Chanakya Neeti: ಇಂಥವರನ್ನು ಎಂದಿಗೂ ಹತ್ತಿರ ಸೇರಿಸಬೇಡಿ ಎಂದಿದ್ದಾರೆ ಚಾಣಕ್ಯರು
ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ನಾವು ನೆಮ್ಮದಿಯಾಗಿ ಇರಬೇಕು ಅಂದ್ರೆ, ನಮ್ಮ ಜೀವನದಲ್ಲಿ ಕೆಲವರು ಹತ್ತಿರಕ್ಕೂ ಸೇರಿಸಬಾರದಂತೆ. ಹಾಗಾದ್ರೆ ಎಂಥವರನ್ನು ನಾವು ಹತ್ತಿರಕ್ಕೆ ಸೇರಿಸಬಾರದು ಅಂತಾ ತಿಳಿಯೋಣ ಬನ್ನಿ.
ಜೀವನ ಸಂಗಾತಿಯ ಆಯ್ಕೆ ಮಾಡುವಾಗ ಎಚ್ಚರದಿಂದಿರಿ: ಮದುವೆ ಅಂದರೆ, ಜೀವನದ ಮಹತ್ವದ ಸಮಯ. ಈ ಸಮಯವೇ ನಮ್ಮ ಮುಂದಿನ ಜೀವನದ ಸುಖ ದುಃಖ, ಖುಷಿ, ನಗು- ಅಳು ಎಲ್ಲವನ್ನೂ ನಿಶ್ಚಯಿಸುತ್ತದೆ. ಹಾಗಾಗಿ ನಾವು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ, ಎಚ್ಚರಿಕೆಯಿಂದಿರಬೇಕು. ಆ ವ್ಯಕ್ತಿಯ ಗುಣ ಉತ್ತಮವಾಗಿರಬೇಕು. ಜವಾಬ್ದಾರಿಯುತವಾಗಿರಬೇಕು. ಆಗ ಮಾತ್ರ ನಮ್ಮ ಜೀವನ ಉತ್ತಮವಾಗಿರಲು ಸಾಧ್ಯ. ಇಲ್ಲದಿದ್ದಲ್ಲಿ, ಪ್ರತಿದಿನ ಕಣ್ಣೀರೇ ಜೀವನವಾಗಬಹುದು.
ಎಂಥವರಿಗಾದರೂ ಬುದ್ಧಿ ಹೇಳುವ ಮುನ್ನ ಎಚ್ಚರದಿಂದಿರಿ: ನಾವು ಯಾರಿಗಾದರೂ ಬುದ್ಧಿ ಹೇಳುವಾಗ, ಏನನ್ನಾದರೂ ಅರ್ಥ ಮಾಡಿಸುವಾಗ, ಶಿಕ್ಷಕರಾಗಿದ್ದಲ್ಲಿ ಪಾಠ ಮಾಡುವಾಗ, ನಿಮ್ಮ ಸಮಯ ವ್ಯರ್ಥವಾಗುತ್ತಿಲ್ಲವೆಂಬುದನ್ನು ಅರಿತುಕ“ಳ್ಳಿ. ಏಕೆಂದರೆ, ಈ ಎಲ್ಲವನ್ನೂ ಕೇಳಿಸಿಕ“ಳ್ಳುವವರು ಮೂರ್ಖರಾಗಿದ್ದಲ್ಲಿ, ಅವರೇ ಬುದ್ಧಿವಂತರು ಎಂದೇ ಅವರು ವಾದಿಸುತ್ತಾರೆ. ಅಲ್ಲಿಗೆ ನಿಮ್ಮ ಸಮಯ ಹಾಳಾಗುತ್ತದೆ. ಹಾಗಾಗಿ ಇಂಥವರನ್ನು ನಿಮ್ಮ ಜೀವನದಿಂದ ತೆಗೆದು ಹಾಕುವುದು ಉತ್ತಮ.
ರೋಗ ಪೀಡಿತ ವ್ಯಕ್ತಿಯಿಂದ ದೂರವಿರಿ: ರೋಗವಿರುವವರು ಸದಾಕಾಲ ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ. ಅವರ ಜತೆ ಇರುವವರ ನೆಮ್ಮದಿಯನ್ನೂ ಹಾಳು ಮಾಡುತ್ತಾರೆ. ಇಂಥವರ ಜತೆ ಅಂತರ ಕಾಯ್ದುಕ“ಳ್ಳುವುದು ಉತ್ತಮ. ಇವರಲ್ಲದೇ, ದ್ವೇಷ, ಅಸೂಯೆ ಮನೋಭಾವನೆ ಇರುವವರಿಂದ ಕೂಡ ನಾವು ದೂರವಿರಬೇಕು ಅಂತಾರೆ ಚಾಣಕ್ಯರು.
