ಬೆಂಗಳೂರು: ಈಗಾಗಲೇ ಎರಡು ಬಾರಿ ಶಂಕರ್ ಅವರನ್ನು ವಿಚಾರಣೆಗೆ ಕರೆದಿದ್ದು, ಮತ್ತೆ ಹಲ್ಲೆಗೆರೆ ಶಂಕರ್ ಹಾಗೂ ಅಳಿಯ ಶ್ರೀನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ
ಕುಟುಂಬಸ್ಥರ ಸಾವಿನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಶಂಕರ್ ಹಾಗೂ ಕಿರಿಯ ಮಗಳು ಸಿಂಧೂ ರಾಣಿ ಪತಿ ಶ್ರೀನಾಥ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ:
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿರುವ ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ಮನೆಯಲ್ಲಿ ಶಂಕರ್ ಅವರ ಎರಡನೇ ಮಗಳು ಸಿಂಧೂರಾಣಿ ಅವರ 9 ತಿಂಗಳ ಮಗುವನ್ನು ಕೊಲೆಗೈದು, ನಂತರ ಪತ್ನಿಭಾರತಿ (50 ವರ್ಷ), ಮಗಳು ಸಿಂಚನ(33 ವರ್ಷ), 2 ನೇ ಮಗಳು ಸಿಂಧುರಾಣಿ (30 ವರ್ಷ), ಮಗ ಮಧುಸಾಗರ್ (27 ವರ್ಷ) ಮನೆಯಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು.
ಆತ್ಮಹತ್ಯೆಯ ಬೆನ್ನಲ್ಲೇ ಸಾವಿಗೆ ಮನೆ ಮಾಲೀಕ ಶಂಕರ್ ಕಾರಣ ಅನ್ನೋದು ಬಯಲಿಗೆ ಬಂದಿತ್ತು. ಸ್ವತಃ ಮಕ್ಕಳಾದ ಸಿಂಚನ, ಸಿಂಧೂರಾಣಿ ಹಾಗೂ ಮಧುಸಾಗರ್ ಪ್ರತ್ಯೇಕವಾಗಿ ಡೆತ್‌ನೋಟ್ ಬರೆದಿಟ್ಟಿದ್ದರು. ಅದ್ರಲ್ಲೂ ಮಧುಸಾಗರ್ ತನ್ನ ತಂದೆಗೆ ಐವರು ಮಹಿಳೆಯರ ಜೊತೆಗೆ ಅನೈತಿಕ ಸಂಬಂಧವಿದೆ ಅಂತಾ ಗಂಭೀರ ಆರೋಪವನ್ನೂ ಮಾಡಿದ್ದ.

























Discussion about this post