ನವದೆಹಲಿ: ಚಳಿಗಾಲದಲ್ಲಿ ಮೈದುಡಿಕೊಳ್ಳುತ್ತದೆ. ಏನೋ ಒಂದು ತರಹದ ಆಲಸ್ಯ, ಸೂರ್ಯನಿಗೆ ಮೈಒಡ್ಡಿಕೊಳ್ಳುವ ಹಂಬಲ. ಆದರೆ, ಇದರಿಂದ ಮೈ ಇನ್ನಷ್ಟು ಒಡೆಯುತ್ತದೆ. ಚಳಿಗಾಲದಲ್ಲಿ ಬೆಚ್ಚಗಿನ ಉಡುಪನ್ನು ಧರಸಿ ಚಟುವಟಿಕೆಯಿಂದ ಇರಬೇಕು. ಆಹಾರ ಕ್ರಮದಲ್ಲೂ ಶೀತಕ್ಕೆ ಕಾರಣವಾಗುದನ್ನು ವ್ಯರ್ಜಿಸಬೇಕು. ಚಳಿಗಾಲಕ್ಕೆ ಹೊಂದಿಕೆ ಆಗುವಂತಹ, ಆರೋಗ್ಯ ಕಾಪಾಡುವಂತಹ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಈ ಆಹಾರಗಳು ನೀಡುವಂತಿರಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ. ಬೇಸಿಗೆಯಲ್ಲಿ ಲಘು ಆಹಾರ ಮತ್ತು ದೇಹವನ್ನು ತಂಪಾಗಿಡುವ ಆಹಾರ ತೆಗೆದುಕೊಳ್ಳುವಂತೆ ಚಳಿಗಾಲದಲ್ಲಿ ಔಷಧೀಯ ಗುಣವಿರುವ ಗಿಡಬಳ್ಳಿಗಳ ಕಷಾಯ, ಮಸಾಲೆ ಪದಾರ್ಥಗಳು ತುಸು ಹೆಚ್ಚಿರುವ ಆಹಾರವನ್ನು ಅವರವರ ದೇಹಾರೋಗ್ಯಕ್ಕೆ ಅನುಗುಣವಾಗಿ ತೆಗೆಕೊಳ್ಳಬೇಕು. ಬೆಳ್ಳುಳ್ಳಿ ಅವಶ್ಯಕವಾಗಿ ಆಹಾರದ ಭಾಗವಾಗಿರಬೇಕು. ಕೆಲವರು ಬೆಳ್ಳುಳ್ಳಿ ವಾಸನೆ ಕಂಡರೆ ಆಗದು ಎಂದು ಮೂಗು ಮುರುಯುತ್ತಾರೆ. ಆದರೆ, ಆರೋಗ್ಯದ ದೃಷ್ಟಿಯಿಂದ ಬೆಳ್ಳುಳ್ಳಿ ಉತ್ತಮ. ಕೀಲು, ಸಂಧು ನೋವು ವಿಶೇಷವಾಗಿ ವಯಸ್ಸಾದವರಲ್ಲಿ ಕಾಣಿಸುವ ಮಂಡಿ ನೋವು, ಹೃದ್ರೋಗವನ್ನು ಇದು ಶಮನ ಮಾಡುತ್ತದೆ. ಹಾಗೆಯೇ ಬಿಸಿ (ಹಾಟ್) ಚಾಕೋಲೆಟ್ ಸೇವನೆ ಕೂಡ ದೇಹವನ್ನು ಬೆಚ್ಚಗಿರಿಸಲು ಉತ್ತಮ.
ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ಸ್ ಹೆಚ್ಚಿರುತ್ತದೆ. ಇದು ದೇಹದಲ್ಲಿ ಉರಿಯನ್ನು ಕಡಿಮೆ ಮಾಡುತ್ತದೆ ಮತ್ತು ಚಳಿಗಾಲದಲ್ಲಿ ಸಾಮಾನ್ಯವಾಗಿ ತಗುಲುವ ಸೋಂಕನ್ನು ತಡೆಯುತ್ತದೆ. ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಹಿಮ್ಮೆಟ್ಟಿಸುತ್ತದೆ.
ನೂರು ಗ್ರಾಂ ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಮೆಗ್ನಿಶಿಯಂ, ಮ್ಯಾಂಗನೀಸ್, ರಂಜಕ, ಪೋಟಾಶಿಯಂ, ಸೋಡಿಯಂ ಮತ್ತು ಸತುವಿನ ಅಂಶ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. 150 ಕ್ಯಾಲರಿ, 6.36 ಗ್ರಾಂ ಪ್ರೋಟೀನ್ ಬೆಳ್ಳುಳ್ಳಿ ಸೇವನೆಯಿಂದ ದೊರೆಯುತ್ತದೆ.
ಬೆಳ್ಳುಳ್ಳಿ ಸೇವನೆಯಿಂದಾಗುವ ಐದು ಲಾಭಗಳು:
* ಶೀತ ಮತ್ತು ಕೆಮ್ಮಿನಿಂದ ಮುಕ್ತಿ
* ಸ್ಥೂಲಕಾಯವಿದ್ದರಿಗೆ ತೂಕ ಇಳಿಸಲು ಅನುಕೂಲ
* ಉಸಿರಾಟದ ಸಮಸ್ಯೆ ನೀಗಿಸುತ್ತದೆ.
* ಚರ್ಮ ಮತ್ತು ಕೂದುಲಿನ ಆರೋಗ್ಯ ವೃದ್ಧಿ
* ಹೃದ್ರೋಗ ಬಾರದಂತೆ ಕಾಪಾಡುತ್ತದೆ.
Include Garlic In Winter Diet
ಇದನ್ನು ಓದಿ: ಊಟವಾದ ನಂತರ ನಡೆದಾಡುವುದರಿಂದ ಪಚನ ಶಕ್ತಿ ವೃದ್ಧಿ
ಇದನ್ನು ಓದಿ: Health: ಮಾನಸಿಕ ಆರೋಗ್ಯ ಹಾಗೂ ದೇಹಸೌಂದರ್ಯಗಳ ಮಧ್ಯೆ ನಾನು ಮಾನಸಿಕ ಆರೋಗ್ಯವನ್ನು ಆಯ್ದುಕೊಂಡಿದ್ದೇನೆ: ಹಿನಾ ಖಾನ್
Discussion about this post