===========================
ಧನ ಸಂಪತ್ತು ವೃದ್ಧಿಗಾಗಿ ಲಕ್ಷ್ಮೀ-ವಿಷ್ಣುವನ್ನು ಈ ರೀತಿ ಪೂಜಿಸಿ..
ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಪೂಜೆ ಮಾಡುವ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಮಾಡಿದರೆ, ಅತೀ ಉತ್ತಮ ಅಂದಿದ್ದಾರೆ. ಹಾಗಾದ್ರೆ ನಾವು ಯಾವ ಕೆಲಸವನ್ನು ಯಾಕಾಗಿ ಮಾಡಬೇಕು ಎಂದು ತಿಳಿಯೋಣ ಬನ್ನಿ..
ಧನ ಸಂಪತ್ತು ವೃದ್ಧಿಗಾಗಿ ನಾವು ಬರೀ ಲಕ್ಷ್ಮೀ ದೇವಿಯನ್ನು ಮಾತ್ರ ಪೂಜಿಸುತ್ತೇವೆ. ಆದರೆ ಲಕ್ಷ್ಮೀಯ ಜತೆ ನಾವು ವಿಷ್ಣುವನ್ನು ಕೂಡ ಪೂಜಿಸಬೇಕು ಅಂತಾರೆ ಚಾಣಕ್ಯರು.
ನಾವೆಲ್ಲ ಶ್ರೀಮಂತರಾಗಬೇಕು ಎಂದು ದೀಪಾವಳಿ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುತ್ತೇವೆ. ಪ್ರತೀ ಶುಕ್ರವಾರ ಭಕ್ತಿಯಿಂದ ಪೂಜೆ ಮಾಡುತ್ತೇವೆ. ಆದರೆ ದುಡ್ಡಿದ್ದರೆ ಮಾತ್ರ ಜೀವನ ನಡೆಸಲು ಸಾಧ್ಯವಿಲ್ಲ. ದುಡ್ಡಿನ ಜತೆ ನೆಮ್ಮದಿ, ಪ್ರೀತಿ, ಕಾಳಜಿ ಎಲ್ಲವೂ ಸಿಗುವುದು ಮುಖ್ಯ.
ಹಾಗಾಗಿ ಇವೆಲ್ಲವೂ ಸಿಗಬೇಕು, ಜೀವನ ಚೆನ್ನಾಗಿರಬೇಕು ಅಂದ್ರೆ ನಾವು ಲಕ್ಷ್ಮೀ ಮತ್ತು ನಾರಾಯಣ ಇಬ್ಬರನ್ನೂ ಪೂಜಿಸಬೇಕು. ಇವರಿಬ್ಬರ ಪೂಜೆ ಮಾಡುವಾಗ ಬಿಳಿ, ಗುಲಾಬಿ, ಹಳದಿ, ಕೆಂಪು ಬಣ್ಣದ ಹೂವನ್ನು ಅರ್ಪಿಸಬೇಕು. ಇವೆಲ್ಲವೂ ಅರ್ಪಿಸಲು ಸಾಧ್ಯವಿಲ್ಲ ಎಂದಲ್ಲಿ, ಭಕ್ತಿಯಿಂದ ಪೂಜೆ ಮಾಡಿದರೂ ಸಾಕು.
ಇನ್ನು ನೀವು ವಿಷ್ಣು ಪೂಜೆ ಮಾಡುವ ಸಂದರ್ಭದಲ್ಲಿ ಶ್ರೀಗಂಧವನ್ನು ಬಳಸಬೇಕು. ಏಕೆಂದರೆ ವಿಷ್ಣು ಶ್ರೀಗಂಧ ಪ್ರಿಯ ಮತ್ತು ತುಳಸಿ ಪ್ರಿಯ. ಹಾಗಾಗಿ ವಿಷ್ಣು ಪೂಜೆಯಲ್ಲಿ ಇವೆರಡು ಇರುವುದು ತುಂಬ ಮುಖ್ಯ.
