Horoscope: ನಾವಿವತ್ತು ಕರ್ಕ ರಾಶಿಯವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.
- ಕರ್ಕ ರಾಶಿಯ ಅಧಿಪತಿ ಚಂದ್ರನಾಗಿದ್ದು, ಈ ರಾಶಿಯವರು ಜಲ ತತ್ವದ ರಾಶಿಯವರಾಗಿರುತ್ತಾರೆ. ಆಕರ್ಷಕವಾದ ಮುಖಚರ್ಯೆ ಹೊಂದಿರುವ ಇವರು, ಭಾವುಕ ಸ್ವಭಾವದವರಾಗಿರುತ್ತಾರೆ.
- ಯಾರಿಗೂ ಮೋಸ ಮಾಡಲು ಇಚ್ಛಿಸದ ಇವರಿಗೆ, ಯಾರಾದರೂ ಮೋಸ ಮಾಡಿದರೆ, ನಂಬಿಕೆ ದ್ರೋಹ ಮಾಡಿದರೆ, ಸುಳ್ಳು ಹೇಳಿದರೆ, ಅಂಥವರನ್ನು ಜೀವಮಾನ ಪರ್ಯಂತ ಕ್ಷಮಿಸುವುದಿಲ್ಲ.
- ಇನ್ನು ದಯೆಯ ಸ್ವಭಾವ ಹೆಚ್ಚಿರುವ ಇವರು, ಕೆಲವೊಮ್ಮೆ ಇದೇ ದಯೆಯಿಂದ ಮೋಸ ಹೋಗುತ್ತಾರೆ. ಇವರ ಈ ಸಾಧು ಸ್ವಭಾವದಿಂದಲೇ ಇವರು ಮೋಸ ಹೋಗುವುದು ಹೆಚ್ಚು ಎನ್ನಬಹುದು.
- ಕರ್ಕ ರಾಶಿಯವರ ಜಾತಕದಲ್ಲಿ ಚಂದ್ರದೇವನ ಸ್ಥಾನ ಉಚ್ಛ ಮತ್ತು ಉತ್ತಮವಾಗಿದ್ದರೆ, ಅವರು ತೆಗೆದುಕೊಳ್ಳುವ ನಿರ್ಧಾರವೂ ಉತ್ತಮ ಮತ್ತು ಉಚ್ಛವಾಗಿರುತ್ತದೆ. ಮತ್ತು ಅದೃಷ್ಟ ಕೈ ಹಿಡಿಯುತ್ತದೆ. ಅದೇ ಚಂದ್ರ ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ, ವಿಪರೀತ ಕೋಪದ ಸ್ವಭಾವ ಕರ್ಕ ರಾಶಿಯವರದ್ದಾಗುತ್ತದೆ. ಮತ್ತು ಇದೇ ಕೋಪದ ಕಾರಣ, ಬರುವ ಅದೃಷ್ಟವೂ ಕೈ ತಪ್ಪಿ ಹೋಗುತ್ತದೆ.
- ಅಲ್ಲದೇ, ಕರ್ಕ ರಾಶಿಯವರದ್ದು ಚಂಚಲ ಸ್ವಭಾವವಾದ್ದರಿಂದ, ಇಂದು ಮಾಡಿದ ಯೋಚನೆ ನಾಳೆ ಅವರಿಗೆ ಇಷ್ಟವಾಗುವುದಿಲ್ಲ. ಉದಾಹರಣೆಗೆ ರಿಸಲ್ಟ್ ಬಂದ ತಕ್ಷಣ, ಒಮ್ಮೆ ಸೈನ್ಸ್ ತೆಗೆದುಕೊಳ್ಳಬೇಕು ಎಂದು, ನಂತರ ಕಾಮರ್ಸ್ ತೆಗೆದುಕೊಳ್ಳುತ್ತೇನೆ ಎಂದು ಕೊನೆಗೆ ಮನೆಯವರ ಒತ್ತಾಯಕ್ಕೆ ಯಾವುದೋ ಒಂದು ವಿಷಯವನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಪಿಯುಸಿ, ಡಿಗ್ರಿ ಮುಗಿದ ಬಳಿಕ, ಅವರ ಕೆಲಸ ಅವರ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿರುವುದಿಲ್ಲ.
- ಯಾವುದಾದರೂ ಕೆಲಸ ಮಾಡುವಾಗ, ಯಾವುದೇ ತಕರಾರಿಲ್ಲದೇ, ಎಲ್ಲರ ಸಲಹೆಯನ್ನು ಕೇಳುವ ಇವರು, ಕೊನೆಗೆ ತಾವಂದುಕೊಂಡ ಹಾಗೆ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಆದರೆ ಜಾತಕದಲ್ಲಿ ಚಂದ್ರ ಅಶುಭ ಸ್ಥಾನದಲ್ಲಿದ್ದರೆ, ಇತರರ ಮಾತನ್ನು ಕೇಳಿ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.
