ಬೆಂಗಳೂರು: ಬಾಂಗ್ಲಾದೇಶಿಯನೊಬ್ಬ ವಿಚಿತ್ರ ರೀತಿಯಲ್ಲಿ ಸ್ಟ್ರಾಬೆರಿ ಮಸಾಲಾ ತಯಾರಿಸಿದ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಅಸಂತೋಷ ವ್ಯಕ್ತಪಡಿಸಿದ್ದಾರೆ.
ಕಲ್ಪನೆಗೂ ಮೀರಿದ ವಿಚಿತ್ರ ರೀತಿಯ ತಿನಿಸುಗಳು ಹಾಗೂ ವಿಚಿತ್ರ ತಯಾರಿಕಾ ವಿಧಾನಗಳು ಆಗಾಗ ನಮ್ಮ ಗಮನಕ್ಕೆ ಬರುತ್ತಿರುತ್ತವೆ ಹಾಗೂ ಇವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.
ಇಂತಹುದೇ ಒಂದು ಪ್ರಸಂಗ ಬಾಂಗ್ಲಾದೇಶದಿಂದ ವರದಿಯಾಗಿದ್ದು ಇದರ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಬಾಂಗ್ಲಾದೇಶೀಯನೊಬ್ಬ ಪ್ಲಾಸ್ಟಿಕ್ ಜಾರ್ ಒಂದಕ್ಕೆ ಕತ್ತರಿಸಿದ ಸ್ಟ್ರಾಬೆರಿ ಹಣ್ಣಿನ ತುಂಡುಗಳನ್ನು ಹಾಕಿ ಅದಕ್ಕೆ ಮಸಾಲೆ ಹಾಗೂ ಉಪ್ಪನ್ನು ಸೇರಿಸಿ ಜಾರ್‌ನ ಮುಚ್ಚಳವನ್ನು ಮುಚ್ಚಿ ಅದನ್ನು ಚೆನ್ನಾಗಿ ಕುಲುಕಿ ಸ್ಟ್ರಾಬೆರಿ ಮಸಾಲಾ ತಯಾರಿಸಿ ತನ್ನ ಗ್ರಾಹಕನಿಗೆ ವೃತ್ತಪತ್ರಿಕೆಯ ಕಾಗದದ ಮೇಲಿಟ್ಟು ಕೊಡುತ್ತಾನೆ.
ಇದಕ್ಕೆ ನೆಟ್ಟಿಗರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಒಬ್ಬರು “ಸತ್ಯಾನಾಶ್” ಎಂದು ಪ್ರತಿಕ್ರಿಯಿಸಿದ್ದರೆ ಇನ್ನೊಬ್ಬರು ಸ್ಟ್ರಾಬೆರಿಯನ್ನು ಚೆನ್ನಾಗಿ ತೊಳೆಯದೆ ಮಾಡಿರುವುದು ನೈರ್ಮಲ್ಯತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಹಾಗೂ ಮುದ್ರಿತ ಕಾಗದದ ಮೇಲೆ ಇಟ್ಟುಕೊಡುವುದು ಅನಾರೋಗ್ಯಕರ ಎಂದು ಪ್ರತಿಕ್ರಿಯಿಸಿದ್ದಾರೆ.
View this post on Instagram
Peculiar Strawberry masaala preparation video by a Bangladeshi goes viral
ಇದನ್ನೂ ಓದಿ: ಮದುವೆ ನಡೆಯುತ್ತಿದ್ದ ಐಷಾರಾಮಿ ಹೋಟೆಲ್‌ನಲ್ಲಿ 2 ಕೋಟಿ ಮೌಲ್ಯದ ಆಭರಣ ಕಳವು
ಇದನ್ನೂ ಓದಿ: ಬೆಂಗಳೂರಿಗೂ ‘ಒಮಿಕ್ರಾನ್’ ವೈರಸ್ ಎಂಟ್ರಿ?
Discussion about this post