ಇನ್ನು ನಿಮಗೆ ವಿಷ್ಣು ಸಹಸ್ರನಾಮ ಬಂದಲ್ಲಿ ಅದನ್ನು ಹೇಳಿ. ಇಲ್ಲವಾದಲ್ಲಿ ರಾಮನಾಮ ಜಪಿಸಿದರೂ ಉತ್ತಮವೇ. ಒಟ್ಟಾರೆಯಾಗಿ ಲಕ್ಷ್ಮೀಯ ಜತೆ ವಿಷ್ಣುವನ್ನು ಪೂಜಿಸಿದ್ದಲ್ಲಿ, ಅವರಿಬ್ಬರ ಕೃಪಾಕಟಾಕ್ಷವಿದ್ದಲ್ಲಿ, ಜೀವನ ಅತ್ಯುತ್ತಮವಾಗಿರುತ್ತದೆ ಅಂತಾರೆ ಚಾಣಕ್ಯರು.
==================
ಇಂಥ ಕೆಲಸಗಳನ್ನು ಮಾಡಿದಷ್ಟು ನಿಮಗೆ ತೃಪ್ತಿಯಾಗುತ್ತೆ ಅಂತಾರೆ ಚಾಣಕ್ಯರು..
ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ನೆಮ್ಮದಿಯಿಂದರಬೇಕಾದರೆ ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಆ ಕೆಲಸಗಳು ನಮ್ಮ ಮನಸ್ಸಿಗೆ ತೃಪ್ತಿ ತರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ..
ದಾನ: ದಾನ ಮಾಡಿದಷ್ಟು ಖುಷಿ ಹೆಚ್ಚುತ್ತದೆ. ಮನಸ್ಸಿಗೆ ಓನೋ ಸಂತೋಷ, ನೆಮ್ಮದಿ ಸಿಗುತ್ತದೆ ಅಂತಾ ಹೇಳಿದ್ದನ್ನು ನಾವು ನೀವು ಕೇಳಿರುತ್ತೇವೆ. ಆದರೆ ದಾನ ಮಾಡಲು ಮಾತ್ರ ಹಲವರು ಮನಸ್ಸು ಮಾಡೋದಿಲ್ಲಾ. ಹಾಗೆ ನೀವು ಮನಸ್ಸು ಮಾಡಿ, ಅವಶ್ಯಕತೆ ಇದ್ದವರಿಗೆ ನಿಮ್ಮಿಂದ ಕೈಲಾದ ವಸ್ತುವನ್ನು ದಾನ ಮಾಡಿದರೆ, ನಿಮ್ಮ ಮನಸ್ಸಿಗೆ ತೃಪ್ತಿ ಸಿಗುವುದು ಖಂಡಿತ.
ಓದು: ಪುಸ್ತಕ ಓದುವ ಹವ್ಯಾಸ ಇರುವವರು ಈಗಿನ ಕಾಲದಲ್ಲಿ ಸಿಗುವುದು ತುಂಬಾ ಅಪರೂಪ. ಅಂಥವರು ಸಿಕ್ಕರೆ, ಅಂಥವರನ್ನು ನೋಡಿದರೆ, ಎಂಥಾ ವಿಚಿತ್ರ, ಅದೇನು ಓದೋ ಹುಚ್ಚೋ ಅಂತಾ ಹೇಳುತ್ತಾರೆ. ಆದರೆ ನೀವು ಓದುವುದನ್ನು ಹವ್ಯಾಸ ಮಾಡಿಕ“ಂಡರೆ, ಓದುವುದು ನಿಮ್ಮ ದಿನನಿತ್ಯದ 1 ಭಾಗವಾಗುತ್ತದೆ.
ಮಂತ್ರೋಚ್ಛಾರ: ಮಂತ್ರ ಕಲಿಯುವುದು, ಉಚ್ಛಿರುಸುವುದು ಕೆಲವರಿಗೆ ಕಷ್ಟವಾಗಬಹುದು. ಆದರೆ ನೀವು ಮನಸ್ಸು ನೀಡಿ, ಮಂತ್ರೋಚ್ಛಾರಣೆ ಮಾಡಿದರೆ, ನಿಮಗೆ ಇನ್ನೂ ಹೆಚ್ಚಿನ ಮಂತ್ರ ಕಲಿಯುವ ಆಸಕ್ತಿ ಬರುತ್ತದೆ. ಅಲ್ಲದೇ ಮಂತ್ರ ಪಟಣೆಯಿಂದ ಜೀವನ ಬದಲಾದ, ನೆಮ್ಮದಿಯಿಂದಿರುವ ಹಲವು ಉದಾಹರಣೆಗಳಿದೆ.
===============
ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..
