Health Tips: ತುಂಬಾ ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನೋದನ್ನ ರೂಢಿಸಿಕೊಂಡಿರುತ್ತಾರೆ. ಆದ್ರೆ ನಿಮ್ಮ ಆರೋಗ್ಯ ಅಭಿವೃದ್ಧಿ ಆಗಬೇಕು ಅಂದ್ರೆ ನೀವು ಬಾದಾಮಿಯನ್ನೇ ತಿನ್ನಬೇಕು ಅಂತಿಲ್ಲ. ಶೇಂಗಾವನ್ನು ಕೂಡ ನೆನೆಸಿಟ್ಟು ತಿನ್ನಬಹುದು. ನೆನೆಸಿದ ಬಾದಾಮಿ ಹೇಗೆ ಆರೋಗ್ಯಾಭಿವೃದ್ಧಿಗೆ ಸಹಾಯವೋ ಅದೇ ರೀತಿ ನೆನೆಸಿದ ಶೇಂಗಾ ತಿನ್ನುವುದರಿಂದಲೂ ಹಲವು ಆರೋಗ್ಯಕರ ಲಾಭಗಳಿದೆ. ಹಾಗಾದ್ರೆ ನೆನೆಸಿದ ಶೇಂಗಾ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಏನೇನು ಅಂತಾ ತಿಳಿಯೋಣ ಬನ್ನಿ..
ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ
1.. ಬಡವರ ಬಾದಾಮಿ ಅಂತಾನೇ ಪ್ರಚಲಿತವಾಗಿರೋ ಶೇಂಗಾ ಬೀಜದ ಸೇವನೆ ಆರೋಗ್ಯಕ್ಕೆ ತುಂಬಾನೇ ಲಾಭಕಾರಿ, ಅದರಲ್ಲೂ ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದು ಉತ್ತಮ. ಚಳಿಗಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ದೇಹದಲ್ಲಿ ಶಕ್ತಿಯೂ ಕಡಿಮೆ ಇರುತ್ತದೆ. ಹಾಗಾಗಿ ಇವೆರಡನ್ನೂ ಹೆಚ್ಚಿಸಲು ನೆನೆಸಿಟ್ಟ ಶೇಂಗಾ ಸಹಕಾರಿಯಾಗಿದೆ.

2.. ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಬಿಪಿ ಕಂಟ್ರೋಲಿನಲ್ಲಿರುತ್ತದೆ. ಯಾರಿಗೆ ಬಿಪಿ ಸಮಸ್ಯೆ ಇದೆಯೋ, ಅವರು 10ರಿಂದ 15 ಶೇಂಗಾವನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಬಿಪಿ ಕಂಟ್ರೋಲಿನಲ್ಲಿಡಬಹುದು.
Health Tips|: ಸ್ವೀಟ್ ಕಾರ್ನ್ ಸೇವನೆಯ ಸಿಕ್ರೇಟ್ ಲಾಭ ಏನು ಗೊತ್ತಾ..? ಇಲ್ಲಿದೆ ಮಾಹಿತಿ
3.. ಪಚನಕ್ರಿಯೆ ಸರಿಯಾಗಿರಬೇಕು, ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬಾಧಿಸಬಾರದು ಎಂದಾದರೆ ನೆನೆಸಿಟ್ಟ ಶೇಂಗಾ ಕಾಳು ಸೇವಿಸಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಅಲ್ಲದೇ, ಮಲವಿಸರ್ಜನೆಯ ಸಮಸ್ಯೆಯೂ ದೂರವಾಗುತ್ತದೆ.
4.. ಚಳಿಗಾಲದಲ್ಲಿ ನೆನೆಸಿಟ್ಟ ಶೇಂಗಾ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಉಷ್ಣತೆ ದೊರಕುವುದಲ್ಲದೇ, ಶಕ್ತಿಯುತವಾಗಿರಲು ಸಹಕರಿಸುತ್ತದೆ.
