Political News: ಮಾಜಿ ಸಚಿವ ಬಿ.ಸಿ.ಪಾಟೀಲ್ (B.C.Patil) ಅಳಿಯ ಪ್ರತಾಪ್ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಕಾರಣವೇನೆಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಪ್ರತಾಪ್‌ಗೆ ಕುಡಿತದ ಚಟವಿದ್ದಿತ್ತು. ಅಲ್ಲದೇ, ಮದುವೆಯಾಗಿ 15 ವರ್ಷ ಕಳೆದರೂ ಪ್ರತಾಪ್ ಮತ್ತು ತಮ್ಮ ಪುತ್ರಿ ಸೌಮ್ಯಗೆ ಮಕ್ಕಳಾಗಿರಲಿಲ್ಲ. ಚಿಕಿತ್ಸೆ ಪಡೆದು ಮಕ್ಕಳು ಮಾಡಿಕೊಳ್ಳಲು ಪತಿ ಪತ್ನಿ ಇಬ್ಬರೂ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅವರಿಗೆ ಸಂತಾನವಾಗಿರಲಿಲ್ಲ. ಈ ಕಾರಣಕ್ಕೆ ಪ್ರತಾಪ್ ಕುಡಿತದ ದಾಸನಾಗಿದ್ದ. ಇದೇ ಕೊರಗಿನಲ್ಲಿ ಪ್ರತಾಪ್ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
Special Story: ಈ ದೇಶದಲ್ಲಿ ಬೆಕ್ಕುಗಳಿಗೂ ಕೊಡುತ್ತಾರೆ ಸರ್ಕಾರಿ ನೌಕರಿ
ಬಿ.ಸಿ.ಪಾಟೀಲ್ ಅವರಿಗೆ ಗಂಡು ಮಕ್ಕಳಿರಲಿಲ್ಲ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಸೌಮ್ಯಳನ್ನು ಪತ್ನಿಯ ತಮ್ಮನಾಗ ಪ್ರತಾಪ್‌ಗೆ ಮದುವೆ ಮಾಡಿಕೊಟ್ಟಿದ್ದರು. ಮನೆಮಗನಂತಿದ್ದ ಪ್ರತಾಪ್, ಪಾಟೀಲರಿಗೆ ಸೇರಿದ್ದ ಜಮೀನು ಮತ್ತು ಇತರ ರಾಜಕೀಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು.
ಆದರೆ ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಪ್ರತಾಪ್ ಜೋಳದ ಬೆಳೆ ನಾಶ ಮಾಡುವ ಗುಳಿಗೆ ನುಂಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮೊಬೈಲ್ ಸ್ವಿಚ್ ಆನ್ ಆಗಿದ್ದು, ಕಾಲ್ ರಿಸಿವ್ ಮಾಡಿ, ಪ್ರತಾಪ್ ವಿಷಯ ತಿಳಿಸಿದ್ದಾರೆ. ಅವರ ಧ್ವನಿ ನಿದ್ರೆ ಮಂಪರಿನಲ್ಲಿ ಇದ್ದ ಹಾಗೆ ಇತ್ತೆಂದು ಪಾಟೀಲರು ತಿಳಿಸಿದ್ದಾರೆ. ಅಲ್ಲಿನ ಸ್ಥಳೀಯರು ಪ್ರತಾಪ್‌ರನ್ನು ಆಸ್ಪತ್ರೆಗೆ ಸೇರಿಸಿದ್ದರೂ ಕೂಡ, ಪ್ರತಾಪ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಹನುಮಾನ್ ಚಾಲೀಸಾ ರಚಿಸಿದ್ದು ಯಾವ ಪರಿಸ್ಥಿತಿಯಲ್ಲಿ? ತುಳಸಿದಾಸರು ಜೈಲಿಗೆ ಹೋಗಲು ಕಾರಣವೇನು?
Discussion about this post