ಗೌಹಾಟಿ: ಅಸ್ಸಾಂ ನಲ್ಲಿ ಉಗ್ರರ ಅಟ್ಟಹಾಸ ಮೇರೆ ಮೀರಿದ್ದು, ಕಲ್ಲಿದ್ದಲು ಭರ್ತಿಯಾಗಿದ್ದ ಬರೋಬ್ಬರಿ ಐದು ಟ್ರಕ್ ಗಳನ್ನು ನಾಶ ಮಾಡಿದ್ದಾರೆ. ದಿಮಾಸ್ ನ್ಯಾಷನಲ್ ಲಿಬರೇಷನ್ ಆರ್ಮಿಗೆ ಸೇರಿದ ಶಂಕಿತ ಉಗ್ರರು ಈ ಕೃತ್ಯ ಎಸಗಿದ್ದಾರೆ ಆದರೆ ಈ ಕೃತ್ಯದ ಹಿಂದಿನ ಕಾರಣವಿನ್ನು ಹೊರಗೆ ಬಂದಿಲ್ಲ.
ಹಾಘ್ಲಾಂಗ್ ನಿಂದ ೧೨೦ ಕಿಮೀ. ದೂರದ ರೇಂಜರ್ ಬಿಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಲಾರಿ ಚಾಲಕ ಮೃತನಾಗಿದ್ದಾನೆ. ಮೃತ ಲಾರಿ ಚಾಲಕನನ್ನು ಗೌರ್ ಮಜುಂದಾರ್ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೇಲೆಯಲ್ಲಿ ಹೆದ್ದಾರಿಗೆ ಹೆಚ್ಚು ಭದ್ರತೆ ಒದಗಿಸಿದ್ದು, ಸಂಚಾರಿ ನಿಯಮವನ್ನು ಬಿಗಿಗೊಳಿಸಲಾಗಿದೆ.

























Discussion about this post