ಲಂಡನ್: ವಿಶ್ವವ್ಯಾಪಿ ಬದುಕಿನ ವೆಚ್ಚ ಏರಿಕೆಯ ಸೂಚ್ಯಂಕದಲ್ಲಿ ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್ ಮೊದಲ ಸ್ಥಾನದಲ್ಲಿದೆ. ಸರಬರಾಜು ಸರಪಳಿಗೆ ಆದ ಅಡಚಣೆ ಮತ್ತು ಗ್ರಾಹಕ ಬೇಡಿಕೆ ಹೆಚ್ಚಳದ ಹಣದುಬ್ಬರದ ಏರಿಕೆ ಕಾರಣ ಜನರ ಜೀವನ ಮಟ್ಟದಲ್ಲಿ ಆಗುವ ವೆಚ್ಚ ಹೆಚ್ಚಳದ ಆಧಾರದ ಮೇಲೆ ಜಾಗತಿಕವಾಗಿ ನಗರಗಳಲ್ಲಿ ಪಟ್ಟಿಯನ್ನು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಬಿಡುಗಡೆ ಮಾಡಿದೆ. worlds most expensive cities in 2021 list in Kannada
ಹಣದುಬ್ಬರದ ಏರಿಕೆಯ ಕಾರಣ ದಿನಸಿ, ತರಕಾರಿ, ಸಾರಿಗೆ ವೆಚ್ಚದಲ್ಲಿ ಏರಿಕೆ ಆಗಿರುವುದರಿಂದ ಇಸ್ರೇಲ್ ಈಗ ಅಗ್ರಸ್ಥಾನದಲ್ಲಿ ಇದೆ. ಸಿಂಗಪುರ್ ಮತ್ತು ಪ್ಯಾರಿಸ್ ಎರಡನೇ ಸ್ಥಾನವನ್ನು ಹಂಚಿಕೊಂಡಿವೆ.
ವಿಶ್ವದಾದ್ಯಂತ 173 ನಗರಗಳು (ಇಐಯು) ಸಮೀಕ್ಷೆ ನಡೆಸಿದ್ದು, ಪ್ರತಿ ದಿನ ಬಿಕರಿಯಾಗುವ 200ಕ್ಕೂಹೆಚ್ಚು ವಸ್ತುಗಳು ಮತ್ತು ಸೇವಾ ದರಗಳನ್ನು ಅಮೆರಿಕದ ಡಾಲರ್‌ನಲ್ಲಿ ಲೆಕ್ಕಾಚಾರ ಮಾಡಿ ಈ ಅಧ್ಯಯನ ನಡೆಸಿದೆ. ಕಳೆದ ವರ್ಷ 40 ನಗರಗಳಲ್ಲಿ ಈ ಸಮೀಕ್ಷೆ ನಡೆಸಿತ್ತು.
ಇಂಧನ ತೈಲ ಏರಿಕೆಯ ನೇರ ಪರಿಣಾಮ ಮತ್ತು ಕರೊನಾ ಸೋಂಕಿನ ತಡೆಗೆ ಕೈಗೊಂಡ ನಿರ್ಬಂಧದಿಂದಾಗಿ ಸರಕು ಪೂರೈಕೆ ಜಾಲಕ್ಕೆ ಆದ ಅಡಚಣೆಯಿಂದ ಬೆಲೆ ಏರಿಕೆ ಆಗಿದೆ. ಇದು ವಿಶ್ವದಾದ್ಯಂತ ಬದುಕುವ ವೆಚ್ಚವನ್ನು ಹೆಚ್ಚಿಸಿದೆ ಎಂದು ಇಐಯು ಪ್ರತಿನಿಧಿ ಉಪಾಸನಾ ದತ್ತ ಹೇಳಿದ್ದಾರೆ.
ಪಟ್ಟಿಯಲ್ಲಿ ಇರುವ ಇನ್ನಿತರ ನಗರಗಳು:
ಜ್ಯೂರಿಚ್, ಹಾಂಗ್‌ಕಾಂಗ್. ನ್ಯೂರ್ಯಾಕ್ (6), ಜಿನೀವಾ (7), ಕೋಪನ್‌ಹೆಗನ್ (8), ಲಾಸ್ ಏಂಜಲೀಸ್ (9) ಒಸಾಕಾ (10), ಒಸ್ಲೊ (11), ಸೋಲ್ (12), ಟೋಕಿಯೊ (13), ವಿಯೆನ್ನಾ, ಸಿಡ್ನಿ(14), ಮೆಲ್ಬರ್ನ್ (16), ಹೆಲ್ಸಿಂಕಿ ಮತ್ತು ಲಂಡನ್ (17), ಡಬ್ಲಿನ್, ಫ್ರಾಂಕ್‌ಫರ್ಟ್ ಮತ್ತು ಶಾಂಘೈ (19) ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಇದನ್ನೂ ಓದಿ: ಬ್ರಿಟನ್‌ನಲ್ಲಿ ವಾಸ್ತವ್ಯವಿಲ್ಲ ಎಂದ ಅಂಬಾನಿ ಕುಟುಂಬ: 300 ಎಕರೆ ಆಸ್ತಿ ಖರೀದಿಸಿದ್ದೇಕೆ?
Discussion about this post