- ಯಾವಾಗಲು ಹಸನ್ಮುಖ ಮತ್ತು ಸೌಮ್ಯ ಸ್ವಭಾವದವರಾದ ಕರ್ಕ ರಾಶಿಯವರು, ಮಿತವಾಗಿ ಮಾತನಾಡುತ್ತಾರೆ. ಹಾಗಾಗಿ ಇವರಿಗೆ ಹೆಚ್ಚಿನ ಗೆಳೆಯರಿರುವುದಿಲ್ಲ. ಹೊಸಬರು ಪರಿಚಯವಾದಾಗ, ಅವರೊಂದಿಗೆ ಇತಿ ಮಿತಿಯಿಂದ ಇರುತ್ತಾರೆ. ಅವರ ಗುಣ ಉತ್ತಮ ಎಂದು ಕನ್ಫರ್ಮ್ ಆದಾಗಷ್ಟೇ ಅವರ ಗೆಳೆತನ ಮಾಡುತ್ತಾರೆ. ಇಲ್ಲವಾದಲ್ಲಿ ಅವರೆಡೆ ಒಂದು ನಗೆ ಚೆಲ್ಲುವುದು ಕೂಡ ಅನುಮಾನವೇ ಸರಿ.
- ಭಾವನಾತ್ಮಕ ಸ್ವಭಾವದವರಾದ ಇವರನ್ನು ಜನ ಆರಾಮವಾಗಿ ಪುಸಲಾಯಿಸಿಬಿಡುತ್ತಾರೆ. ಮತ್ತು ಇವರಿಗಷ್ಟೇ ಅಲ್ಲದೇ, ಇವರ ಸುತ್ತಮುತ್ತಲಿರುವ ಜನರಿಗೆ ತೊಂದರೆಯಾದರೂ, ಕಣ್ಣೀರಿಡುವ, ಬೇಸರ ಪಡುವ ಸ್ವಭಾವ ಇವರದ್ದಾಗಿರುತ್ತದೆ.
- ಇವರ ಸ್ನೇಹಿತರ ಬಳಗ ಚಿಕ್ಕದಾಗಿದ್ದರೂ ಕೂಡ, ಇರುವ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಪ್ರೀತಿ ತೋರಿಸುತ್ತಾರೆ. ಇನ್ನು ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುವ ಇವರು, ಜೀವನ ಸಂಗಾತಿಯನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ.
- ಇನ್ನು ಇವರು ಕಲ್ಪನಾ ಲೋಕದಲ್ಲಿ ಹೆಚ್ಚಾಗಿ ತೇಲುವುದರಿಂದ, ಹಿಡಿದ ಕೆಲಸವನ್ನು ಮಾಡಿ ಮುಗಿಸುವುದು ಸ್ವಲ್ಪ ಲೇಟ್ ಆಗಬಹುದು. ದೊಡ್ಡ ದೊಡ್ಡ ಕನಸು ಕಾಣುವ ಇವರು, ಅದನ್ನ ನನಸು ಮಾಡಲು ಮಾತ್ರ ಕೊಂಚ ಆಲಸ್ಯ ಮಾಡುತ್ತಾರೆ.
- ಕರ್ಕ ರಾಶಿಯವರಿಗೆ ಕಿವಿ ಮಾತೆಂದರೆ, ಎಲ್ಲ ವಿಷಯದಲ್ಲೂ ಎಲ್ಲರ ಎದುರಿಗೂ ಹೆಚ್ಚು ಭಾವುಕರಾಗಬೇಡಿ. ನೀವು ಭಾವುಕರು, ಸಾಧು ಸ್ವಭಾವದವರು ಎಂದು ತೋರಿಸಿದ್ದಲ್ಲಿ ಜನ ನಿಮ್ಮಿಂದ ಲಾಭ ಪಡೆಯುತ್ತಾರೆ. ಮತ್ತು ನೀವು ಹೆಚ್ಚು ಮೋಸ ಹೋಗುತ್ತೀರಿ.
- ಅಲ್ಲದೇ, ಎದುರಿಗೆ ಇದ್ದವರು ಯಾವುದಾದರೂ ಕೆಲಸ ಹೇಳಿದರೆ, ಆ ಕೆಲಸ ನಿಮ್ಮ ಕೈಯಲ್ಲಿ ಮಾಡಲು ಸಾಧ್ಯವಿದ್ದಲ್ಲಿ ಮಾತ್ರ, ಮಾಡುತ್ತೇನೆಂದು ಹೇಳಿ. ಆ ಕೆಲಸ ಮಾಡಲು ಬರದಿದ್ದರೂ, ಮಾಡುತ್ತೇನೆಂದು ಹೇಳಿದರೆ, ಮುಂದೆ ನೀವು ಪೇಚಿಗೆ ಸಿಲುಕಬೇಕಾಗುತ್ತದೆ.
- ಬಿಳಿ, ಹಳದಿ, ಆಕಾಶ ನೀಲಿ, ಬೆಳ್ಳಿ ಬಣ್ಣ ಲಕ್ಕಿ ಕಲರ್ಸ್ ಆಗಿದ್ದು, ರವಿವಾರ, ಸೋಮವಾರ, ಗುರುವಾರ ಅದೃಷ್ಟದ ದಿನಗಳಾಗಿದೆ. 1,2,5,9 ಶುಭ ಅಂಕಗಳಾಗಿದೆ.
Discussion about this post