ಗೂಗಲ್ ಸಂಸ್ಥೆ ಗೇಮರ್ಸ್ಗಳಿಗೆ ಶುಭಸುದ್ದಿಯನ್ನು ನೀಡಿದೆ. ಅದೇನೆಂದರೆ, ಗುರುವಾರ ಡಿಸೆಂಬರ್ 9 ರಂದು ಲಾಸ್ ಏಂಜಲೀಸ್ನಿಂದ ಲೈವ್ ಸ್ಟ್ರೀಮ್ ಮಾಡಿದ ಗೇಮ್ ಅವಾರ್ಡ್ಸ್ನಲ್ಲಿ ಒಂದು ಸಿಹಿ ಸುದ್ದಿಯನ್ನು ಘೋಷಣೆ ಮಾಡಿದೆ.
ಮುಂದಿನ ವರ್ಷ ಅಂದರೆ 2022 ರಿಂದ ವಿಂಡೋಸ್ (Windows) ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು ಮತ್ತು ಕಂಪ್ಯೂಟರ್ಗಳಿಗೆ ಗೂಗಲ್ ಪ್ಲೇ ಗೇಮ್ಸ್ (Google Play Games) ಅಪ್ಲಿಕೇಶನ್ ಅನ್ನು ತರುವುದಾಗಿ ಗೂಗಲ್ ಘೋಷಿಸಿದೆ.
ಈ ಅಪ್ಲಿಕೇಶನ್ನ್ನು ಸ್ವತಃ ಗೂಗಲ್ ರೂಪಿಸಲಿದೆ ಮತ್ತು ವಿಂಡೋಸ್ (Windows 11) ಮತ್ತು ವಿಂಡೋಸ್ 10 (Windows 10) ಎರಡಕ್ಕೂ ಗೇಮ್ಗಳು ಕಾರ್ಯನಿರ್ವಹಿಸಲಿದೆ. ಈ ಅಪ್ಲಿಕೇಶನ್ ಹೇಗೆ ವರ್ಕ್ ಆಗುತ್ತೆ? ಯಾವೆಲ್ಲಾ ಗೇಮ್ಸ್ ಇದರಲ್ಲಿ ಇರಲಿವೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಹೇಳದೆ ಬಹಳ ಸೀಕ್ರೆಟ್ ಆಗಿ ಇಡಲಾಗಿದೆ.
ಕಂಪೆನಿಯ ಮೂಲಗಳ ಪ್ರಕಾರ ಇದು ಈಗಿರುವ ಬ್ಲೂ ಸ್ಟಾಕ್ ಹಾಗೂ ಮೈಕ್ರೋಸಾಫ್ಟ್ ವಿಂಡೋಸ್ ಟೆಕ್ನಾಲಜಿ ಗಳಿಗಿಂತ ಭಿನ್ನವಾಗಿದೆ. ಈ ಆಪ್ ಅನ್ನು ವಿಂಡೋಸ್ ಆ್ಯಪ್ ಕಂಪ್ಯೂಟರ್ಗಳಲ್ಲಿ ನೇರವಾಗಿ ಡೌನ್ಲೋಡ್ ಮಾಡಿಕೊಂಡು ಆಡಲು ಸಾಧ್ಯವಿದೆ. ಇದಕ್ಕೆ ಕ್ಲೌಡ್ನಿಂದ ಸ್ಟ್ರಿಮ್ ಮಾಡುವ ಯಾವುದೇ ಅಗತ್ಯ ಇಲ್ಲ. ಈ ಆ್ಯಪ್ ಬಳಸಿ ಯೂಸರ್ಸ್ ಆಂಡ್ರಾಯ್ಡ್ ಮೊಬೈಲ್ ಹಾಗೂ ವಿಂಡೋಸ್ ಪಿಸಿಗಳಲ್ಲಿ ನಿರಂತರವಾಗಿ ಗೇಮಿಂಗ್ ಮಾಡಲು ಸಾಧ್ಯ.
2022 ರಿಂದ ಆಟಗಾರರು ತಮ್ಮ ನೆಚ್ಚಿನ ಗೂಗಲ್ ಪ್ಲೇ ಗೇಮ್ಸ್ಗಳನ್ನು ಹೆಚ್ಚಿನ ಗ್ಯಾಜೆಟ್ಗಳಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ. ಫೋನ್, ಟ್ಯಾಬ್ಲೆಟ್, ಕ್ರೋಮ್ಬುಕ್ ಮತ್ತು ಶೀಘ್ರದಲ್ಲೇ, ವಿಂಡೋಸ್ ಪಿಸಿಗಳ ನಡುವೆ ಮನಬಂದಂತೆ ಚೇಂಜ್ ಮಾಡಿ ಆಡಲು ಸಹಕಾರಿಯಾಗಿದೆ ಎಂದು ಗೂಗಲ್ನ ಉತ್ಪನ್ನ ನಿರ್ದೇಶಕ ಗ್ರೆಗ್ ಹರ್ಟಲ್ ತಿಳಿಸಿದ್ದಾರೆ. ಈ ಗೂಗಲ್ ನಿರ್ಮಿತ ಉತ್ಪನ್ನವು ಹೆಚ್ಚಿನ ಲ್ಯಾಪ್ಟಾಪ್ಗಳು ಮತ್ತು ಡೆಸ್ಕ್ಟಾಪ್ಗಳಿಗೆ ಅತ್ಯುತ್ತಮವಾದ ಗೂಗಲ್ ಗೇಮ್ಸ್ಗಳನ್ನು ತರುತ್ತದೆ ಮತ್ತು ಆಟಗಾರರು ತಮ್ಮ ನೆಚ್ಚಿನ ಆಂಡ್ರಾಯ್ಡ್ ಗೇಮ್ಸ್ಗಳನ್ನು ಇನ್ನಷ್ಟು ಆನಂದಿಸಲು ನಮ್ಮ ಪ್ಲಾಟ್ಫಾರ್ಮ್ ಅನ್ನು ವಿಸ್ತರಿಸಲು ನಾವು ಎಕ್ಸೈಟ್ ಆಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಘಟನೆ ಕುರಿತು ಪ್ರತ್ಯಕ್ಷದರ್ಶಿ ಮಾಹಿತಿ
(Google Is Bringing Android Games To Windows PCs In 2022)
Discussion about this post