ಯಾರನ್ನಾದರೂ ಮನೆಗೆ ಕರೆದು ಆತಿಥ್ಯ ಮಾಡೋದು ಉತ್ತಮ ಸಂಂಗತಿ. ಆದರೆ ನಾವು ಕೆಲವರನ್ನು ಮಾತ್ರ ಮನೆಗೆ ಕರಿಯಬಾರದು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಯಾಕೆ..? ಮತ್ತು ಎಂಥವರನ್ನು ಮನೆಗೆ ಕರಿಯಬಾರದು ಅಂತಾ ತಿಳಿಯೋಣ ಬನ್ನಿ..
ನಾಸ್ತಿಕರು: ದೇವರ ಮೇಲೆ ಭಕ್ತಿ ಇಲ್ಲದವನ ಮನಸ್ಸು ಎಂದಿಗೂ ಪರಿಶುದ್ಧವರಿಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು. ಏಕೆಂದರೆ ದೇವರ ಮೇಲೆ ಭಕ್ತಿ ಇರುವವನು ಬೇಡದ ಕೆಲಸ ಮಾಡುವ ಮುನ್ನ 100 ಬಾರಿ ಯೋಚಿಸುತ್ತಾನೆ. ಆದರೆ ನಾಸ್ತಿಕನಿಗೆ ಯಾವ ಕೆಲಸ ಮಾಡುವಾಗಲೂ ಹೆದರಿಕೆಯಾಗುವುದಿಲ್ಲ. ಅಂಥವರನ್ನು ಕರೆದು ಆತಿಥ್ಯ ಮಾಡುವುದು ಉತ್ತಮವಲ್ಲ ಅಂತಾರೆ ಚಾಣಕ್ಯರು.
ಮಾತಿನಿಂದ ಬೇರೆಯವರ ಮನಸ್ಸನ್ನು ನೋಯಿಸುವವರು: ಮಾತಾಡಿದರೆ ಸಾಕು, ಅದರಲ್ಲಿ ಕಹಿಯೇ ತುಂಬಿರುವವರು. ಇನ್ನ“ಬ್ಬರ ಬಗ್ಗೆ ಕೀಳು ಭಾವನೆ ಇರುವವರು. ಬರೀ ಇನ್ನ“ಬ್ಬರನ್ನು ಹೀಯಾಳಿಸುವವರು. ಯಾರ ಬಗ್ಗೆಯೂ ಉತ್ತಮ ಭಾವನೆ ಇರದೇ, ಎಲ್ಲರನ್ನೂ ಬೈಯ್ಯುವವರು. ಇಂಥವರನ್ನು ಮನೆಗೆ ಕರೆದು ಆತಿಥ್ಯ ಮಾಡುವ ಬದಲು ದೂರವಿಡುವುದೇ ಉತ್ತಮ ಅಂತಾರೆ ಚಾಣಕ್ಯರು.
ಲಂಚ ಪಡೆದು ಜೀವನ ಮಾಡುವವರು: ಲಂಚ ಎಂದರೆ, ಪಾಪದವರ ದುಡ್ಡು. ಉಚಿತವಾಗಿ ಮಾಡಿಕ“ಡಬೇಕಾದ ಕೆಲಸವನ್ನು, ಡಬಲ್ ಹಣ ಪಡೆದು ಕೆಲಸ ಮಾಡುವುದನ್ನೇ ಲಂಚ ಎನ್ನುತ್ತಾರೆ. ಕಷ್ಟಪಟ್ಟು ದುಡಿದವರ ದುಡ್ಡನ್ನು ಪಡೆದು, ಅದರಿಂದ ಜೀವನ ಮಾಡುವ ಮನಸ್ಸುಳ್ಳವರನ್ನು ಸದಾ ದೂರವಿಡಿ ಅಂತಾರೆ ಚಾಣಕ್ಯರು.
ಮೋಸಗಾರರು: ಮೋಸ ಮಾಡುವ ಗುಣವುಳ್ಳವರನ್ನು ಹತ್ತಿರಕ್ಕೂ ಸೇರಿಸಬಾರದು. ಇಂಥವರು ಆಡುವ ಮಾತಿನಿಂದಲೇ, ಇವರ ಗುಣವನ್ನು ಅಳಿಯಬಹುದು.