5.. ನೆನೆಸಿಟ್ಟ ಶೇಂಗಾ ಸೇವನೆಯಿಂದ ಸಂಧಿವಾತದ ಸಮಸ್ಯೆ ದೂರವಾಗುತ್ತದೆ. ಅಲ್ಲದೇ, ಮೂಳೆ ಗಟ್ಟಿಯಾಗಿರುತ್ತದೆ. ಹಲ್ಲು ಬಂದ ಬಳಿಕ, ಶೇಂಗಾ ತಿನ್ನಲು ಯೋಗ್ಯ ಎನ್ನಿಸಿದರೆ, ನಿಮ್ಮ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ನೆನೆಸಿಟ್ಟ ಶೇಂಗಾವನ್ನು ತಿನ್ನಲು ಕೊಡಿ. ಇದರಿಂದ ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ.
ದಾಳಿಂಬೆ ಹಣ್ಣಿನ ಸೇವನೆ ಮಾಡಿದ್ರೆ, ನಿಮ್ಮ ಆರೋಗ್ಯದ್ದಲ್ಲಿ ಆಗತ್ತೆ ಅತ್ಯದ್ಭುತ ಬದಲಾವಣೆ
6.. ಶೇಂಗಾ ಕಾಳಿನಲ್ಲಿ ಒಮೇಗಾ-3 ಇರುವುದರಿಂದ ಇದರ ಸೇವನೆ ತ್ವಚೆಯ ಆರೋಗ್ಯ ಕಾಪಾಡುವುದಕ್ಕೆ ಸಹಕಾರಿಯಾಗಿದೆ. ಇದರ ಸೇವನೆಯಿಂದ ತ್ವಚೆಯ ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಅಂದವನ್ನು ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಿದೆ.
7..ಜಿಮ್ಗೆ ಹೋಗುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಬೀಜದ ಸೇವನೆ ಮಾಡಬೇಕು. ಇದರಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಬಾಡಿ ಬಿಲ್ಡ್ ಮಾಡುವಲ್ಲಿ ಸಹಾಯವಾಗುತ್ತದೆ.
8.. ಮಧುಮೇಹದಿಂದ ದೂರವಿರಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಸೇವಿಸಿ. ಇದರಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ.
Health Tips: ಹಸುವಿನ ಶುದ್ಧ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುತ್ತದೆ ಆಶ್ಚರ್ಯಕರ ಲಾಭ
9.. ನೆನೆಸಿಟ್ಟ ಶೇಂಗಾ ಸೇವನೆಯಿಂದ ರಕ್ತ ಸಂಚಲನೆ ಸರಾಗವಾಗಲಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಿಸುತ್ತದೆ. ಬರೀ ಹೃದಯ ಸಮಸ್ಯೆ ಇದ್ದವರಷ್ಟೇ ಅಲ್ಲದೇ, ಆರೋಗ್ಯವಂತರು ಪ್ರತಿದಿನ ನೆನೆಸಿಟ್ಟ ಶೇಂಗಾ ಸೇವನೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
10.. ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನಲಾಗುತ್ತೆ. ಅಂತೆಯೇ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
ಈ ರೆಮಿಡಿಯನ್ನು ನೀವು ಪ್ರಯೋಗಿಸಿದರೆ, ನಿಮ್ಮ ತ್ವಚೆ ಕ್ಲೀನ್, ಸಾಫ್ಟ್ ಆಗೋದು ಗ್ಯಾರಂಟಿ
11.. ನೆನಪಿರಲಿ, ಪ್ರತಿನಿತ್ಯ 15ರಿಂದ 20 ನೆನೆಸಿಟ್ಟ ಶೇಂಗಾ ಬೀಜಗಳನ್ನ ಸೇವಿಸಿ. ಅದಕ್ಕೂ ಹೆಚ್ಚು ಸೇವಿಸದಿರಿ. ಹೆಚ್ಚು ಸೇವಿಸಿದರೆ ಅಮೃತವೂ ವಿಷ ಎಂಬಂತೆ, ಯಾವುದೇ ಆರೋಗ್ಯಕರ ವಸ್ತುವನ್ನು ಹೆಚ್ಚು ತೆಗೆದುಕೊಂಡರೆ, ಅದು ಅನಾರೋಗ್ಯ ತಂದೊಡ್ಡುತ್ತದೆ. ಹಾಗಾಗಿ ಮಿತಿಯಲ್ಲಿ ಶೇಂಗಾ ಬೀಜದ ಸೇವನೆ ಮಾಡಿ.
Discussion about this post