Special Story: ಕೊರಗಜ್ಜ. ಈ ಹೆಸರು ಕೇಳಿದರೆ, ತುಳುನಾಡ ಜನರ ಮನಸ್ಸಿನಲ್ಲಿ ಭಯ, ಭಕ್ತಿ, ನಂಬಿಕೆ, ಚೈತನ್ಯ ಎಲ್ಲವೂ ಮೂಡುತ್ತದೆ. ಯಾಕಂದ್ರೆ ಕೊರಗಜ್ಜನಲ್ಲಿರುವ ಶಕ್ತಿಯೇ ಅಂಥದ್ದು. ಕೊರಗಜ್ಜನನ್ನು ನಿರ್ಲಕ್ಷಿಸಿದ ಎಷ್ಟೋ ಜನರಿಗೆ ಈ ಅನುಭವವಾಗಿದೆ. ಅಂಥವರೆಲ್ಲ ಕೊರಗಜ್ಜನ ಅಪ್ಪಟ ಭಕ್ತರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ ಎದ್ದು ಕೊರಗಜ್ಜನನ್ನು ಕಾಪಾಡು ಎಂದು ಬೇಡುತ್ತಾರೆ. ಅಂಥ ಶಕ್ತಿ ಕೊರಗಜ್ಜನದ್ದು.
ತುಳುವರು ಕೊರಗಜ್ಜನನ್ನು ಪ್ರೀತಿಯಿಂದ ಅಜ್ಜ, ಕರಿಯಜ್ಜ, ಕೊರಗ ತನಿಯ ಅಂತ ಕರಿಯುತ್ತಾರೆ. ಹಾಗಂತ ಕೊರಗಜ್ಜ ತುಳುವರಿಗಷ್ಟೇ ಸೀಮಿತವಾಗಿರುವ ದೈವವಾಗಿಲ್ಲ. ರಾಜ್ಯ, ದೇಶ, ವಿದೇಶ ಹಲವೆಡೆ ಕೊರಗಜ್ಜನಿಗೆ ಭಕ್ತರಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂಮರು ಕೂಡ ಕೊರಗಜ್ಜನ ಸನ್ನಿಧಾನಕ್ಕೆ ಬಂದು, ದರ್ಶನ ಪಡೆದು ಹೋಗುತ್ತಾರೆ.
ವಿದೇಶಿ ನಟಿ ಕತ್ರೀನಾ ಕೈಫ್ ಮೊರೆ ಹೋಗಿದ್ದು ಈ ಪವಾಡಪುರುಷನಿಗೆ
ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಮಹಿಮೆ ಎಂಥದ್ದು ಅಂತಾ ಹಲವರಿಗೆ ಗೊತ್ತಾಗುತ್ತಿದೆ. ಬಾಲಿವುಡ್‌ನಲ್ಲಿರುವ, ಹೊರ ದೇಶದಿಂದ ಬಂದು, ಭಾರತದಲ್ಲಿ ಬದುಕು ಕಟ್ಟಿಕೊಂಡಿರುವ, ಮುಸ್ಲಿಂ ಧರ್ಮದ ನಟಿ ಕತ್ರೀನಾ ಕೈಫ್ ದಕ್ಷಿಣ ಕನ್ನಡ ಕುತ್ತಾರಿಗೆ ಬಂದು, ಕೊರಗಜ್ಜನ ಕೋಲ ಸೇವೆಯಲ್ಲಿ ಭಾಗಿಯಾಗುತ್ತಾರೆ ಎಂದರೆ, ಇದು ಕೊರಗಜ್ಜನ ಮಹಿಮೆ ಅಲ್ಲದೇ, ಮತ್ತಿನ್ನೇನು..?
ಕೆಲ ದಿನಗಳ ಹಿಂದಷ್ಟೇ ಕ್ರಿಕೇಟಿಗ ಕೆ.ಎಲ್.ರಾಹುಲ್, ಅವರ ಪತ್ನಿ, ನಟ ಸುನೀಲ್ ಶೆಟ್ಟಿಯವರ ಪುತ್ರಿ ಅತಿಯಾ ಶೆಟ್ಟಿ ಮತ್ತು ಸೋಹದರನ ಜೊತೆ ಕತ್ರೀನಾ ಕೈಫ್ ಕುತ್ತಾರುವಿಗೆ ಬಂದಿದ್ದರು. ಅಲ್ಲದೇ, ರಾತ್ರಿ ನಡೆದ ಭೂತಕೋಲದಲ್ಲಿ ದೂರದಿಂದಲೇ ಭಾಗವಹಿಸಿದ್ದರು. ಕತ್ರೀನಾ ಭಾರತ ದೇಶದವರೇ ಅಲ್ಲ. ಅಲ್ಲದೇ, ಅವರು ಹುಟ್ಟು ಹಿಂದೂವೇ ಅಲ್ಲ.
