Movie News: ಅಸಭ್ಯವಾಗಿ ವರ್ತಿಸುವುದರಲ್ಲಿ ಸ್ತ್ರೀಯರು ಪುರುಷರನ್ನು ಮೀರಿಸುತ್ತಾರೆ ಎಂದು ನಟಿ ಸಂಜೀದಾ ಶೇಖ್ ಹೇಳಿಕೊಂಡಿದ್ದಾರೆ. ಅವರು ತಮ್ಮ ಜೀವನದಲ್ಲಾದ ಕೆಟ್ಟ ಘಟನೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಬಾಲಿವುಡ್ ಪ್ರಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೊದಲ ಬಾರಿ ಹೀರಾಮಂಡಿ ಹೆಸರಿನ ವೆಬ್ ಸಿರೀಸ್ ನಿರ್ಮಿಸಿದ್ದು, ಓಟಿಟಿಯಲ್ಲಿ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಇದರ ಸಿಕ್ವೇನ್ಸ್ ಕೂಡ ಮಾಡಲಿದ್ದೇನೆ ಅಂತಾ ಸಂಜಯ್ ಮೊನ್ನೆ ಮೊನ್ನೆ ತಾನೇ ಘೋಷಿಸಿದ್ದಾರೆ.
ಹೀರಾಮಂಡಿ ವೆಬ್ ಸಿರೀಸ್ನಲ್ಲಿ ವಹೀದಾ ಎಂಬ ವೇಶ್ಯೆಯ ಪಾತ್ರ ನಿರ್ವಹಿಸಿದ್ದಾರೆ. ಕಿರುತೆರೆಯಲ್ಲಿ ನಟಿಸುತ್ತಿದ್ದ ಸಂಜೀದಾಗೆ, ಹಿರಿತೆರೆಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದೀಗ ವಹೀದಾ ಪಾತ್ರದಿಂದಲೇ ಪ್ರಸಿದ್ಧಿ ಪಡೆದಿರುವ ಸಂಜೀದಾ, ಮಾಧ್ಯಮವೊಂದರಲ್ಲಿ ಸಂದರ್ಶನ ಕೊಡುವಾಗ, ತಮಗಾದ ಕೆಟ್ಟ ಅನುಭವ ವಿವರಿಸಿದ್ದಾರೆ.
ಹೆಣ್ಣು ಮಕ್ಕಳು ಕೂಡ ಇನ್ನೋರ್ವ ಹೆಣ್ಣಿನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ, ನನಗೆ ಇದರ ಅನುಭವವಾಗಿದೆ. ನಾನು ನೈಟ್ ಕ್ಲಬ್ನಲ್ಲಿ ಇದ್ದೆ. ಆಗ ಓರ್ವ ಯುವತಿ ಬಂದು ನನ್ನ ಸ್ತನ ಮುಟ್ಟಿ ಹೋದಳು. ನನಗೆ ಶಾಕ್ ಆಯ್ತು. ಇಲ್ಲೇನು ನಡೆಯುತ್ತಿದೆ ಎಂದು ಗೊತ್ತಾಗದಂತೆ ಇದ್ದೆ ನಾನು. ನಾವು ಪುರುಷರು ಅಸಭ್ಯ ವರ್ತನೆ ಮಾಡುತ್ತಾರೆ ಎಂದು ಆರೋಪಿಸುತ್ತೇವೆ. ಆದರೆ ಹೆಣ್ಣು ಮಕ್ಕಳೇನು ಕಡಿಮೆ ಇಲ್ಲ. ಯಾರೂ ತಪ್ಪು ಮಾಡಿದರೂ ಅದನ್ನು ನಾವು ಖಂಡಿಸಬೇಕು ಅಂದಿದ್ದಾರೆ ಸಂಜೀದಾ.
Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ
Prajwal Pen drive case: ಪ್ರಜ್ವಲ್ ರೇವಣ್ಣ ಇನ್ನು 6 ದಿನ ಎಸ್ಐಟಿ ಕಸ್ಟಡಿಯಲ್ಲಿರುವಂತೆ ಆದೇಶ
ಭವಾನಿ ರೇವಣ್ಣಗೆ ಬಿಗ್ ಶಾಕ್: ಅರೆಸ್ಟ್ ಆಗುವ ಭಯದಲ್ಲಿ ಎಸ್ಕೇಪ್ ಆದ್ರಾ ಮಾಜಿ ಸಚಿವರ ಪತ್ನಿ?
Discussion about this post