Bollywood News: ಹಿಂದಿಯಲ್ಲಿ ಮೂರು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಸ್ತ್ರೀ ಮೂವಿ ಸಖತ್ ಹಿಟ್ ಆಗಿತ್ತು. ಇದೀಗ ಸ್ತ್ರೀ ಪಾರ್ಟ್ 2 ಕೂಡ ಬಿಡುಗಡೆಯಾಗುತ್ತಿದೆ. ಸ್ತ್ರೀ ಅನ್ನೋದು ಒಂದು ಹಾರರ್ ಮೂವಿ (Horror Movie). ಪ್ರೇತ ಒಂದು ಹೆಣ್ಣಿನ ರೂಪದಲ್ಲಿ ಇದ್ದು, ಗ್ರಾಮದ ಜನರ ಜೀವ ತೆಗೆಯುವ ಕಥೆ ಇದಾಗಿತ್ತು.
ಕೋಳಿ ಮೊದಲಾ? ಮೊಟ್ಟೆ ಮೊದಲಾ? ಎಂಬ ಪ್ರಶ್ನೆಗೆ ಉತ್ತರ ಕೊಟ್ಟವನ ಗತಿ ಏನಾಯ್ತು ಗೊತ್ತಾ..?
ಇಂಥ ಹಾರರ್ ಸಿನಿಮಾ ಶೂಟಿಂಗ್ ವೇಳೆ ತಮ್ಮ ಸಿನಿಮಾ ತಂಡಕ್ಕಾಗಿ ಒಂದು ಭಯಾನಕ ಅನುಭವವನ್ನು, ಈ ಸಿನಿಮಾದ ಹೀರೋ, ರಾಜಕುಮಾರ್ ರಾವ್ ಬಿಚ್ಚಿಟ್ಟಿದ್ದಾರೆ. ಹಿಂದಿ ಸಂದರ್ಶನವೊಂದರಲ್ಲಿ ಮಾತನಾಡಿರು ರಾಜ್‌ಕುಮಾರ್ ರಾವ್, ನಾವು ಶೂಟಿಂಗ್‌ಗಾಗಿ ಹೋದ ಕಟ್ಟಡವೊಂದರಲ್ಲಿ ಹಲವು ರೂಲ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಾಗಿತ್ತು. ಆ ನಿಯಮ ಫಾಲೋ ಮಾಡದಿದ್ದರೆ, ನಿಮ್ಮ ಪ್ರಾಣಕ್ಕೇ ಕುತ್ತು ಬರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದರು.
ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?
ಆ ನಿಯಮಗಳು ಏನೆಂದರೆ, ಸೆಂಟ್, ಪರ್ಫ್ಯೂಮ್ ಹಾಕಬಾರದು. ಲೋಬಾನ ಬಳಸಬಾರದು. ಹೆಣ್ಣು ಮಕ್ಕಳು ಕೂದಲು ಬಿಟ್ಟು ತಿರುಗಬಾರದು. ಮತ್ತು ಯಾರೂ ಒಬ್ಬೊಬ್ಬರೇ ಎಲ್ಲಿಯೂ ಹೋಗಬಾರದು. ಇಬ್ಬರಾದರೂ ಒಟ್ಟಿಗೆ ಇರಬೇಕು ಎಂದು ಹೇಳಿದ್ದರು. ಆ ದಿನ ನಾನು ಪರ್ಫ್ಯೂಮ್ ಹಾಕಿರಲಿಲ್ಲ. ಮತ್ತು ಎಲ್ಲರೂ ಈ ನಿಯಮ ಅನುಸರಿಸಿದ್ದರು. ಹೆಣ್ಣು ಮಕ್ಕಳು ಕೂದಲು ಕಟ್ಟಿಕೊಂಡಿದ್ದರು. ಎಲ್ಲವೂ ಒಟ್ಟಿಗೆ ಇದ್ದೆವು.
ಈ ರೆಮಿಡಿಯನ್ನು ನೀವು ಪ್ರಯೋಗಿಸಿದರೆ, ನಿಮ್ಮ ತ್ವಚೆ ಕ್ಲೀನ್, ಸಾಫ್ಟ್ ಆಗೋದು ಗ್ಯಾರಂಟಿ
ಆದರೆ ಶೂಟಿಂಗ್ ಸ್ಪಾಟ್‌ನಲ್ಲಿ ಒಂದು ನಿಯಮವನ್ನು ಬ್ರೇಕ್ ಮಾಡಲಾಯಿತು. ಲೋಬಾನ ಹಾಕಲಾಯಿತು. ಕೊಂಚ ಹೊತ್ತು ಎಲ್ಲವೂ ಸರಿ ಇತ್ತು. ಆದರೆ, ರಾತ್ರಿ ಹೊತ್ತು ಶೂಟಿಂಗ್ ನಡೆಯುತ್ತಿದ್ದ ವೇಳೆ ಲೈಟ್ ಹಿಡಿದು, ಲೈಟ್ ಬಾಯ್ ಮೇಲೆ ನಿಂತಿದ್ದ. ಸಡನ್ನಾಗಿ ಅವನು ಕೆಳಗೆ ಬಿದ್ದ. ಆಗ ನಾವೆಲ್ಲವೂ ಅವನು ನಿದ್ದೆಗಣ್ಣಲ್ಲಿ ಬಿದ್ದಿರಬೇಕು ಅಂದುಕೊಂಡೆವು. ಆದರೆ ಅವನು ಹೇಳಿದ್ದು, ನನ್ನನ್ನು ಯಾರೋ ಮೇಲಿನಿಂದ ಕೆಳಗೆ ನೂಕಿದರು ಎಂದು.
Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು
ಆದರೆ ಮೇಲೆ ಹೋಗಿ ನೋಡಿದಾಗ, ಅಲ್ಲಿ ಯಾರೂ ಇರಲಿಲ್ಲ. ಆಗ ಆ ಕಟ್ಟಡದವರು, ನೀವು ನಾವು ಹೇಳಿದ ನಿಯಮವನ್ನು ಅನುಸರಿಸಿದ್ದೀರಾ ಎಂದು ಕೇಳಿದರು. ನಾವು ಲೋಬಾನವನ್ನು ಹಾಕಿದ್ದೇವೆ ಎಂದು ಹೇಳಿದಾಗ, ಇಲ್ಲಿ ದುಷ್ಟ ಶಕ್ತಿಯ ಆಗಮನವಾಗಿದೆ ಎಂದು ಹೇಳಿದರು. ಬಳಿಕ ಲೋಬಾನ ಆರಿಸಿ, ಪ್ಯಾಕಪ್ ಮಾಡಲಾಯಿತು ಎಂದು ರಾಜ್‌ಕುಮಾಾರ್ ಇರಾನಿ ತಮಗಾದ ಅನುಭವ ಹೇಳಿಕೊಂಡಿದ್ದಾರೆ.
Discussion about this post