ಮುಂಬೈ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಗಳ ಮೇಲೂ ಗಾಯಗಳನ್ನು ಮಾಡಿರುವ ಅಮಾನುಷ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಮಹಿಳೆಯ ಗುಪ್ತಾಂಗಗಳಿಗೆ ರಾಡ್ ನಿಂದ ಚಿತ್ರ ಹಿಂಸೆ ನೀಡಿದ್ದಾರೆ.
ಸರ್ಬ್ ಅರ್ಬನ್ ಸಾಕಿನಾಕದಲ್ಲಿ ಟೆಂಪೊ ವಾಹನದ ಹಿಂದುಗಡೆಯ ಜಾಗದಲ್ಲಿ ಮಹಿಳೆಯನ್ನು ಇರಿಸಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ ರಾಡ್ ನಿಂದ ಆಕೆಯ ಗುಪ್ತಾಂಗದೊಂದಿಗೆ ಕ್ರೌರ್ಯ ನಡೆಸಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಮೋಹನ್ ಚೌಹಾಣ್ (೪೫) ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೆಲ ಗಂಟೆಗಳ ಹಿಂದೆ ಕೈರಾಣಿ ರಸ್ತೆ ಬಳಿ ಮಹಿಳೆಗೆ ಹಲ್ಲೆ ಮಾಡುತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಕಂಡಿದ್ದು, ಮಹಿಳೆಯ ರಕ್ತಸಿಕ್ತ ದೇಹ. ಕೂಡಲೆ ಅವರನ್ನು ಸಿವಿಕ್-ರನ್ ರಾಜವಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಸದರಿ ಕ್ರೌರ್ಯ ಮತ್ತು ಅತ್ಯಾಚಾರ ದೃಢಪಟ್ಟಿದ್ದು, ವಶಪಡಿಸಿಕೊಂಡ ಟೆಂಪೋದಲ್ಲೂ ರಕ್ತದ ಕಲೆಗಳು ಸಹ ಪತ್ತೆಯಾಗಿದೆ. ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
ReplyForward
























Discussion about this post