ಬೆಂಗಳೂರು: ಆಟೋದಲ್ಲಿ ಎರಗಿದ 5 ಜನ ದುಷ್ಕರ್ಮಿಗಳು ಬೈಕ್ ಸವಾರನ ಬೆನ್ನಟ್ಟಿ ಬರ್ಬರ ಹತ್ಯೆ ನಡೆಸಿದ ಘಟನೆ ರಾಜದಾನಿಯಲ್ಲಿ ಹಾಡು ಹಗಲು ನಡೆದಿದೆ.
ರಾಜದಾನಿಯ ರಾಮಮೂರ್ತಿನಗರದ ಬೋವಿ ಕಾಲೋನಿಯ ನಿವಾಸಿಯಾಗಿದ್ದ ಕುಳ್ಳ ವೆಂಕಟೇಶ್ ಕೊಲೆಯಾದ ವ್ಯಕ್ತಿ. ಮಾರ್ಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಅಟೋದಿಂದ ಬಂದು ಅಟ್ಯಾಕ್ ಮಾಡಿದಾಗ ಅನಾಮತ್ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಲಾಂಗ್, ಮಚ್ಚು ಮೊದಲಾದ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಕೊಲೆಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ.

























Discussion about this post