ರಜಾದಿನಗಳು ಎಂದ ತಕ್ಷಣ ಸಹಜವಾಗಿ ಎಲ್ಲರ ಹುಬ್ಬು ಮೇಲುರೇತ್ತದೆ. ರಜೆಯಲ್ಲಿ ಹೀಗೆ ಮಾಡಬೆಕು ಹಾಗೆ ಮಾಡಬೇಕು ಎಂದೆಲ್ಲ ಪಟ್ಟಿಯೇ ತಯಾರಾಗುತ್ತದೆ. ಅಥವಾ ರವಿವಾರದಂದೇ ಸರ್ಕಾರಿ ರಜೆ ಬಂದರೆ ಛೇ ಅನಿಸುತ್ತದೆ. ಸದ್ಯ ವಿಷಯ ಏನಂದ್ರೆ, ಕರ್ನಾಟಕ ಸರ್ಕಾರ ಮುಂದಿನ ವರ್ಷದ ಸರ್ಕಾರಿ ರಜೆಗಳ ಅಧಿಕರತ ಪಟ್ಟಿ ಬಿಡುಗಡೆಗೊಳಿಸಿದೆ. ಆ ಪಟ್ಟಿ ಇಲ್ಲಿದೆ.
15-1-2022: ಶನಿವಾರ- ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
26-1-2022: ಬುಧವಾರ- ಗಣರಾಜ್ಯೋತ್ಸವ
1-3-202022: ಮಂಗಳವಾರ- ಮಹಾ ಶಿವರಾತ್ರಿ
2-4-2022: ಶನಿವಾರ- ಯುಗಾದಿ ಹಬ್ಬ
14-4-20222: ಗುರುವಾರ- ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
15-4-2022: ಶುಕ್ರವಾರ- ಗುಡ್ಫ್ರೈಡೇ
3-5-2022: ಮಂಗಳವಾರ- ಬಸವೇಶ್ವರ ಜಯಂತಿ/ಅಕ್ಷಯ ತೃತೀಯ, ಖುತುಬ್-ಎ-ರಂಜಾನ್
9-8-2022: ಬುಧವಾರ- ಮೊಹರಂ ಕಡೇ ದಿನ
15-8-2022: ಸೋಮವಾರ- ಸ್ವಾತಂತ್ರ್ಯ ದಿನಾಚರಣೆ
31-8-2022: ಬುಧವಾರ- ವರಸಿದ್ಧಿ ವಿನಾಯಕ ವ್ರತ
4-10-2022: ಮಂಗಳವಾರ- ಮಹಾನವಮಿ, ಆಯುಧಪೂಜೆ
5-10-2022: ಬುಧವಾರ- ವಿಜಯದಶಮಿ
24-10-2022: ಸೋಮವಾರ- ನರಕ ಚತುರ್ದಶಿ
26-10-2022: ಬುಧವಾರ- ಬಲಿಪಾಡ್ಯಮಿ, ದೀಪಾವಳಿ
1-11-2022: ಮಂಗಳವಾರ- ಕನ್ನಡ ರಾಜ್ಯೋತ್ಸವ
11-11-2022: ಶುಕ್ರವಾರ- ಕನಕದಾಸ ಜಯಂತಿ
ಕರ್ನಾಟಕ ಸರ್ಕಾರ ಪ್ರಕಟಿಸಿರುವ ರಜಾದಿನಗಳ ಈ ಪಟ್ಟಿಯಲ್ಲಿ ರವಿವಾರ ಅಥವಾ ಭಾನುವಾರಗಳಂದು ಬರುವ ಕಾರ್ಮಿಕ ದಿನಾಚರಣೆ (ಮೇ 1), ಬಕ್ರೀದ್ (ಜುಲೈ 10), ಮಹಾಲಯ ಅಮಾವಾಸ್ಯೆ (ಸೆಪ್ಟೆಂಬರ್ 25), ಗಾಂಧೀ ಜಯಂತಿ (ಅಕ್ಟೋಬರ್ 2), ಮಹರ್ಷಿ ವಾಲ್ಮೀಕಿ ಜಯಂತಿ/ ಈದ್ ಮಿಲಾದ್ (ಅಕ್ಟೋಬರ್ 9) ಮತ್ತು ಕ್ರಿಸ್ಮಸ್ (ಡಿಸೆಂಬರ್ 25) ಸೇರಿಲ್ಲ. ಮುಸಲ್ಮಾನ ಸಮುದಾಯಕ್ಕೆ ಆಯಾ ನಿಗದಿತ ದಿನಾಂಕದ ಬದಲಿಗೆ ಬೇರೆ ದಿನ ಹಬ್ಬ ಬಂದಲ್ಲಿ ಆ ದಿನ ರಜಾ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ. ಸೆಪ್ಟೆಂಬರ್ 3 ಕೈಲ್ ಮುಹೂರ್ತ ಹಾಗೂ ಡಿಸೆಂಬರ್ 8 ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸ್ಥಳೀಯ ಸಾರ್ವತ್ರಿಕ ರಜಾ ಘೋಷಣೆಯನ್ನು ಕರ್ನಾಟಕ ಸರ್ಕಾರ ಮಾಡಿದೆ. ಇವೆಲ್ಲವನ್ನೂ ಹೊರತುಪಡಿಸಿ ಪರಿಮಿತ ರಜಾ, ಅಂದರೆ ಮನವಿಪೂರ್ವಕ 22 ರಜಾದಿನಗಳಿವೆ.
ಇದನ್ನೂ ಓದಿ: Malnutrition: ಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಆರ್‌ಟಿಐ ಅಡಿ ಮಾಹಿತಿ ಬಹಿರಂಗ
Discussion about this post