ಬದುಕಲು ಕೆಟ್ಟ ಕೆಲಸ ಮಾಡುವವರು: ದರೋಡೆ, ಹತ್ಯೆ, ಕಳ್ಳತನ, ವೈಶ್ಯಾವಾಟಿಕೆ ಸೇರಿ ಹಲವು ಕೆಲಸಗಳು ಅಡ್ಡದಾರಿ ಕೆಲಸಗಳಾಗಿದೆ. ಇಂಥ ಕೆಲಸಗಳನ್ನು ಇಂದಿನ ಜನ ಮಾಡರ್ನ್ ಆಗಿಯೇ ಮಾಡುತ್ತಾರೆ. ಕಳ್ಳರು ಸ್ಮಾರ್ಟ್ ಆಗಿಯೇ ಕಾರ್ಯನಿರ್ವಹಿಸುತ್ತಾರೆ. ಇಂಥವರಿಗೆ ಆತಿಥ್ಯ ಮಾಡಿದರೆ, ಅವರ ಪಾಪಕರ್ಮದ ಭಾಗ ನೀವಾಗುತ್ತೀರಿ ಅಂತಾರೆ ಚಾಣಕ್ಯರು.
=======================
ಹಣಕ್ಕಿಂತಲೂ ಈ ವಿಚಾರಗಳು ಮುಖ್ಯ ಅಂತಾರೆ ಚಾಣಕ್ಯರು
ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಹಣಕ್ಕಿಂತಲೂ ನಮ್ಮ ಜೀವನದಲ್ಲಿ ಕೆಲವು ವಿಚಾರಗಳು ಮುಖ್ಯವಾಗಿರುತ್ತದೆ ಎಂದಿದ್ದಾರೆ. ಹಾಗಾದ್ರೆ ಆ ವಿಚಾರಗಳಾದರೂ ಏನು ಅಂತಾ ತಿಳಿಯೋಣ ಬನ್ನಿ..
ಸ್ವಾಭಿಮಾನ: ಹಣ ಇದೆ ಎಂದು ನೀವು ಯಾರ ಜತೆಯೂ ಸ್ವಾಭಿಮಾನ ಬಿಟ್ಟು ಇರಲು ಸಾಧ್ಯವಿಲ್ಲ. ಹಾಗಿದ್ದರೆ, ನಿಮಗೆ ಯಾರೂ ಬೆಲೆ ನೀಡುವುದಿಲ್ಲ. ಹಣಕ್ಕಾಗಿ ಎಂದಿಗೂ ಸ್ವಾಭಿಮಾನ ಮಾರಿಕ“ಳ್ಳಬೇಡಿ ಅಂತಾರೆ ಚಾಣಕ್ಯರು.
ಆರೋಗ್ಯ: ಆರೋಗ್ಯವೇ ಭಾಗ್ಯ ಎನ್ನುವುದನ್ನು ನೀವು ಕೇಳಿರಬಹುದು. ಹಣದಿಂದ ನೀವು ಆರೋಗ್ಯ ಖರೀದಿಸಲು ಸಾಧ್ಯವೇ ಇಲ್ಲ. ಹಾಗಾಗಿ ನಾವು ಆರೋಗ್ಯವಾಗಿರಬೇಕು ಅಂದ್ರೆ, ನಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕ“ಳ್ಳಬೇಕು. ಆ ಶಿಸ್ತೇ ನಮ್ಮ ಆರೋಗ್ಯ ವೃದ್ಧಿಸುವಂತೆ ಮಾಡುತ್ತದೆ.
ಸಂಬಂಧ: ಹಣಕ್ಕಿಂತ ಸಂಬಂಧವೇ ಮೇಲು. ಈ ವಿಷಯವನ್ನು ಚಾಣಕ್ಯರು ಅದ್ಭುತವಾಗಿ ವಿವರಿಸಿದ್ದಾರೆ. ಅದೇನೆಂದರೆ, ಮನುಷ್ಯನ ಬಳಿ ಎಷ್ಟೇ ಹಣವಿರಬಹುದು. ಅವರು ಶ್ರೀಮಂತನೇ ಆಗಿರಬಹುದು. ಆದರೆ ಅವನು ಪ್ರೀತಿ, ವಾತ್ಸಲ್ಯ, ಮಮತೆ, ಕಾಳಜಿ, ನೆಮ್ಮದಿ ಬಿಟ್ಟು ಬರೀ ಹಣದ ಹಿಂದೆ ಹೋಗಲಾಗುವುದಿಲ್ಲ. ಹಾಗಾಗಿ ಜೀವನದ ಎಲ್ಲಾ ಆನಂದವನ್ನು ಅನುಭವಿಸಲು ಅವನಿಗೆ ಹಣದ ಜತೆ ಸಂಬಂಧವೂ ಮುಖ್ಯವಾಗಿರುತ್ತದೆ.
