ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಸಿನಿಮಾ ಹಾಲ್ ಗಳಿಗೆ ಪ್ರವೇಶ ಅವಕಾಶ, ಸಭೆ-ಸಮಾರಂಭಗಳಿಗೆ ಭಾಗವಹಿಸುವವರ ಸಂಖ್ಯೆ500 ಜನರಿಗೆ ಸೀಮಿತ ಎನ್ನುವ ನಿಯಮಗಳು ಸೇರಿ ಒಟ್ಟು 10 ನಿಯಮಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಸರ್ಕಾರ ಇಂದು ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೈಗೊಂಡ ನಿಯಮಗಳನ್ನು ಒಳಗೊಂಡ ಮಾರ್ಗಸೂಚಿಯ ಪ್ರತಿಯನ್ನು ವಾರ್ತಾಇಲಾಖೆ ತನ್ನ ಸಾಮಾಜಿಕ ಜಾಲತಾಣ ಕೂ ನಲ್ಲಿ ಹಂಚಿಕೊಂಡಿದೆ.
ಪರೀಕ್ಷೆ, ಪತ್ತೆ, ಚಿಕಿತ್ಸೆ ಹಾಗೂ ಲಸಿಕಾಕರಣ ಮತ್ತು ಕೋವಿಡ್ -೧೯ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಸಭೆ-ಸಮಾರಂಭಗಳಿಗೆ ಭಾಗವಹಿಸುವವರು ಕೋವಿಡ್ ಸುರಕ್ಷತಾ ನಿಮಯಗಳನ್ನು ಪಾಲಿಸುವಂತೆ ಎಚ್ಚರ ವಹಿಸುವುದು ಕಾರ್ಯಕ್ರಮ ಆಯೋಜಕರ ಜವಾಬ್ದಾರಿಯಾಗಿರುತ್ತದೆ.
ಶಾಲಾ-ಕಾಲೇಜುಗಳಲ್ಲಿ ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಜನವರಿ15ರ ವರೆಗೆ ಮುಂದೂಡಬೇಕಿದೆ. ಶಾಲಾ-ಕಾಲೇಜಿಗೆ ತೆರಳುವ 18 ವರ್ಷದೊಳಗಿನ ಮಕ್ಕಳ ಪೋಷಕರು ಕಡ್ಡಾಯವಾಣಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಆರೋಗ್ಯ ಕಾರ್ಯಕರ್ತರು, ೬೫ ವಯಸ್ಸು ಮೀರಿದ ಹಿರಿಯ ನಾಗರಿಕರು ಮತ್ತು ಇತರೆ ಸಹವರ್ತಿ ರೋಗಗಳಿಂದ ಬಳಲುತ್ತಿರುವವರಿಗೆ ಸರ್ಕಾರ್ದದಿಂದ ಕಡ್ಡಾಯ ಕೋವಿಡ್ ತಪಾಸಣೆ ನಡೆಸಲಾಗುವುದು.
ಸರ್ಕಾರಿ ನೌಕರರು ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಎನ್ನುವ ಕೆಲವು ಪ್ರಮುಖ ನಿಯಮಗಳ ಜೊತೆಗೆ ಇತರೆ ಕೋವಿಡ್ ನಿಯಮಗಳನ್ನು ಮಾರ್ಗಸೂಚಿ ಹೊಂದಿದೆ.
ಇದನ್ನೂ ಓದಿ: Omykron infection: ಕರ್ನಾಟಕಕ್ಕೆ ಬಂತು ಓಮಿಕ್ರಾನ್ ಸೋಂಕು..! ಇಬ್ಬರಿಗೆ ದೃಢ, ದೇಶದಲ್ಲಿ ಮೊದಲ ಪ್ರಕರಣ ದಾಖಲು
(Karnataka Covid Guidelines released inserge of Omicron Variant cases)
Discussion about this post