ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ವಿಧಿವಶರಾಗಿದ್ದಾರೆ. ತೇಜಸ್ವಿ ಬರಹಗಳ ಮೊದಲ ಓದುಗರಾಗಿದ್ದ ರಾಜೇಶ್ವರಿ ತತ್ವಶಾಸ್ತ್ರದಲ್ಲಿ ಎಂ.ಎ.ಪದವೀಧರರು. ತೇಜಸ್ವಿ ಅವರೊಂದಿಗೆ ವಿವಾಹವಾದ ನಂತರ ಮೊದಲು ಚಿತ್ರಕೂಟ ಆನಂತರ ನಿರುತ್ತರ ಕಾಫಿ ತೋಟದಲ್ಲಿ ನೆಲೆಸಿದ್ದು, ಅವರಿಗೆ ಮನೆಯಾವರಣದಲ್ಲಿ ಹೂವು ಬೆಳೆಸುವ, ಅದರಲ್ಲೂ ಆರ್ಕಿಡ್‌ಗಳನ್ನು ಬೆಳೆಸಿ ಉಳಿಸುವುದಕ್ಕೆ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದರು.
ರಾಜೇಶ್ವರಿಯವರ ಹವ್ಯಾಸವಾಗಿದ್ದ ಪೋಟೊಗ್ರಫಿಯಲ್ಲೂ ಅವರಿಗೆ ಆಸಕ್ತಿ ಇತ್ತು. ಹೆಚ್ಚಿನ ಬರವಣಿಗೆಗೆ ಮುಂದಾಗದಿದ್ದರೂ ತೇಜಸ್ವಿ ನಿಧನನಂತರ ಅವರ ಜೀವನಯಾನವನ್ನು ಅವರ ಬಾಳಸಂಗಾತಿಯಾಗಿ ಅತ್ಯಂತ ಸೂಕ್ಷ್ಮ ವಿವರಗಳೊಂದಿಗೆ ತಮ್ಮ ಚೊಚ್ಚಲಕೃತಿ ‘ನನ್ನ ತೇಜಸ್ವಿ’ ಮೂಲಕ ಕಟ್ಟಿಕೊಟ್ಟಿದ್ದಾರೆ.
ಆ ಕೃತಿಯಲ್ಲಿ ತೇಜಸ್ವಿಯವರಿ ಕಾಲೇಜು ವೊದ್ಯಾರ್ಥಿಯಾದಾಗಿನಿಂದಲೂ ಆನಂತರ ಕಾಫಿ ಬೆಳೆಗಾರರಾಗಿ ಔಯಾಚಿತ್ರ, ಪರಿಸರಾಸಕ್ತಿ, ಅವರ ಪ್ರವಾಸದ ವಿವರ ತೇಜಸ್ವಿ ಬದುಕಿನ ಬಹಳಷ್ಟು ವಿವರಗಳನ್ನು ತಿಳಿಸುವ ಮೂಲಕ ತೇಜಸ್ವಿ ಲೇಖಕರಾಗಿ ಬೆಳೆದು ಬಂದ ಬಗ್ಗೆ ಚಿತ್ರಣವನ್ನೊದಗಿಸುತ್ತದೆ.
ತೇಜಸ್ವಿಯವರ ಹವ್ಯಾಸ, ಆಸಕ್ತಿವಲಯ, ಅವರ ಹೋರಾಟಗಳು ಮತ್ತು ಅವರು ಅನುಭವಿಸಿದ ಕೆಲವು ಸನ್ನಿವೇಶಗಳ ವಿವರಣೆ ಕೃತಿಯಲ್ಲಿ ಸಿಗುತ್ತದೆ. ತಮ್ಮ ಸಂಸಾರದ ಬಗ್ಗೆ ಹೇಳುತ್ತಲೇ ಮಹಾಕವಿಯ ಮನದಾಳದ ಒಂದು ಇಣುಕುನೋಟವನ್ನು ನೀಡಿದ್ದಾರೆ. ಈ ಕೃತಿಯ ನಂತರ ‘ನಮ್ಮ ಮನೆಗೂ ಬಂದರೂ ಗಾಂಧೀಜಿ’ಕೃತಿ ಒಂದು ಕಾಲದ ನಮ್ಮ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಜೀವನದ ತುಣುಕುಗಳನ್ನು ಪರಿಚಯಿಸಿದ್ದರು. ಅವರ ತಾಯಿ ಕಲೆಸಿದ ಬದುಕನ್ನು ಆ ಕಾಲದ ಪರಿಸ್ಥತಿಗಳನ್ನುಯ ಓದುಗರ ಮುಂದಿಡುತ್ತಾರೆ.
ರಾಜೇಶ್ವರಿಯವರ ಹವ್ಯಾಸ ವೈವಿಧ್ಯತೆಯಲ್ಲಿ ರೋಷ,ಟೈಲರಿಂಗ್,ಕೈತೋಟ ಬೆಳೆಸುವುದರ ಜತೆಗೆ ಸ್ಟಾಂಪ್ ಸಂಗ್ರಹ, ಅಪರೂಪದ ಬೀಜಸಂಗ್ರಹವೂ ಇತ್ತು. ತಮ್ಮ ನಿಧನ ನಂತರ ತಮ್ಮ ದೇಹವನ್ನು ದಾನಮಾಡಬೇಕೆಂಬ ಬಗ್ಗೆ ತಮ್ಮ ಎರಡನೇಯ ಕೃತಿ ನಮ್ಮ ಮನೆಗೂ ಬಂದರು ಗಾಂಧೀಜಿಯಲ್ಲಿ ಅವರ ಹೇಳಿರುವ ಮಾತು ಈ ರೀತಿ ಇದೆ.
‘ಅಂಗಾಂಗದಾನ ಒಳ್ಳೆಯದೆನ್ನಿಸಿದೆ ನನಗೆ.ಈಗ ಎಲ್ಲಾ ಕಡೆ ಕೇಳಿಬರುವ ಮಾತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಿಫೆಕ್ಟ್ ಮಾಡಲು ಹೆಣಗಳೇ ಸಿಗುವುದಿಲ್ಲವಂತೆ ಎಂದು ದಿನಪತ್ರಿಕೆಯ ವಾಚಕರ ವಾಣಿಯಲ್ಲಿ ಬಂದಿತ್ತು- ಮೈಸೂರು ಸರ್ಕಾರಿ ವೈದಕೀಯ ಕಾಲೇಜಿಗೆ ಕೊಟ್ಟರೆ ಡೆತ್ ಸರ್ಟಿಫಿಕೆಟ್ ಪಡೆಯಲು ಪರದಾಡಬೇಕಾಗುತ್ತೆ ಅಂತ. ಹಾಗಾದರೆ ಎಲ್ಲಿಗೆ? ಯಾವ ವೈದ್ಯಕೀಯ ಕಾಲೇಜಿಗೆ ಕೊಟ್ಟರೆ ಒಳ್ಳೆಯದೆನ್ನುವ ಹುಟುಕಾಟದಲ್ಲಿ ಇರುವೆನು. ತಾವು ಬಲ್ಲಿರಾ? ತಿಳಿಸಿರಿ. ಈ ರೀತಿ ಹೇಳಿದ್ದ ರಾಜೇಶ್ವರಿಯವರ ಮಾತಿನಂತೆ ಅವರ ಮಕ್ಕಳು ಇಂದು ಅವರ ದೇಹವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ನೀಡಿದ್ದಾರೆ.
Purnachandra Tejaswi’s wife Rajeshwari

























Discussion about this post