ಕೊಲೊರಾಡೊ: ಮನುಷ್ಯನ ವಿಕೃತಿಗಳು ಕಾಡು ಪ್ರಾಣಿಗಳ ಜೀವಕ್ಕೆ ಕುತ್ತುಂಟು ಮಾಡುತ್ತಿದ್ದರೂ ಮಾನವ ಪಾಠ ಕಲಿತಿಲ್ಲ. ಇಂಥದ್ದೆ ಒಂದು ಘಟನೆ ಅಮೆರಿಕದ ಕೊಲೊರೊಡೊ ರಾಜ್ಯದ ರಾಷ್ಟ್ರೀಯ ಪಾರ್ಕ್‌ನಲ್ಲಿ ನಡೆದಿದೆ. ಕಡವೆಯೊಂದು (ಬುಲ್ ಎಲ್ಕ್) ಕುತ್ತಿಗೆಗೆ ಟೈರ್ ಸುತ್ತಿಕೊಂಡು ಎರಡು ವರ್ಷದಿಂದ ನರಳುತ್ತಿತ್ತು. ಈಗ ಅದಕ್ಕೆ ಟೈರ್‌ನಿಂದ ಮುಕ್ತಿ ಸಿಕ್ಕಿದೆ.
ಸಾರಂಗದ ಕುತ್ತಿಗೆಗೆ ಟೈರ್ ಸುತ್ತಿಕೊಂಡಿರುವುದು ವನ್ಯಜೀವಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಯಿತು. ಆದರೆ ಅರಣ್ಯದಲ್ಲಿ ಅದನ್ನು ಹುಡುಕುವುದಕ್ಕೆ ಕಷ್ಟವಾಯಿತು. ಎರಡು ವರ್ಷವಾದರೂ ಕಡವೆ ಪತ್ತೆಯಾಗಲಿಲ್ಲ. ಆದರೆ, ಹತಾಶರಾಗದ ಸ್ಕಾಟ್ ಮುರ್ಡೋಕ್ ತಂಡ, ಕಡೆಗೂ ಕಡವೆಯನ್ನು ಹುಡುಕಿತು. ಅದರ ಕೊರಳಿಗೆ ಸುತ್ತಿಕೊಂಡಿದ್ದ ಟೈರ್‌ನಿಂದ ಮುಕ್ತಿಕೊಡಿಸಿತು. ಈ ಕಾಯರ್ಯಾಚರಣೆ ವಿಡಿಯೋ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದ ಟ್ವೀಟ್ ಮಾಡಿದೆ. ಕಡವೆಯ ಕತ್ತಿನಿಂದ ಟೈರ್ ತೆಗೆಯಲು ಅದರ ಐದು ಕೊಂಬುಗಳನ್ನು ಕತ್ತರಿಸಬೇಕಾದುದು ವಿಷಾದದ ಸಂಗತಿ ಎಂದು ಮುರ್ಡೋಕ್ ಹೇಳಿದ್ದಾರೆ. ಸಾರಂಗವನ್ನು ಹುಡುಕಲು ಸಹಾಯ ಮಾಡಿದ ಸ್ಥಳೀಯರಿಗೂ ಧನ್ಯವಾದ ಹೇಳಿದ್ದಾರೆ.
ಈ ಟ್ವೀಟ್ ಅನ್ನು ಅನೇಕರು ಲೈಕ್ ಮಾಡಿದ್ದು, ಅರಣ್ಯ ಇಲಾಖೆಯ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆದರೆ, ಅದರ ಕೊಂಬನ್ನು ಕತ್ತರಿಸುವ ಬದಲು, ಟೈರನ್ನೆ ಕತ್ತಿರಿಸಬಹುದಿತ್ತಲ್ಲ? ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಇದಕ್ಕೆ ವಿವರಣೆ ನೀಡಿರುವ ಅಭಯಾರಣ್ಯದ ತಂಡ, “ಮೊದಲು ನಾವು ಟೈರ್ ಕತ್ತರಿಸಲು ಪ್ರಯತ್ನಿಸಿದೆವು. ಆದರೆ, ಅದರ ಉಕ್ಕಿನ ತಂತಿಗಳು ಗಟ್ಟಿಯಾಗಿತ್ತು ಮತ್ತು ಟೈರ್ ಕತ್ತಿನ ಸುತ್ತ ನಾಜೂಕಾಗಿ ಸಿಲುಕಿಕೊಂಡಿತ್ತು. ಒಂಚೂರು ಹೆಚ್ಚುಕಡಿಮೆಯಾದರೂ ಕಡವೆಗೆ ಅಪಾಯ ಆಗುತ್ತಿತ್ತು. ಹೀಗಾಗಿ ನಾವು ಕೊಂಬನ್ನು ಕತ್ತಿರಿಸುವ ಅನಿವಾರ್ಯ ನಿರ್ಧಾರಕ್ಕೆ ಬಂದೆವು’ ಎಂದು ಹೇಳಿದೆ.
The saga of the bull elk with a tire around its neck is over. Thanks to the residents just south of Pine Junction on CR 126 for reporting its location, wildlife officers were able to free it of that tire Saturday.
Story: https://t.co/WHfkfPuAck
📸’s courtesy of Pat Hemstreet pic.twitter.com/OcnceuZrpk
— CPW NE Region (@CPW_NE) October 11, 2021
Removed The Tyre Around Bull Elk Neck
ಇದನ್ನು ಓದಿ: Viral: ನನಗೆ ಅಫೇರ್ ಇತ್ತು, ಅಬಾರ್ಶನ್ ಮಾಡಿಸಿದ್ದೆ ಎಂದೆಲ್ಲಾ ದೂರಿದ್ದರು: ಸಮಂತಾ ಭಾವುಕ ಪೋಸ್ಟ್
ಇದನ್ನು ಓದಿ: ಕಡವೆ ಕೊಂದ ಕಳ್ಳರು ವಾಹನ ಬಿಟ್ಟು ಪರಾರಿ
Discussion about this post