ಧರ್ಮ: ಹಣಕ್ಕಿಂತಲೂ ಧರ್ಮ ಮೇಲು ಅಂತಾರೆ ಚಾಣಕ್ಯರು. ಇಂದಿನ ಕಾಲದಲ್ಲಿ ಸ್ವಲ್ಪ ಹಣದ ಆಸೆ ತೋರಿಸಿದರೆ ಸಾಕು, ಕೆಲವರು ತಮ್ಮ ಧರ್ಮ, ನೀತಿ, ನಿಯಮ ಎಲ್ಲವನ್ನೂ ಮರೆತು, ಬೇರೆ ಧರ್ಮಕ್ಕೆ ಮತಾಂತರವಾಗಲು ಹೋಗುತ್ತಾರೆ. ಆದರೆ ಮತಾಂತರವಾದ ಬಳಿಕವೇ ಅವರಿಗೆ ತಮ್ಮ ಧರ್ಮದ ಬಗೆಗಿನ ಸತ್ಯ ತಿಳಿಯುತ್ತದೆ. ಆಗ ಸಮಯ ಮೀರಿರುತ್ತದೆ.
================
ಇಂಥ ವಾತಾವರಣವಿರುವ ಮನೆ ಸ್ಮಶಾನಕ್ಕೆ ಸಮ ಎಂದಿದ್ದಾರೆ ಚಾಣಕ್ಯರು
ಚಾಣಕ್ಯರು ಯಾವ ರೀತಿ ಆರ್ಥಿಕಾಗಿ ಬಲವಾಗಬೇಕು, ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು, ವಧು- ವರ ಹುಡುಕುವಾಗ ಯಾವ ವಿಷಯ ಗಮನದಲ್ಲಿರಿಸಬೇಕು ಹೀಗೆ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಕೆಲ ವಾತಾವರಣವಿರುವ ಮನೆಗಳು ಸ್ಮಶಾನಕ್ಕೆ ಸಮ ಎಂದಿದ್ದಾರೆ. ಹಾಗಾದ್ರೆ ಎಂಥ ವಾತಾವರಣವಿರುವ ಮನೆ ಸ್ಮಶಾನಕ್ಕೆ ಸಮ ಅಂತಾ ತಿಳಿಯೋಣ ಬನ್ನಿ..
ಶುಭಕಾರ್ಯ ಮಾಡದ ಮನೆ: ಮನೆ ಎಂದಮೇಲೆ ಅದರಲ್ಲೂ ಹಿಂದೂಗಳ ಮನೆ ಎಂದಮೇಲೆ, ಅಲ್ಲಿ ಶುಭಕಾರ್ಯಗಳು ನಡೆಯುತ್ತಲೇ ಇರಬೇಕು. ಅಂದ್ರೆ ಬರೀ ಮುಂಜಿ, ಮದುವೆ, ಗೃಹಪ್ರೇವಶ, ನಾಮಕರಣ ಅಲ್ಲಾ. ಪೂಜೆ, ಹೋಮ- ಹವನ ಇತ್ಯಾದಿಗಳು ಕೂಡ ಶುಭಕಾರ್ಯಗಳೇ. ಇವುಗಳನ್ನು ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗುತ್ತದೆ.
ಆದರೆ ಯಾವ ಮನೆಯಲ್ಲಿ ಶುಭಕಾರ್ಯಗಳು, ಪೂಜೆಗಳು ನಡೆಯುವುದಿಲ್ಲವೋ, ಅಂಥ ಮನೆಗಳು ಸ್ಮಶಾನಕ್ಕೆ ಸಮ ಎಂದಿದ್ದಾರೆ ಚಾಣಕ್ಯರು. ಏಕೆಂದರೆ, ಭಕ್ತಿ ಇಲ್ಲದ ಜನ, ಪೂಜೆ, ಶುಭಕಾರ್ಯ ನಡೆಯದ ಮನೆಗಳಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಜೋರಾಗಿರುತ್ತದೆ. ಹಾಗಾಗಿ ಅಂಥ ಮನೆ ಸ್ಮಶಾನಕ್ಕೆ ಸಮ ಎಂದಿದ್ದಾರೆ ಚಾಣಕ್ಯರು.
