋಗಲು ನಿರ್ಧರಿಸಿದರು ಎಂದು ಪ್ರಜ್ಞಾ ಹೇಳಿದ್ದಾರೆ.
ಪ್ರಜ್ಞಾ ಮತ್ತು ಧನಂಜಯ್ ಸೇರಿ ಹಲವು ರೀಲ್ಸ್ ಮಾಡಿ, ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಬೆಟ್ಟಿಂಗ್ ಆ್ಯಪ್ ಮೋರೆ ಹೋಗಬೇಡಿ, ಕಮೆಂಟ್ ಆಫ್ ಮಾಡಿ, ರೀಲ್ಸ್ ಮಾಡುವವರನ್ನು ನಂಬಬೇಡಿ. ಹೀಗೆ ಹಲವು ಉತ್ತಮ ಮೆಸೇಜ್‌ಗಳನ್ನು ನೀಡುವ ಮೂಲಕ, ಧನು ಮತ್ತು ಪ್ರಜ್ಞಾ ಹಲವರು ಅಚ್ಚು ಮೆಚ್ಚಿನ ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದಾರೆ. ಇನ್ನು ಇವರಿಗೆ ಇವರ ಸಹೋದರಿಯರು, ಸಹೋದರರು, ಚಿಕ್ಕಪ್ಪ, ಹೀಗೆ ಸಂಬಂಧಿಕರೆಲ್ಲರೂ ಸಾಥ್ ಕೊಟ್ಟು ರೀಲ್ಸ್ ಮಾಡುತ್ತಾರೆ.
ಇವರ ಮನೆಯಲ್ಲಿರುವ ಪುಟ್ಟ ಕೂಸು ನಕ್ಷತ್ರ ಕೂಡ, ಇವರ ಎಷ್ಟೋ ರೀಲ್ಸ್‌ನಲ್ಲಿ ತನ್ನ ಟ್ಯಾಲೆಂಟ್ ತೋರಿಸಿದೆ. ಈ ಮೊದಲು ಧನಂಜಯ್ ಅವರ ಅಜ್ಜಿ ಕೂಡ ರೀಲ್ಸ್ ಮಾಡುತ್ತಿದ್ದರು. ಹಾಗಾಗಿಯೇ ಇವರದ್ದು ಕಮಲಜ್ಜಿ ಗ್ಯಾಂಗ್ ಅಂತಲೇ ಫೇಮಸ್ ಆಗಿತ್ತು. ಎರಡು ವರ್ಷಗಳ ಹಿಂದೆ ಕಮಲಜ್ಜಿ ತೀರಿ ಹೋಗಿದ್ದಾರೆ.
ಧನಂಜಯ್ ಬಿಗ್‌ಬಾಸ್‌ಗೆ ತಕ್ಕ ಅಭ್ಯರ್ಥಿ ಅಂತಲೇ ಹಲವರು ಹೇಳಿದ್ದು, ಧನಂಜಯ್ ಗೆದ್ದು ಬರಲಿ ಅನ್ನೋದು ಹಲವರ ಆಶಯ.
Chanakya Neeti: ಈ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ನೀವಂದುಕೊಂಡಿದ್ದನ್ನು ಸಾಧಿಸಬಹುದು
Spiritual: ಆಹಾರ ಸೇವನೆ ಮಾಡುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟರೆ ಉದ್ಧಾರವಾಗುತ್ತೀರಿ
Discussion about this post