ಕೆಲ ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ನಟಿಯಾಗಿ, ಜೀವನ ಕಟ್ಟಿಕೊಳ್ಳಲು ಬಂದಿದ್ದ ಕತ್ರೀನಾ, ವಿಕಿ ಕೌಶಲ್ ಅವರನ್ನು ವಿವಾಹವಾಗಿ, ಹಿಂದೂವಾಗಿದ್ದಾರೆ. ಅವರು ಯಾಕೆ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ, ಅಜ್ಜನ ಆಶೀರ್ವಾದ ಪಡೆದರು ಅನ್ನೋದು ಅವರಿಗಷ್ಟೇ ಗೊತ್ತು. ಅವರ ಜೀವನದಲ್ಲಿ ಕೊರಗಜ್ಜ ಎಂಥ ಪವಾಡ ಮಾಡಿದ್ದಾರೆ ಅನ್ನೋದು ಮಾತ್ರ, ಅವರಿಗಷ್ಟೇ ಗೊತ್ತು.
ಕುತ್ತಾರು ಕೊರಗಜ್ಜನಿಗೆ ಕೋಲ ಕೊಟ್ಟ ಧಾರವಾಡದ ವಿನಯ್ ಕುಲಕರ್ಣಿ
ಇನ್ನು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಆರೋಪವಿದೆ. ಹಾಗಾಗಿ ಅವರನ್ನು ಧಾರವಾಡದಿಂದ ಬಹಿಷ್ಕರಿಸಲಾಗಿದೆ. ಇನ್ನುವರೆಗೂ ವಿನಯ್ ಧಾರವಾಡಕ್ಕೆ ಹೋಗಲಾಗುತ್ತಿಲ್ಲ. ಮೊನ್ನೆ ನಡೆದ ಲೋಕಸಭೆ ಚುನಾವಣೆಗೆ ಹೋಗಿ, ಓಟ್ ಮಾಡಿ ಬಂದದ್ದಷ್ಟೇ. ಅದಾದ ಬಳಿಕ ಮತ್ತೆ ನಿರ್ಬಂಧ.
ಧಾರವಾಡದ ವಿನಯ್ ಕುಲಕರ್ಣಿ ಸಮಸ್ಯೆಗೆ ಪರಿಹಾರ ಕೋರಿ ಬಂದದ್ದು ಮಾತ್ರ, ಕುತ್ತಾರಿನಲ್ಲಿರುವ ಕೊರಗಜ್ಜನ ಬಳಿ. ಕೆಲ ದಿನಗಳ ಹಿಂದೆ, ವಿನಯ್ ಪತ್ನಿ ಸಮೇತರಾಗಿ ಬಂದು, ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ, ನಟ ದರ್ಶನ್, ಸೇರಿ ಹಲವು ಸೆಲೆಬ್ರಿಟಿಗಳು ಕುತ್ತಾರುವಿನ ಕೊರಗಜ್ಜ ಸನ್ನಿಧಾನಕ್ಕೆ ಬಂದು, ದರ್ಶನ ಪಡೆದು, ಆಶೀರ್ವಾದ ಬೇಡಿ ಹೋಗಿದ್ದಾರೆ.
ಕೊರಗಜ್ಜ ಎಂದರೆ ಯಾರು..?
ಕೊರಗಜ್ಜ ಎಂದರೆ, ಶಿವನ ಅಂಶ ಅಂತಾ ಹೇಳಲಾಗಿದೆ. ತುಳುನಾಡಿನಲ್ಲಿ ಆರಾಧಿಸಲ್ಪಡುವ ದೈವಗಳಲ್ಲಿ ಕೊರಗಜ್ಜ ಕೂಡ ಒಬ್ಬರು. ದೈವಗಳು ಶಿವಗಣಗಳಾಗಿದ್ದು, ಕೊರಗಜ್ಜ ಕೂಡ ಶಿವಗಣಗಳಲ್ಲಿ ಓರ್ವ. ಹಾಗಾಗಿ ಕೊರಗಜ್ಜನ ಕೈಯಲ್ಲಿ ಶಿವನ ಬಳಿ ಇರುವಂತೆ ನಾಗ ಮತ್ತು ತ್ರಿಶೂಲವಿರುತ್ತದೆ.
ಕೊರಗಜ್ಜನ ಮೂಲಸ್ಥಳ ಯಾವುದು…?
ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಕೊರಗಜ್ಜನ ಮೂಲಸ್ಥಳವಾಗಿದೆ. ಇಲ್ಲಿ ಕೊರಗಜ್ಜ ದೈವಗಳು ಮತ್ತು ರಕ್ತೇಶ್ವರಿಯೊಂದಿಗೆ ನೆಲೆಸಿದ್ದಾರೆ. ಹಾಗಾಗಿ ಮೊದಲು ರಕ್ತೇಶ್ವರಿ ದೇವಿಯ ದರ್ಶನ ಮಾಡಿ, ಬಳಿಕ ದೈವಗಳ ದರ್ಶನ ಮಾಡಿ, ಕೊನೆಗೆ ಕೊರಗಜ್ಜನ ದರ್ಶನ ಮಾಡಲಾಗುತ್ತದೆ.
ಇನ್ನು ಇಲ್ಲಿ ಕೊರಗಜ್ಜಿಗೆ ನೈವೇದ್ಯಕ್ಕಾಗಿ, ಮದ್ಯ, ಚಕ್ಕುಲಿ, ಬೀಡಾ ತೆಗೆದುಕೊಂಡು ಹೋಗಬಹುದು. ಆದರೆ ರಕ್ತೇಶ್ವರಿ ಮತ್ತು ದೈವಗಳ ದರ್ಶನ ಮಾಡುವಾಗ ನೀವು ಈ ನೈವೇದ್ಯವನ್ನು ತೆಗೆದುಕೊಂಡು ಹೋಗುವಂತಿಲ್ಲ. ಬದಲಾಗಿ, ಕೊರಗಜ್ಜನ ದರ್ಶನಕ್ಕೆ ಹೋಗುವಾಗ ಮಾತ್ರ ಚಕ್ಕುಲಿ, ಮದ್ಯ, ಬೀಡಾ ತೆಗೆದುಕೊಂಡು ಹೋಗಬಹುದು.
ಕೊರಗಜ್ಜನ ಗಂಧದ ಮಹತ್ವ
ಕೊರಗಜ್ಜನ ಸನ್ನಿಧಿಗೆ ಹೋದಾಗ, ಮರಿಯದೇ ಗಂಧವನ್ನು ಹಚ್ಚಿಕೊಳ್ಳಿ. ಅಲ್ಲದೇ, ಮನೆಗೆ ಬರುವಾಗ ಆ ಗಂಧವನ್ನು ತೆಗೆದುಕೊಂಡು ಬನ್ನಿ. ಅನಾರೋಗ್ಯಪೀಡಿತರು, ಮಕ್ಕಳಿಗೆ ಹಚ್ಚಿ. ಸಂದರ್ಶನಕ್ಕೆ, ಮುಖ್ಯ ಕೆಲಸಕ್ಕೆ ಹೋಗುವಾಗ ಗಂಧವನ್ನು ಹಚ್ಚಿಕೊಂಡು ಹೋಗಿ. ಯಾರಾದರೂ ಊಟಕ್ಕೆ ಕರೆದರೆ, ಅಥವಾ ಮಾಟ ಮಂತ್ರ ಮಾಡಿಸಿದ್ದರೆ, ಅಂಥವರು ಕೊರಗಜ್ಜನ ಕರಿಗಂಧನವನ್ನು ಹಚ್ಚಿಕೊಂಡರೆ, ಎಲ್ಲ ಋಣಾತ್ಮಕ ಶಕ್ತಿ ದೂರವಾಗುತ್ತದೆ.
ಕೊರಗಜ್ಜ ಅದೆಂಥ ಪವಾಡ ಪುರುಷ ಗೊತ್ತಾ..?
ಕೊರಗಜ್ಜ ಎಂಥ ಪವಾಡ ಪುರುಷ ಅಂತಾ ಅದನ್ನು ಮನಗಂಡವರಿಗಷ್ಟೇ ಗೊತ್ತು. ಎಷ್ಟೋ ಪೋಷಕರು ಕೊರಗಜ್ಜನ ಬಳಿ ತಮ್ಮ ಮಕ್ಕಳ ಪ್ರಾಣ ರಕ್ಷಣೆ ಮಾಡು ಎಂದು ಬೇಡಿ, ಆಶ್ಚರ್ಯಕರ ರೀತಿಯಲ್ಲಿ ಮಕ್ಕಳನ್ನು ಜೀವಂತವಾಗಿ ವಾಪಸ್ ಪಡೆದಿದ್ದಾರೆ.