ಪೂಜೆ ಇಲ್ಲದ ಮನೆ: ಇದೇ ರೀತಿ ಪ್ರತಿದಿನ ಯಾವ ಮನೆಯಲ್ಲಿ ಪೂಜೆ ಮಾಡುವುದಿಲ್ಲವೋ, ಯಾವ ಮನೆಯಲ್ಲಿ ಭಕ್ತಿ ಇರುವ ಮನುಷ್ಯರಿರುವುದಿಲ್ಲವೋ, ಅಂಥ ಮನೆ ಕೂಡ ಸ್ಮಶಾನಕ್ಕೆ ಸಮ. ಏಕೆಂದರೆ, ದೇವರ ಮೇಲೆ ನಂಬಿಕೆ, ಭಕ್ತಿ, ಪೂಜೆ ಇಲ್ಲದ ಮನೆಯಲ್ಲಿ ವಾಸಿಸುವ ಜನರಿಗೆ ಹೆಚ್ಚು ಮಾನಸಿಕ ಖಿನ್ನತೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹೀಗಾಗಿ ಅಲ್ಲಿ ವಾಸಿಸುವ ಜನ, ಬದುಕಿದ್ದು ಉಪಯೋಗವಿಲ್ಲದಂತಿರುತ್ತಾರೆ.
ಗುರು- ಹಿರಿಯರನ್ನು ಗೌರವಿಸದ ಮನೆ: ಯಾವ ಮನೆಯಲ್ಲಿ ಗುರು ಹಿರಿಯರನ್ನು ಗೌರವಿಸುವುದಿಲ್ಲವೋ, ಯಾವ ಮನೆಯಲ್ಲಿ ತಂದೆ ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕ“ಳ್ಳುವುದಿಲ್ಲವೋ ಅಂಥ ಮನೆ ಕೂಡ ಸ್ಮಶಾನಕ್ಕೆ ಸಮವಾಗಿರುತ್ತದೆ. ಏಕೆಂದರೆ, ಅಲ್ಲಿ ಸಂಬಂಧ ಸರಿಯಾಗಿ ಇರುವುದಿಲ್ಲ. ಮತ್ತು ಯಾವ ಮನೆಯಲ್ಲಿ ಸಂಬಂಧ ಸರಿ ಇರುವುದಿಲ್ಲವೋ, ಅಂಥ ಮನೆಯಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ. ಮನಸ್ಸಿಗೆ ನೋವಾಗುವಂಥ ಮಾತು, ನಡುವಳಿಕೆ, ಹೀಯಾಳಿಸುವುದು ಇದೆಲ್ಲ ಇರುವ ಮನೆಯಲ್ಲಿ ಮಾನಸಿಕ ನೆಮ್ಮದಿ ಇರಲು ಸಾಧ್ಯವೇ ಇಲ್ಲ. ಹಾಗಾಗಿ ಇಂಥ ಮನೆ ಸ್ಮಶಾನಕ್ಕೆ ಸಮ ಅಂತಾರೆ ಚಾಣಕ್ಯರು.
==================
ಶ್ರೀಮಂತರಾಗಲು ನೀವು ಈ ಕೆಲಸಗಳನ್ನು ಮಾಡಬೇಕು ಅಂತಾರೆ ಚಾಣಕ್ಯರು
ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ನಾವು ಶ್ರೀಮಂತರಾಗಬೇಕು ಅಂದ್ರೆ ನಮ್ಮ ಜೀವನದಲ್ಲಿ ಎಂಥ ಗುಣಗಳನ್ನು ಅಳವಡಿಸಿಕ~`ಳ್ಳಬೇಕು ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ದಾನ ಮಾಡಿ: ನೀವು ದುಡಿದ ಹಣದಲ್ಲಿ ಸಣ್ಣ ಭಾಗವಾದರೂ ಸರಿ, ದಾನ ಮಾಡಿ. ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. ಓರ್ವ ಉತ್ತಮ ಮನಸ್ಸಿರುವ, ದಾನ ಮಾಡುವ ಸ್ವಭಾವವಿರುವರಿಗೆ ದೇವರೇ ಸಹಾಯ ಮಾಡುತ್ತಾನೆ ಅಂತಾ ಹಿರಿಯರು ಹೇಳುತ್ತಾರೆ. ಹಾಗಾಗಿ ಅವಶ್ಯಕತೆ ಇರುವವರಿಗೆ ದಾನ ಮಾಡುವ ಸ್ವಭಾವ ನಿಮ್ಮದಾದರೆ, ಶ್ರೀಮಂತರಾಗುವ ಯೋಗವೂ ದೇವರು ನಿಮಗೆ ನೀಡುತ್ತಾನೆ.
