Spiritual: ರುಚಿ ರುಚಿ ಊಟ ತಿಂಡಿ ಮಾಡೋದು ಎಲ್ಲರಿಗೂ ಇಷ್ಟವೇ. ಆದರೆ ಕೆಲವರು ಡಯಟ್ ಪ್ರಿಯರಾಗಿರ್ತಾರೆ. ಇನ್ನು ಕೆಲವರು ಆರೋಗ್ಯದ ದೃಷ್ಟಿಯಿಂದ ಭೋಜನದಿಂದ ದೂರ ಉಳಿಯುತ್ತಾರೆ. ಮತ್ತೆ ಕೆಲವರನ್ನು ಎಷ್ಟೇ ರುಚಿಕರ ತಿಂಡಿ ಕೊಟ್ಟರೂ ಮೆಚ್ಚಿಸಲಾಗುವುದಿಲ್ಲ. ಅವರೊಂಥರ ಅತೃಪ್ತ ಆತ್ಮಗಳು. ಆದರೆ ಆರೋಗ್ಯ, ಡಯಟ್ ಎಲ್ಲದರ ಚಿಂತೆ ಬಿಟ್ಟು, ರುಚಿ ರುಚಿ ಆಹಾರ ಸಿಕ್ಕಾಗ, ಬ್ಯಾಟಿಂಗ್ ಮಾಡುವವರು ಈ ರಾಶಿಯವರು. ಅವರ ಬಗ್ಗೆ ತಿಳಿಯೋಣ ಬನ್ನಿ..
ಕಟಕ: ಕಟಕ ರಾಶಿಯವರಿಗೆ ಹಸಿವು ಹೆಚ್ಚು. ಹಾಗಾಗಿ ಇವರು ಆಹಾರವನ್ನು ಗೌರವಿಸುತ್ತಾರೆ. ಕೊಟ್ಟ ಆಹಾರದ ರುಚಿಯನ್ನು ಜಡ್ಜ್ ಮಾಡುವುದಿಲ್ಲ. ಏಕೆಂದರೆ, ಇವರು ಆಹಾರದ ಕೊರತೆ ಹೇಗಿರುತ್ತೆ ಎನ್ನುವುದನ್ನು ಅರಿತಿರುತ್ತಾರೆ. ಹಾಗಾಗಿ ರುಚಿಯಿಲ್ಲದಿದ್ದರೂ, ಆಹಾರವನ್ನು ಗೌರವಿಸುತ್ತಾರೆ. ಜೊತೆಗೆ ಹೊಟೇಲ್‌ಗಳಿಗೆ ಹೋಗುವುದು, ರುಚಿ ರುಚಿ ತಿಂಡಿ ತಿನ್ನುವುದು, ಹೊಸ ಹೊಸ ತಿಂಡಿಯನ್ನು ಟ್ರೈ ಮಾಡುವುದು ಇವರಿಗೆ ಇಷ್ಟ.
ಸಿಂಹ: ರುಚಿಯಾದ ಆಹಾರ ಅಂದ್ರೆ ಸಿಂಹ ರಾಶಿಯರಿಗೆ ಬಲುಪ್ರಿಯ. ಹಸಿವಾದಾಗ ತಿನ್ನಲು ಆಹಾರ ಸಿಗದಿದ್ದಾಹ, ಇವರಿಗೆ ಬಹಳ ಬೇಗ ಕೋಪ ಬರುತ್ತದೆ. ಏಕೆಂದರೆ, ಸಿಂಹ ರಾಶಿಯವರಿಗೆ ಹಸಿವು ತಡೆಯುವ ಶಕ್ತಿ ಇರುವುದಿಲ್ಲ. ಇವರು ಮನೆಯೂಟ, ಮಾರುಕಟ್ಟೆಯಲ್ಲಿ ಸಿಗುವ ತಿಂಡಿ, ಹೊಟೇಲ್ ತಿನಿಸು ಎಲ್ಲವನ್ನೂ ಇಷ್ಟಪಡುತ್ತಾರೆ. ಹಾಗಾಗಿ ಹಸಿವಾದಾಗ, ಎಂಥ ತಿಂಡಿಯಾದರೂ ಸರಿ ಇವರು ತಿನ್ನುತ್ತಾರೆ. ಇಂಥದ್ದೇ ಬೇಕು ಅನ್ನುವ ಗುಣ ಇವರದ್ದಾಗಿರುವುದಿಲ್ಲ.
ತುಲಾ: ತುಲಾ ರಾಶಿಯವರು ಕೂಡ ಆಹಾರ ಪ್ರಿಯರು. ದುಡಿಯುವುದೇ ಖುಷಿಯಾಗಿರಲು. ಮತ್ತು ಖುಷಿಯಾಗಿ ಇರಬೇಕು ಅಂದ್ರೆ, ರುಚಿ ರುಚಿ ತಿಂಡಿಯನ್ನೇ ತಿನ್ನಬೇಕು ಅನ್ನುವ ಲಾಜಿಕ್ ಇವರದ್ದು ಹಾಗಾಗಿ. ಇವರ ಜೀವನ ಸಂಗಾತಿ ಇವರಿಗೆ ರುಚಿ ರುಚಿ ತಿಂಡಿ ಮಾಡಿಕೊಟ್ಟರೆ, ಅದರಿಂದಲೇ ಇವರು ಇಂಪ್ರೆಸ್ ಆಗುತ್ತಾರೆ.
ಧನು: ಧನು ರಾಶಿಯವರು ತಿರುಗಾಟದ ಪ್ರಿಯರು. ಇಡೀ ಪ್ರಪಂಚವನ್ನು ಸುತ್ತಬೇಕು ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಸಿಗುವ ತಿಂಡಿಯನ್ನು ಟೇಸ್ಟ್ ಮಾಡಬೇಕು. ಎಲ್ಲ ರೀತಿಯ ತಿಂಡಿಯ ರುಚಿ ನೋಡಬೇಕು ಅನ್ನೋದು ಇವರ ಮನದ ಆಸೆ. ಅಲ್ಲದೇ, ಮನೆಯಲ್ಲಿ ಮಾಡಿಕೊಡುವ ಊಟವೂ ರುಚಿಕರವಾಗಿರಬೇಕು ಎಂದು ಇವರು ಬಯಸುತ್ತಾರೆ. ಅಲ್ಲದೇ, ಊಟದ ರುಚಿಯ ಬಗ್ಗೆ ಹೆಸರಿಡದೇ, ಮೌನವಾಗಿ ತಿನ್ನುವ ಇವರು, ಅನ್ನಪೂರ್ಣೇಶ್ವರಿಯನ್ನು ಗೌರವಿಸುತ್ತಾರೆ.
Discussion about this post