ಚಂಡೀಘಡ: ನಮಸ್ತೇ ಲಂಡನ್ ಸೇರಿದಂತೆ ಹಲವು ಬಾಲಿವುಡ್ ಸಿನೆಮಾದಲ್ಲಿ ನಟಿಸಿದ್ದ ನಟಿ ಅಲಂಕೃತಾ ಮನೆಗೆ ದರೋಡೆಕೋರರು ನುಗ್ಗಿ ಲೂಟಿ ಮಾಡಿದ ಘಟನೆ ನಡೆದಿದೆ.ಅಲಂಕೃ ಸಹಾಯ್ ಅವರು ಮನೆಯಲ್ಲಿ ಇದ್ದ ವೇಳೇಯೇ ದುಷ್ಕರ್ಮಿಗಳು ನಟಿಯನ್ನು ಹೊಡೆದು, ಹಣ, ಒಡವೆ ದೋಚಿದ್ದಾರೆ.
ಬಾಲಿವುಡ್ ನಟಿ ಚಂಡೀಘಡದ ಹೊಸ ಮನೆಯಲ್ಲಿ ಒಬ್ಬರೇ ಇದ್ದಾಗ ಮೂರು ಜನ ದುಷ್ಕರ್ಮಿಗಳು ಈ ಕೆಲಸ ಮಾಡಿದ್ದಾರೆ. ಮನೆಗೆ ದರೋಡೆ ಕೋರರು ಬಂದಾಗ ಕೋಣೆಗೆ ಹೋಗಿ ಬಚ್ಚಿಟ್ಟುಕೊಂಡ ನಟಿಯ ಬೆಂಬತ್ತಿದ್ದಾರೆ. ಮತ್ತೆ ಬಚಾವ್ ಆಗಲು ಬಾತ್ ರೂ ಸೇರಿದ್ದರೂ ಬಿಟ್ಟಿಲ್ಲ. ಆಕೆಯನ್ನು ಥಳಿಸಿ, ಪ್ರಾಣ-ಮಾನ ಬೆದರಿಕೆ ಹಾಕಿ ಎಟಿಎಂ ಕಾರ್ಡ್, ಪಿನ್ ನಂಬರ್ ಪಡೆದಿದ್ದಾರೆ. ಮನೆಯಲ್ಲಿದ್ದ ಹಣ, ಚಿನ್ನ ದೋಚಿ ಪರಾರಿಯಾಗಿದ್ದಾರೆ.
ಮನೆಗೆಲಸದ ಮಹಿಳೆ ಬರಲೆಂದು ಬಾಗಿಲು ತೆಗೆದ ವೇಳೆ ಈ ದುರ್ಘಟನೆ ನಡೆದಿದೆ. ಆಕೆ ಪಾಲಕರೊಂದಿಗೆ ವಾಸವಿದ್ದರೂ, ಪಾಲಕರು ಪ್ರವಾಸಕ್ಕೆಂದು ತೆರಳಿದ್ದರು. ಒಂಟಿಯಾಗಿದ್ದ ನಟಿ ಮೇಲೆ ಈ ಧಾಳಿ ನಡೆಸಿ ಪರಾರಿಯಾಗಿದ್ದಾರೆ. ನಟಿ ಈ ಕುರಿತು ಸೆಕ್ಟರ್ ೨೬ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.
ಮೂವರು ಆರೋಪಿಗಳಲ್ಲಿ ಓರ್ವ ಡೆಲಿವರಿ ಬಾಯ್ ಎಂಬುದನ್ನು ತನಿಖಾ ವೇಳೆ ಪೊಲೀಸರು ಗುರುತಿಸಿದ್ದಾರೆ, ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಕೆಲವು ದಿನಗಳ ಹಿಂದೆ ಮನೆಗೆ ಫರ್ನಿಚರ್ ತರಿಸಿಕೊಂಡಿದ್ದ ನಟಿಯೊಂದಿಗೆ ಚೆನ್ನಾಗಿ ಮಾತನಾಡಿದ್ದ, ಮನೆಯ ಹಿಂದೆ-ಮುಂದೆ ಗಮನಿಸಿಕೊಂಡಿದ್ದ ವ್ಯಕ್ತಿ ಇನ್ನಿಬ್ಬರನ್ನು ಕರೆದುಕೊಂಡು ಬಂದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

























Discussion about this post