ಮಾಟಮಂತ್ರಕ್ಕೆ ತುತ್ತಾದವರು, ಕೊನೆಗೆ ಕೊರಗಜ್ಜನಿಗೆ ಮೊರೆ ಹೋಗಿ, ನೆಮ್ಮದಿಯ ಬಾಳು ಬಾಳುತ್ತಿದ್ದಾರೆ. ಇನ್ನು ಕೊರಗಜ್ಜನ ಭಕ್ತರು, ಭೂಮಿ ಸಮಸ್ಯೆ, ಕಳ್ಳತನದಂಥ ಘಟನೆ ನಡೆದಾಗ, ಪೊಲೀಸ್ ಠಾಣೆಗೆ ಹೋಗುವುದಿಲ್ಲ. ಬದಲಾಗಿ, ಕೊರಗಜ್ಜನ ಬಳಿ ಬಂದು ನ್ಯಾಯ ಕೇಳುತ್ತಾರೆ. ನಿಯತ್ತಾಗಿ ಇರುವವರಿಗೆ ಕೊರಗಜ್ಜ ನ್ಯಾಯ ದೊರಕಿಸಿಕೊಡುತ್ತಾರೆ. ಎಷ್ಟೋ ಮನೆಯಲ್ಲಿ ಕಳೆದು ಹೋದ ಚಿನ್ನಾಭರಣಗಳು, ದುಡ್ಡು ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾಗಿ, ಮನೆ ಸೇರಿದೆ.
ಕೊರಗಜ್ಜನನ್ನು ಭಕ್ತರು ಮರೆತರೆ, ಅವರಿಗೆ ತನ್ನ ನೆನಪು ತರಿಸುವ ಶಕ್ತಿಯೂ ಕೊರಗಜ್ಜನಲ್ಲಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಅಲ್ಲದೇ, ಎರಡು ಮೂರು ವರ್ಷಗಳ ಹಿಂದೆ ಬೇರೆ ಧರ್ಮದ ಪುಂಡರು, ಕೊರಗಜ್ಜನ ಮುಂದೆ ಇಟ್ಟ ಹುಂಡಿಯಲ್ಲಿ ಕಾಂಡೋಮ್ ಹಾಕಿದ್ದರು. ಹುಂಡಿ ಒಡೆದಾಗ, ಪುಂಡರು ಮಾಡಿದ ಕೆಲಸ ಬೆಳಕಿಗೆ ಬಂದಿದೆ.
ಆಗ ಭಕ್ತರು, ಇವರನ್ನು ನೀನೇ ಶಿಕ್ಷಿಸು ಎಂದು ಬೇಡಿಕೊಂಡಿದ್ದಾರೆ. ಕೊರಗಜ್ಜ ತಪ್ಪಿಸ್ಥರು ತಾವಾಗಿಯೇ ಸನ್ನಿಧಾನಕ್ಕೆ ಬರುತ್ತಾರೆ ಎಂದು ಸೂಚನೆ ನೀಡಿದ್ದರು. ಅದರಂತೆ ನಾಲ್ಕು ಆರೋಪಿಗಳಲ್ಲಿ ಓರ್ವ ಆರೋಪಿ ಮಾನಸಿಕವಾಗಿ ಹುಚ್ಚರಂತೆ ಸತ್ತರೆ, ಇನ್ನೋರ್ವ ರಕ್ತ ಕಾರಿ ಸತ್ತ. ಉಳಿದಿದ್ದ ಇಬ್ಬರು ಆರೋಪಿಗಳು ಹೆದರಿ, ತಪ್ಪು ಕಾಣಿಕೆ ಹಾಕಲು, ಕೊರಗಜ್ಜನ ಸನ್ನಿಧಾನಕ್ಕೆ ಬಂದು, ಸಿಕ್ಕಿ ಹಾಕಿಕೊಂಡರು.
ಇನ್ನು ನೀವು ಭಕ್ತಿಯಿಂದ ಕೊರಗ ತನಿಯನ ಬಳಿ ಕೋರಿಕೆ ಬೇಡಿದರೆ, ಕೆಲ ನಿಮಿಷಗಳಲ್ಲೇ ನಿಮ್ಮ ಕೋರಿಕೆ ಈಡೇರಿಸುವ ಶಕ್ತಿ ಕೊರಗಜ್ಜನಿಗಿದೆ. ಹಾಗಾಗಿ ಇಲ್ಲಿ ಆಸೆ, ದುರಾಸೆ, ಕೆಟ್ಟ ಯೋಚನೆಗಿಂತ, ಭಕ್ತಿಗೆ ಒಲಿಯುತ್ತಾರೆ ಪವಾಡ ಪುರುಷ ಕೊರಗಜ್ಜ.
Discussion about this post