ನವದೆಹಲಿ: ಗೂಗಲ್ನ ಉಚಿತ ಇ–ಮೇಲ್ ಸೇವೆ ಜಿ–ಮೇಲ್ ಇಂದು (ಮಂಗಳವಾರ) ಮಧ್ಯಾಹ್ನ ದೇಶದ ಹಲವೆಡೆ ಕೆಲ ಕಾಲ ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ. ಪರಿಣಾಮವಾಗಿ ಬಳಕೆದಾರರಿಗೆ ಮೇಲ್ ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.
ಶೇ 73ರಷ್ಟು ಬಳಕೆದಾರರಿಗೆ ಜಿ–ಮೇಲ್ ಸೇವೆಯಲ್ಲಿ ಸಮಸ್ಯೆ ಕಂಡುಬಂದಿದ್ದರೆ, ಶೇ 14 ಬಳಕೆದಾರರು ಸರ್ವರ್ ಸಮಸ್ಯೆ ಇದೆ ಎಂದೂ ಶೇ 12 ಮಂದಿ ಲಾಗಿನ್ ಸಮಸ್ಯೆ ಆಗಿದೆ ಎಂದೂ ತಿಳಿಸಿದ್ದಾರೆ.
ಕೆಲವೇ ಹೊತ್ತಿನಲ್ಲಿ ಸಮಸ್ಯೆಯನ್ನು ಸರಿಪಡಿಸಿರುವುದಾಗಿ ಕಂಪನಿ ತಿಳಿಸಿದೆ.
ಜಿ–ಮೇಲ್ ಸೇವೆ ಪಡೆಯುವುದು ಸಾಧ್ಯವಾಗದ ಪರಿಣಾಮ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಲಾಗಿನ್ ಆಗುವುದಕ್ಕೆ ತೊಡಕಾಗಿದೆ ಎಂದೂ ಕೆಲವರು ದೂರಿದ್ದಾರೆ.
ಓದಿ: 12ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ಲಸಿಕೆ: ತಜ್ಞರ ಸಮಿತಿ ಶಿಫಾರಸು
‘ನನಗೆ ಮೇಲ್ಗಳು ಬರುತ್ತಿಲ್ಲ, ಕಳುಹಿಸಲೂ ಸಾಧ್ಯವಾಗುತ್ತಿಲ್ಲ. ಜಿ–ಮೇಲ್ ಡೌನ್ ಆಗಿದೆಯೇ’ ಎಂದು ಬಳಕೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
‘ಒಂದು ಗಂಟೆಯಿಂದ ಮೇಲ್ ಕಳುಹಿಸುವುದು, ಸ್ವೀಕರಿಸುವುದು ಕಷ್ಟವಾಗುತ್ತಿದೆ. ಜಿ–ಮೇಲ್ ಬಹುಶಃ ಡೌನ್ ಆಗಿರಬೇಕು. ಅಥವಾ ನನಗೆ ಮಾತ್ರ ಸಮಸ್ಯೆ ಆಗುತ್ತಿದೆಯೇ’ ಎಂದು ಬಳಕೆದಾರರೊಬ್ಬರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಜೂನ್ ತಿಂಗಳಲ್ಲಿ ಇದೇ ರೀತಿಯ ಸಮಸ್ಯೆ ಕೆಲ ಕಾಲ ಉದ್ಭವಿಸಿತ್ತು. ಕಳೆದ ಡಿಸೆಂಬರ್ನಲ್ಲಿ ಯೂಟ್ಯೂಬ್, ಗೂಗಲ್ ಸರ್ಚ್ ಸೇರಿದಂತೆ ಜಿ–ಮೇಲ್ ಸೇವೆಗಳು ಡೌನ್ ಆಗಿದ್ದವು.
ಕೆಲವೇ ದಿನಗಳ ಹಿಂದೆ ಫೇಸ್ಬುಕ್ ಸೇರಿದಂತೆ ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ, ಮೆಸೆಂಜರ್, ವಾಟ್ಸ್ಆ್ಯಪ್ ಸೇವೆಗಳು ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡು ಜನ ತೊಂದರೆ ಅನುಭವಿಸಿದ್ದರು.
Discussion about this post