ಪ್ರಾಮಾಣಿಕರಾಗಿರಿ: ಜೀವನದಲ್ಲಿ ಯಾರು ಪ್ರಾಮಾಣಿಕರಾಗಿ ಇರುತ್ತಾರೋ, ಅಂಥವರಿಗೆ ಅದೃಷ್ಟ ದಕ್ಕುತ್ತದೆ. ಆ ಪ್ರಾಮಾಣಿಕತೆಯೇ ಎಷ್ಟೋ ಸಮಸ್ಯೆಗಳಿಂದ ಅವರನ್ನು ಕಾಪಾಡುತ್ತದೆ. ಪ್ರಾಮಾಣಿಕರಿಗೆ ಸಮಯ ಹೆಚ್ಚಾದರೂ, ಮುಂದೆ 1 ದಿನ ನೆಮ್ಮದಿ ಸಿಕ್ಕೇ ಸಿಗುತ್ತದೆ.
ಜ್ಞಾನವಂತರಾಗಿರಿ: ನೀವು ಎಷ್ಟು ಜ್ಞಾನವಂತರಾಗಿರುತ್ತೀರೋ ಅಷ್ಟು ಉತ್ತಮ. ನಾವು ಸಾಯುವ ತನಕ ಕಲಿಯುವುದು ಇದ್ದೇ ಇರುತ್ತದೆ. ನಮಗೆ ವಯಸ್ಸು ಹೆಚ್ಚಾದಷ್ಟು, ಅನುಭವವೂ ಹೆಚ್ಚಾಗುತ್ತದೆ. ಆದ್ದರಿಂದ ನಾವು ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು. ಹಲವು ಶ್ರೀಮಂತರು, ಎಲ್ಲದರ ಬಗ್ಗೆ ಹೆಚ್ಚೆಚ್ಚು ಮಾಹಿತಿ ಪಡೆಯಲು ಇಚ್ಛಿಸುತ್ತಾರೆ. ಹಾಗಾಗಿ ಎಲ್ಲ ಕಾಲದಲ್ಲೂ ಅವರು, ಎಲ್ಲ ವಿಷಯದಲ್ಲೂ ಎಚ್ಚರಿಕೆಯಿಂದ ಇದ್ದು, ತಮ್ಮ ಶ್ರೀಮಂತಿಕೆಯನ್ನು ಕಾಪಾಡಕ“ಳ್ಳುತ್ತಾರೆ.
ಧಾರ್ಮಿಕ ಗ್ರಂಥಗಳನ್ನು ಓದಿ: ಧಾರ್ಮಿಕ ಗ್ರಂಥಗಳನ್ನು ಓದಬೇಕು ಮತ್ತು ನಮ್ಮ ಧರ್ಮಪಾಲನೆ ಮಾಡಬೇಕು. ಏಕೆಂದರೆ ಯಾರು ಧರ್ಮಪಾಲನೆ ಮಾಡುತ್ತಾರೋ, ಅಂಥವರನ್ನು ಧರ್ಮ ಕಾಪಾಡುತ್ತದೆ. ಅಲ್ಲದೇ ಧಾರ್ಮಿಕ ಗ್ರಂಥದಲ್ಲಿ ಜೀವನಸಾರವನ್ನು ಅರ್ಥಮಾಡಿಕ“ಳ್ಳುವ ವಿಷಯವಿರುತ್ತದೆ. ಇದರಿಂದಲೇ ನಮ್ಮ ಜ್ಞಾನ ಹೆಚ್ಚುತ್ತದೆ.
ಇಂಥವರ ಸಹವಾಸ ಮಾಡಿ: ನಾವು ಸದಾಕಾಲ ಶ್ರೀಮಂತಿಕೆಯ ಬಗ್ಗೆ, ಉಳಿತಾಯದ ಬಗ್ಗೆ, ಬಂಡವಾಳ ಹೂಡಿಕೆಯ ಬಗ್ಗೆ ಮಾತನಾಡುವ, ಪ್ರಾಮಾಣಿಕವಾಗಿ ಜೀವನ ಮಾಡುವಂಥ ಜನರ ಜತೆ ಇರಬೇಕು. ಇದರಿಂದ ಆರ್ಥಕವಾಗಿ ನಾವು ಸಬಲರಾಗುತ್ತೇವೆ. ಅದೇ ರೀತಿ ಸಜ್ಜನ ಗುಣವುಳ್ಳವರ ಸಹವಾಸದಿಂದ ನಾವು ಉದ್ಧಾರವಾಗುತ್ತೇವೆ.
Discussion about this post