Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್, ಒಂದು ಬೌಲ್ ನೆನೆಸಿದ ಅಥವಾ ಹಸಿ ಬಟಾಣಿ, 1 ಕ್ಯಾಪ್ಸಿಕಂ, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಕ್ಯೂಬ್ ಬೆಣ್ಣೆ, 1 ಸ್ಪೂನ್ ಜೀರಿಗೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, 1ಸ್ಪೂನ್ ಕಸೂರಿ ಮೇಥಿ, 2ಸ್ಪೂನ್ ಮೊಸರು, 7ರಿಂದ 8 ಬೆಳ್ಳುಳ್ಳಿ ಎಸಳು, ಅರ್ಧ ಸ್ಪೂನ್ ಖಾರದ ಪುಡಿ, 2ಸ್ಪೂನ್ ತುಪ್ಪ, 2 ಸ್ಪೂನ್ ಫ್ರೆಶ್ ಕ್ರೀಮ್, 1 ಸ್ಪೂನ್ ಕಸೂರಿ ಮೇಥಿ, ಕೊಂಚ ಕೊತ್ತೊಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ, ಚೆನ್ನಾಗಿ ಕುದಿಸಿ, ಬಳಿಕ 5 ನಿಮಿಷ ಪಾಲಕ್ ಹಾಕಿ ಕುದಿಸಿ. ಬಳಿಕ ಪಾಲಕ್ ಮತ್ತು ಬಿಸಿ ನೀರು ಸಪರೇಟ್ ಮಾಡಿ. ಪಾಲಕ್ ಸೊಪ್ಪನ್ನು ತಣ್ಣೀರಿನ ಬೌಲ್‌ಗೆ ಹಾಕಿ ತೆಗೆಯಿರಿ. ಬಳಿಕ 3ರಿಂದ 4 ಹಸಿಮೆಣಸಿನೊಂದಿಗೆ ಪಾಲಕ್ ಪೇಸ್ಟ್ ತಯಾರಿಸಿಕೊಳ್ಳಿ.
ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಬೆಣ್ಣೆ, ಜೀರಿಗೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಅರಿಶಿನ, ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಚಾಟ್ ಮಸಾಲೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಕ್ಯಾಪ್ಸಿಕಂ ಹಾಕಿ ಹುರಿಯಿರಿ. ನಂತರ ಪಾಲಕ್ ಪೇಸ್ಟ್, ಬಟಾಣಿ, 2 ಸ್ಪೂನ್ ಮೊಸರು ಮತ್ತು ನೀರು ಹಾಕಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಬೇಯಿಸಿ. ಆಗಾಗ ಬಾಡಿಸುತ್ತಿರಿ.
ಬಟಾಣಿ ಸರಿಯಾಗಿ ಬೆಂದಾದ ಬಳಿಕ, ಕ್ರೀಮ್, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು ಸೇರಿಸಿ. ಕೊನೆಗೆ ಒಗ್ಗರಣೆ ಸೌಟಿನಲ್ಲಿ ತುಪ್ಪ, ಬೆಳ್ಳುಳ್ಳಿ, ಖಾರದ ಪುಡಿ ಹಾಕಿ ಒಗ್ಗರಣೆ ಕೊಟ್ಟರೆ, ಪಾಲಕ್ ಮಟರ್ ರೆಡಿ.
Discussion about this post