Spiritual: ಒಂದು ಮನೆಯಲ್ಲಿ ಮುಖ್ಯವಾಗಿ ಇರಬೇಕಾಗಿದ್ದು ಅಂದ್ರೆ ಅಡುಗೆ ಮನೆ. ಯಾಕೆ ಅಡುಗೆ ಮನೆಗೆ ಅಷ್ಟು ಪ್ರಾಶಸ್ತ್ಯವೆಂದರೆ, ನೀವು ತಿನ್ನುವ ಆಹಾರ ಅಲ್ಲೇ ತಯಾರಾಗುತ್ತದೆ. ಹಾಗಾಗಿಯೇ ಅಮ್ಮ ಪ್ರತಿದಿನ ಎದ್ದು, ಮನೆ ಎಲ್ಲ ಗುಡಿಸಿ, ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ, ಬಳಿಕ ಅಡುಗೆ ಮಾಡಲು ಪ್ರಾರಂಭಿಸುತ್ತಾರೆ. ಯಾಕಂದ್ರೆ ಅಡುಗೆ ಮನೆ ಎಷ್ಟು ಸ್ವಚ್ಛವಾಗಿ ಇರುತ್ತದೆಯೋ, ಅಷ್ಟು ಮನೆಯಲ್ಲಿ ನೆಮ್ಮದಿ, ಉತ್ತಮ ಆರ್ಥಿಕ ಪರಿಸ್ಥಿತಿ ಇರುತ್ತದೆ. ಜೊತೆಗೆ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ..
ಅಕ್ಕಿ: ಅಕ್ಕಿ (rice) ಮುಖ್ಯವಾಗಿ ಬೇಕಾಗಿರುವ ವಸ್ತು. ಅಕ್ಕಿ ಬರೀ ಅನ್ನ ಮಾಡುವುದಕ್ಕಷ್ಟೇ ಅಲ್ಲ. ದೇವರ ಪೂಜೆಯಲ್ಲಿ ಅಕ್ಷತೆ ತಯಾರಿಸಲು ಅಕ್ಕಿ ಬೇಕಾಗುತ್ತದೆ. ಇನ್ನು ಅಕ್ಕಿ ಡಬ್ಬವನ್ನು ಕಂಡ ಕಂಡಲ್ಲಿ ಇಡಬಾರದು. ಹೀಗೆ ಮಾಡಿದರೆ, ಮನೆಯೊಡತಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಅಲ್ಲದೇ, ಅಕ್ಕಿ ಡಬ್ಬದಲ್ಲಿ ಅಕ್ಕಿ ಖಾಲಿಯಾಗಲು ಬಿಡಬಾರದು. ಇದು ಮನೆಗೆ ದರಿದ್ರ ಬರುವ ಸೂಚನೆಯಾಗಿದೆ. ಅಕ್ಕಿ ಖಾಲಿಯಾಗುವ ಮುನ್ನವೇ, ಖರೀದಿಸಿ ತಂದು ಡಬ್ಬವನ್ನು ತುಂಬಿಸಬೇಕು.
ಉಪ್ಪು: ಉಪ್ಪು (salt) ಇಲ್ಲದ ಅಡುಗೆ ಯಾರಿಗೇ ತಾನೇ ಇಷ್ಟವಾಗುತ್ತದೆ. ಆದರೆ ಉಪ್ಪು ಬರೀ ಅಡುಗೆ ಮಾಡಲಷ್ಟೇ ಅಲ್ಲ, ಮನೆಯ್ಲಲಿ ನಕಾರಾತ್ಮಕ ಶಕ್ತಿ ಇದೆಯಾ ಇಲ್ಲವಾ ಅಂತಾ ತಿಳಿಯಲು ಸಹಾಯಕವಾಗಿದೆ. ನೀವು ಸ್ನಾನ ಮಾಡುವ ನೀರಿಗೆ, ಮನೆ ಒರೆಸುವಾಗ ನೀರಿಗೆ ಕಲ್ಲುಪ್ಪು ಹಾಕಿದರೆ, ಅದರಿಂದ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಎಂದಿಗೂ ಉಪ್ಪು ಖಾಲಿಯಾಗಲು ಬಿಡಬೇಡಿ.
ಅರಿಶಿನ: ಅರಿಶಿನ (turmeric) ಪೂಜೆಯಲ್ಲಿ, ಮುತ್ತೈದೆಯರ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂದು ಎಲ್ಲರಿಗೂ ಗೊತ್ತು. ಅದೇ ರೀತಿ ಅಡುಗೆ ಮಾಡುವಾಗ ಅರಿಶನ ಬಳಸುವುದು ತುಂಬಾ ಮುಖ್ಯ. ಅರಿಶಿನ ಸೌಭಾಗ್ಯದ ಸಂಕೇತವಾಗಿದ್ದು, ಇದು ಖಾಲಿಯಾಗದಂತೆ ನೋಡಿಕೊಳ್ಳಬೇಕು.
Discussion about this post